ಶಿರೂರು ತಪಾಸಣಾ-ಕ್ವಾರಂಟೈನ್ ಕೇಂದ್ರಗಳಿಗೆ ಸಚಿವ ಕೋಟ ಭೇಟಿ

ಉಡುಪಿ, ಮೇ 16: ಬೈಂದೂರು ವ್ಯಾಪ್ತಿಯ ವಿವಿಧ ಕ್ವಾರಂಟೈನ್ ಕೇಂದ್ರ ಹಾಗೂ ಮುಂಬೈ ಮತ್ತು ಹೊರರಾಜ್ಯದಿಂದ ಆಗಮಿಸುವವರನ್ನು ತಪಾಸಣೆ ನಡೆಸುತ್ತಿರುವ ಶಿರೂರು ಗಡಿಭಾಗಕ್ಕೆ ರಾಜ್ಯ ಬಂದರು ಮತ್ತು ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಜಿಲ್ಲೆಗೆ ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಸುಮಾರು 4500ಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. 100ಕ್ಕೂ ಅಧಿಕ ಕ್ವಾರಂಟೈನ್ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೆಲವೊಂದು ತೊಂದರೆ ಹೊರತು ಪಡಿಸಿದರೆ ಎಲ್ಲ ಕೇಂದ್ರ ಗಳಲ್ಲಿ ಉತ್ತಮ ವ್ಯವಸ್ಥೆ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದರು.
ಸುರಕ್ಷಿತ ಅಂತರ ಕಾಪಾಡುವ ಸಮಸ್ಯೆಯಿಂದಾಗಿ ಸದ್ಯಕ್ಕೆ ದೇವಸ್ಥಾನಗಳಿಗೆ ಭಕ್ತರಿಗೆ ಭೇಟಿಯ ಅವಕಾಶ ನೀಡಿಲ್ಲ. ಕೊರೋನ ನಿಯಂತ್ರಣ ದಲ್ಲಿ ಪ್ರತಿ ಯೊಬ್ಬರ ಜವಾಬ್ದಾರಿಯಿದೆ. ಇಲಾಖೆಯೊಂದಿಗೆ ಎಲ್ಲರು ಕೈ ಜೋಡಿಸೇಕು ಎಂದು ಸಚಿವರು ಹೇಳಿದರು.
ಈ ಸಂಧರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಾಜು, ಜಿಪಂ ಸದಸ್ಯರಾದ ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಪುಷ್ಪರಾಜ ಶೆಟ್ಟಿ, ತಹಶೀಲ್ದಾರ ಬಸಪ್ಪ ಪೂಜಾರ್ ಮೊದಲಾದವರು ಉಪಸ್ಥಿತರಿದ್ದರು.







