ಭಟ್ಕಳ ಪುರಸಭೆ, ಜಾಲಿ ಪ.ಪಂ ಕಂಟೇನ್‍ಮೆಂಟ್ ವಲಯ: ಹೆಲ್ಪ್ ಡೆಸ್ಕ್ ಸೇವೆ

ಭಟ್ಕಳ: ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹರಡುತ್ತಿರುವುದರಿಂದ ಈ ಪ್ರದೇಶಗಳ ವ್ಯಾಪ್ತಿಯನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದ್ದು ಇಲ್ಲಿ ಸಾರ್ವಜನಿಕರ ಓಡಾಟವನ್ನು ಸಂಪೂರ್ಣವನ್ನು ನಿರ್ಬಂಧಿಸಲಾಗಿದ್ದು ಸಾರ್ವಜನಿರ ಸಹಾಯಕ್ಕಾಗಿ ಹೆಲ್ಪ್ ಡೆಸ್ಕ್ ಸೇವೆಯನ್ನು ಆರಂಭಿಸಲಾಗಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೀವನಾವಶ್ಯಕ ವಸ್ತುಗಳಾದ ದಿನಸಿ, ಔಷಧಿ, ಹಾಲು, ತರಕಾರಿ ಹಣ್ಣುಗಳು ಪೂರೈಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಆದರೂ ಸಾರ್ವಜನಿಕರಿಗೆ ಕೆಲವು ತುರ್ತು ಸೇವೆಗಳನ್ನು ಪಡೆಯಲು ತೊಂದರೆಯಾಗುತ್ತಿರುವುದನ್ನು ಗಮನಿಸಿದ ತಾಲೂಕಾಡಳಿತವು ಜಾಲಿ ಕ್ರಾಸ್ ಬಳಿ ಮದಿನಾ ಕಾಲನಿ ಸಾರ್ವಜನಿಕರಿಗಾಗಿ ಹೆಲ್ಪ್ ಡೆಸ್ಕ್, ಗುಡ್ ಲಕ್ ರೋಡ್ ಸಾರ್ವಜನಿಕರಿಗಾಗಿ ಗುಡ್ ಲಕ್ ಕ್ರಾಸ್ ಬಳಿ, ಸುಲ್ತಾನ್ ಸ್ಟ್ರೀಟ್, ಮಾರಿಕಟ್ಟಾ, ಹೋವಿನ ಚೌಕ್ ಸಾರ್ವಜನಿಕರಿಗೆ ಹಳೆ ಬಸ್ ನಿಲ್ದಾಣದ ಬಳಿ, ಕೋಗ್ತಿನಗರ ಸಾರ್ವಜನಿಕರಿಗಾಗಿ ಬಂದರ್ ರೋಡ್ 2ನೇ ಕ್ರಾಸ್ ಬಳಿ, ಡಿಪಿ ಕಲೋನಿ ಸಾರ್ವಜನಿಕರಿಗೆ ಶಮ್ಸುದ್ದೀನ್ ವೃತ್ತದ ಬಳಿ ಇರುವ ಹೆಲ್ಪ್ ಡೆಸ್ಕ್ ಸಂಪರ್ಕಿಸಿ ತುರ್ತು ಸೇವೆಯನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.





