ಟ್ರಂಪ್ ಕಾರ್ಯಕ್ರಮದಿಂದ ಕೊರೋನ ಹರಡಿದ್ದಲ್ಲ: ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ
ಮಂಗಳೂರು, ಮೇ 14: ಫೆ.24ರಂದು ಗುಜರಾತ್‌ನಲ್ಲಿ ನಡೆದ ನಮಸ್ತೇ ಟ್ರಂಪ್ ಕಾರ್ಯಕ್ರಮದಿಂದ ಭಾರತದಲ್ಲಿ ಕೊರೋನ ಸೋಂಕು ಹರಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆರೋಪಿಸಿದ್ದಾರೆ. ಆದರೆ ಟ್ರಂಪ್ ಭಾರತಕ್ಕೆ ಬಂದಿದ್ದ ಸಂದರ್ಭ ಅಮೆರಿಕಾದಲ್ಲಿ ಕೇವಲ ಒಂದೇ ಕೊರೋನ ಪ್ರಕರಣ ಪತ್ತೆಯಾಗಿತ್ತು. ಭಾರತದಲ್ಲಿ ಯಾವುದೇ ಪ್ರಕರಣ ಇರಲಿಲ್ಲ. ಹಾಗಾಗಿ ಟ್ರಂಪ್ ಕಾರ್ಯಕ್ರಮದಿಂದಲೇ ಸೋಂಕು ಹರಡಿತ್ತು ಎಂಬ ಆರೋಪ ಹಾಸ್ಯಾಸ್ಪದ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಪ್ರಧಾನಿ ದಿಟ್ಟ ನಿರ್ಧಾರ ಕೈಗೊಂಡು ಲಾಕ್‌ಡೌನ್ ಹೇರಿದ ಪರಿಣಾಮ ಸದ್ಯ ದೇಶದಲ್ಲಿ ಕೊರೋನ ನಿಯಂತ್ರಣದಲ್ಲಿವೆ. ಆದರೆ ಇತರ ದೇಶಗಳು ಕೊರೋನ ಭೀತಿಯಿಂದ ಇನ್ನೂ ಹೊರಬಂದಿಲ್ಲ. ಇದೀಗ ಪ್ರಧಾನಿ ಪ್ರಕಟಿಸಿರುವ 20 ಲಕ್ಷ ಕೋ.ರೂ. ಪ್ಯಾಕೇಜ್ ಬಗ್ಗೆ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, ರಾಮ್‌ದಾಸ್ ಬಂಟ್ವಾಳ್, ವಕ್ತಾರರಾದ ಜಗದೀಶ್ ಶೇಣವ, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.





