Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಬೆಳಿಗ್ಗೆ ಎದ್ದು ಬೆಡ್ ಟೀ...

ಬೆಳಿಗ್ಗೆ ಎದ್ದು ಬೆಡ್ ಟೀ ಕುಡಿಯುತ್ತೀರಾ?: ಮೊದಲು ಅದನ್ನು ಬಿಡಿ!

ಈ ಅಪಾಯಗಳ ಬಗ್ಗೆ ಮಾಹಿತಿ ಇರಲಿ

ವಾರ್ತಾಭಾರತಿವಾರ್ತಾಭಾರತಿ15 May 2020 10:14 AM IST
share
ಬೆಳಿಗ್ಗೆ ಎದ್ದು ಬೆಡ್ ಟೀ ಕುಡಿಯುತ್ತೀರಾ?: ಮೊದಲು ಅದನ್ನು ಬಿಡಿ!

ಶೇ.95ರಷ್ಟು ಭಾರತೀಯರ ಪಾಲಿಗೆ ಚಹಾ ಅಥವಾ ಕಾಫಿ ಸೇವನೆ ಬೆಳಗಿನ ಕಡ್ಡಾಯ ವಿಧಿಯಾಗಿದೆ. ಹೆಚ್ಚಿನ ಜನರಿಗೆ ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಬೆಡ್ ಟೀ ಬೇಕೇ ಬೇಕು. ಕೆಲವರು ಬೆಡ್ ಟೀ ವ್ಯಕ್ತಿಗಳಲ್ಲ,ಆದರೆ ಅವರು ಬೆಳಗಿನ ಚಹಾ ಅಥವಾ ಕಾಫಿ ವ್ಯಕ್ತಿಗಳಾಗಿರುತ್ತಾರೆ,ಅಂದರೆ ಅವರಿಗೆ ದಿನವನ್ನು ಆರಂಭಿಸಲು ಒಂದು ಕಪ್ ಕೆಫೀನ್ ಸೇವನೆಯಾಗಲೇಬೇಕು. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೇ? ಬಹುಶಃ ಅಲ್ಲ. ಬೆಳಿಗ್ಗೆ ಕಾಫಿ ಅಥವಾ ಚಹಾ ಸೇವಿಸುವುದು ತನ್ನದೇ ಆದ ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿರುವುದರಿಂದ ದಿನವನ್ನು ಕಾಫಿ ಅಥವಾ ಚಹಾದಿಂದ ಆರಂಭಿಸುವುದು ಒಳ್ಳೆಯ ಅಭ್ಯಾಸವಲ್ಲ.

ಇದು ನಿಮ್ಮ ರಕ್ತದೊತ್ತಡ,ಹೃದಯ ಬಡಿತ ದರ ಮತ್ತು ಉಸಿರಾಟ ದರ ಇವುಗಳ ಮೇಲೆ ಪರಿಣಾಮ ಬೀರಬಲ್ಲದು. ನಾವು ದಿನವನ್ನು ಕಾಫಿ ಅಥವಾ ಚಹಾದೊಂದಿಗೆ ಏಕೆ ಆರಂಭಿಸಬಾರದು ಎನ್ನುವುದಕ್ಕೆ ಕಾರಣಗಳಿವೆ. ಇವೆರಡೂ ಪೇಯಗಳಲ್ಲಿರುವ ಪ್ರಮುಖ ಪ್ರಚೋದಕ ಕೆಫೀನ್ ನೀವು ಸಂಪೂರ್ಣ ಜಾಗ್ರತಾವಸ್ಥೆಗೆ ಬರಲು ನೆರವಾಗಬಹುದು,ಆದರೆ ದೀರ್ಘಾವಧಿಯಲ್ಲಿ ಅದು ನಿಮ್ಮ ಆರೋಗ್ಯಕ್ಕೆ ಕೆಡುಕನ್ನುಂಟು ಮಾಡುತ್ತದೆ. ಚಹಾ ಅಥವಾ ಕಾಫಿ ಸೇವನೆಯಿಂದ ದಿನವನ್ನು ಆರಂಭಿಸುವುದರ ಕೆಡುಕುಗಳು:

* ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಚಹಾ ಅಥವಾ ಕಾಫಿಯಲ್ಲಿನ ಪ್ರಚೋದಕಗಳು ನಿಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಜೀವಕೋಶಗಳಿಗೆ ಶೂನ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಇದೇ ಕಾರಣದಿಂದ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಚಹಾ ಸೇವಿಸುವುದು ಹಾನಿಕಾರಕವಾಗಿದೆ. ಜೊತೆಗೆ ಬೆಳಿಗ್ಗೆ ಚಹಾ ಸೇವನೆಯೊಂದಿಗೆ ಏಳುವುದು ಶರೀರದಲ್ಲಿಯ ಆಮ್ಲ-ಕ್ಷಾರ ಸಮತೋಲನವನ್ನು ಕೆಡಿಸುವ ಮೂಲಕ ವಾಕರಿಕೆಯನ್ನುಂಟು ಮಾಡಬಲ್ಲದು.

* ಅತಿಯಾಗಿ ತಿನ್ನುವಿಕೆಗೆ ಕಾರಣವಾಗುತ್ತದೆ ಚಹಾ ಮತ್ತು ಕಾಫಿ ನಿಮ್ಮ ಹಸಿವನ್ನು ಕಡಿಮೆಗೊಳಿಸುತ್ತವೆ. ಅವುಗಳ ಸೇವನೆಯ ಬಳಿಕ ತುಂಬ ಹೊತ್ತಿನವರೆಗೆ ಹಸಿವು ಅನಿಸುವುದಿಲ್ಲ. ಆದರೆ ತುಂಬ ಹೊತ್ತು ಹಸಿದಿರುವುದು ಬೆಳಗಿನ ಸಮಯದಲ್ಲಿ ಭಾರೀ ಕ್ಯಾಲರಿ ಕೊರತೆಗೆ ಕಾರಣವಾಗುತ್ತದೆ ಮತ್ತು ನಂತರ ಅತಿಯಾಗಿ ಆಹಾರ ಸೇವಿಸುವಂತೆ ಮಾಡುತ್ತದೆ.

*ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಬೆಳಗಿನ ಚಹಾ ಅಥವಾ ಕಾಫಿ ಸೇವನೆ ಹಸಿವನ್ನು ತಗ್ಗಿಸುತ್ತದೆ ಅಥವಾ ಅಂತ್ಯಗೊಳಿಸುತ್ತದೆ,ಇದರಿಂದಾಗಿ ಏನನ್ನಾದರೂ ತಿನ್ನಬೇಕು ಎಂದು ಅನಿಸುವುದಿಲ್ಲ. ಇದು ಚಯಾಪಚಯವನ್ನು ಮತ್ತು ಜೀರ್ಣಾಂಗವನ್ನು ನಿಧಾನಗೊಳಿಸುತ್ತದೆ. ಆರೋಗ್ಯಕರ ಬ್ರೆಕ್‌ಫಾಸ್ಟ್ ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸುತ್ತದೆ.

* ಗ್ಯಾಸ್ಟ್ರಿಕ್ ಸಮಸ್ಯೆಗಳು ಚಹಾ ಮತ್ತು ಕಾಫಿ ಎರಡೂ ಕೆಫೀನ್ ಒಳಗೊಂಡಿರುವುದರಿಂದ ಇವುಗಳ ಸೇವನೆಯೊಂದಿಗೆ ದಿನವನ್ನು ಆರಂಭಿಸುವುದು ಗ್ಯಾಸ್ಟ್ರಿಕ್ ತೊಂದರೆಗಳಿಗೆ ಕಾರಣವಾಗುತ್ತದೆ. ಖಾಲಿಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದು ಗ್ಯಾಸ್ಟ್ರಿಕ್ ಕೋಶಗಳನ್ನು ಉತ್ತೇಜಿಸುವ ಮೂಲಕ ಎದೆಯುರಿ ಮತ್ತು ಆ್ಯಸಿಡಿಟಿಯನ್ನುಂಟು ಮಾಡುತ್ತದೆ.

* ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ. ಚಹಾದಲ್ಲಿರುವ ಟ್ಯಾನಿನ್ ಶರೀರವು ಕಬ್ಬಿಣವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ಚಹಾ ಅಥವಾ ಕಾಫಿ ಜನರನ್ನು ಚೈತನ್ಯಯುರನ್ನಾಗಿಸುತ್ತದೆ ಎಂದು ಕಂಡುಬಂದರೂ ಅದು ನಮ್ಮ ಶರೀರದಲ್ಲಿಯ ಜೈವಿಕ ಗಡಿಯಾರಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಅಹಿತಕ್ಕೆ ಕಾರಣವಾಗುತ್ತದೆ. ಬೆಡ್ ಟೀ ಅಥವಾ ಬೆಡ್ ಕಾಫಿ ಸೇವನೆಯೊಂದಿಗೆ ಗುರುತಿಸಿಕೊಂಡಿರುವ ಈ ತೊಂದರೆಗಳ ಬಗ್ಗೆ ತಿಳಿದ ನಂತರ ನೀವು ಖಂಡಿತವಾಗಿಯೂ ಈ ಅಭ್ಯಾಸವನ್ನು ನಿಲ್ಲಿಸಬೇಕು. ಹೊಟ್ಟೆ ತುಂಬ ಆಹಾರ ಸೇವಿಸಿದ ಬಳಿಕ ನೀವು ಕೆಫೀನ್‌ಯುಕ್ತ ಪೇಯವನ್ನು ಕುಡಿದರೆ ಹೆಚ್ಚು ತೊಂದರೆಯಾಗುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X