ಪದ್ಮಭೂಷಣ ಪುರಸ್ಕೃತ ಪ್ರೊ. ಅನೀಸುಝ್ಝಮಾನ್ ನಿಧನ

ಢಾಕಾ: ಪದ್ಮಭೂಷಣ ಪುರಸ್ಕೃತ , ಬಾಂಗ್ಲಾದೇಶದ ಪ್ರಜೆ ಪ್ರೊಫೆಸರ್ ಅನೀಸುಝ್ಝಮಾನ್ ಗುರುವಾರ ಢಾಕಾದ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎಪ್ರಿಲ್ 27ರಂದು ಅವರು ಅನಾರೋಗ್ಯಕ್ಕೊಳಗಾಗಿದ್ದು, ಕೂಡಲೇ ಅವರನ್ನು ಯುನಿವರ್ಸಲ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಆದರೆ ನಂತರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಾರದ ಕಾರಣ ಅವರನ್ನು ಢಾಕಾದ ಸಿಎಂಎಚ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೂತ್ರಪಿಂಡ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ 83 ವರ್ಷದ ಅನೀಸುಝ್ಝಮಾನ್ ಬಳಲುತ್ತಿದ್ದರು.
ತಮ್ಮ ಅಧ್ಯಯನ ಮತ್ತು ಬರಹಗಳ ಮೂಲಕ ಅನೀಸುಝ್ಝಮಾನ್ ಬಾಂಗ್ಲಾ ಭಾಷೆ ಮತ್ತು ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆ ಸಲ್ಲಿಸಿದ್ದಾರೆ. ಬಾಂಗ್ಲಾ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ಭಾರತ ಸರಕಾರ ಪದ್ಮ ಭೂಷಣ ಪುರಸ್ಕಾರ ನೀಡಿ ಅನೀಸುಝ್ಝಮಾನ್ ರನ್ನು ಗೌರವಿಸಿತ್ತು.
Next Story