ವಿಷ ಪ್ರಾಶನದಿಂದ 62 ಕುರಿಗಳು ಸಾವು
ಗದಗ, ಮೇ 15: ವಿಷ ಪ್ರಾಶನದಿಂದ 62 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜೇಂಡ್ರಗಡ ತಾಲೂಕಿನ ನರೇಗಲ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ಕುರಿಗಳು ಬಳ್ಳಾರಿ ಜಿಲ್ಲೆಯ ಸಿದ್ದಪ್ಪ ಪೂಜಾರಿ, ದೇವರಾಜ್, ಅಜಿತ್ ಎಂಬುವವರಿಗೆ ಸೇರಿದ್ದು, ಜೋಳದ ಚಿಗುರು ತಿಂದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ನರೇಗಲ್ ಪಶು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕುರಿಗಳನ್ನು ಬಾಗಲಕೋಟೆ ಪಶು ಸಂಗೋಪನಾ ಮತ್ತು ಜೈವಿಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
Next Story





