ಸ್ಲೊವೇನಿಯ ಕೊರೋನ ಮುಕ್ತಗೊಂಡ ಯುರೋಪ್‌ನ ಮೊದಲ ದೇಶ

ಲ್ಯುಬ್ಲಿಜನ (ಸ್ಲೊವೇನಿಯ), ಮೇ 15: ತಾನು ಕೊರೋನ ವೈರಸ್ ಸಾಂಕ್ರಾಮಿಕದಿಂದ ಮುಕ್ತವಾಗಿದ್ದೇನೆ ಎಂದು ಸ್ಲೊವೇನಿಯ ಶುಕ್ರವಾರ ಘೋಷಿಸಿದೆ ಹಾಗೂ ತನ್ನ ಗಡಿಗಳನ್ನು ತೆರೆದಿದೆ. ಅದು ಈ ಘೋಷಣೆ ಹೊರಡಿಸಿದ ಮೊದಲ ಯುರೋಪ್ ದೇಶವಾಗಿದೆ. ಆದರೆ, ಅಲ್ಲಿ ಈಗಲೂ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎನ್ನಲಾಗಿದೆ.
ಇಂದು ಸಾಂಕ್ರಾಮಿಕದ ಸ್ಥಿತಿಗತಿಯಲ್ಲಿ ಸ್ಲೊವೇನಿಯ ಯುರೋಪ್‌ನಲ್ಲೇ ಅತ್ಯುತ್ತಮ ಸ್ಥಿತಿಯಲ್ಲಿದೆ. ಹಾಗಾಗಿ, ನಾವು ಸಾಂಕ್ರಾಮಿಕದಿಂದ ಮುಕ್ತವಾಗಿದ್ದೇವೆ ಎಂಬುದಾಗಿ ಘೋಷಿಸಲು ನಮಗೆ ಸಾಧ್ಯವಾಗಿದೆ ಎಂದು ಸ್ಲೊವೇನಿಯ ಪ್ರಧಾನಿ ಜನೇಝ್ ಜಾನ್ಸ ಹೇಳಿದರು.
ದೇಶದಲ್ಲಿ ಎರಡು ತಿಂಗಳ ಹಿಂದೆ ಸಾಂಕ್ರಾಮಿಕದ ಇರುವಿಕೆಯ ಬಗ್ಗೆ ಘೋಷಣೆ ಮಾಡಲಾಗಿತ್ತು.
ಇಟಲಿಯೊಂದಿಗೆ ಗಡಿ ಹೊಂದಿರುವ, 20 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಗುಡ್ಡಗಾಡು ದೇಶದಲ್ಲಿ ಗುರುವಾರದವರೆಗೆ ಸುಮಾರು 1,500 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 103 ಸಾವುಗಳು ಸಂಭವಿಸಿವೆ.
Next Story





