ಅನಿವಾಸಿಗಳಿಗೆ ಕಿರುಕುಳ: ಎನ್‌ಡಬ್ಲುಎಫ್ ಖಂಡನೆ
ಮಂಗಳೂರು, ಮೇ 14 : ಕೋವಿಡ್ -19 ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಿದ ಅನಿವಾಸಿಗಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸದೇ ತನ್ನ ಅಸಮರ್ಥತೆಯನ್ನು ಸಾಬೀತು ಪಡಿಸಿದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ದ.ಕ. ಜಿಲ್ಲಾಡಳಿತದ ನಡೆ ಖಂಡನೀಯ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನ ನಿಲ್ದಾಣದಲ್ಲಿ ಸತಾಯಿಸಿದ್ದಲ್ಲದೆ, ಪಾವತಿ ಹೋಂ ಕ್ವಾರಂಟೈಗೆ ಒತ್ತಾಯಿಸಲಾಗಿದೆ. ಸುಮಾರು 40ರಷ್ಟು ಗರ್ಭಿಣಿಯರಿದ್ದರೂ ಕೂಡ ಅವರ ಬಗ್ಗೆ ಜಿಲ್ಲಾಡಳಿತ ಹೆಚ್ಚು ನಿಗಾ ವಹಿಸಿಲ್ಲ.ಅನಿವಾಸಿಗಳಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲಾಡಳಿತವು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದೆ.
Next Story





