ಬೇಡಿಕೆಗೆ ಸ್ಪಂದಿಸದಿದ್ದರೆ ಸನ್ನದು ಶುಲ್ಕ ಪಾವತಿಸಲ್ಲ: ವೈನ್ ಮರ್ಚೆಂಟ್ಸ್
ಉಡುಪಿ, ಮೇ 16: ಎಂಆರ್‌ಪಿ ದರದಲ್ಲಿ ಪಾರ್ಸೆಲ್ ಮೂಲಕ ಮದ್ಯ ಮಾರಾಟ ಮಾಡುತ್ತಿರುವ ಬಾರ್, ಕ್ಲಬ್, ಲಾಡ್ಜ್‌ಗಳಲ್ಲಿ ಲಾಕ್‌ಡೌನ್ ಮುಗಿ ಯುವವರೆಗೆ ಹೊಸದಾಗಿ ಮದ್ಯ ಖರೀದಿಗೆ ಮತ್ತು ಮೂಲ ಸ್ವರೂಪದಲ್ಲಿ ವ್ಯವಹಾರ ನಡೆಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ ಸನ್ನದು ಶುಲ್ಕವನ್ನು ಪಾವತಿ ಮಾಡುವುದಿಲ್ಲ ಎಂದು ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿ ಯೇಶನ್ ಅಧ್ಯಕ್ಷ ಗೋವಿಂದ ರಾಜ್ ಹೆಗ್ಡೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಲಾಕ್‌ಡೌನ್‌ನಿಂದ ಸನ್ನದುದಾರರು ತೊಂದರೆಗೆ ಒಳಗಾಗಿದ್ದು, ಕನಿಷ್ಠ ಒಂದು ತಿಂಗಳ ಸನ್ನದು ಶುಲ್ಕವನ್ನು ಮುಂದಿನ ವರ್ಷದ ಸನ್ನದು ಶುಲ್ಕ ದೊಂದಿಗೆ ಹೊಂದಾಣಿಕೆ ಮಾಡಬೇಕು. 2020-21ನೆ ಸಾಲಿನ ಸನ್ನದು ಶುಲ್ಕ ವನ್ನು ಕಟ್ಟಲು ನಾಲ್ಕು ಕಂತುಗಳನ್ನು ನೀಡಬೇಕು. ವಿದ್ಯುತ್ ಬಿಲ್ ಪಾವತಿ ಯಲ್ಲಿ ರಿಯಾಯಿತಿ ನೀಡುವ ಬಗ್ಗೆ ಸಂಬಂಧಪಟ್ಟವರಿಗೆ ನಿರ್ದೇನ ನೀಡಬೇಕು ಎಂದು ಹೇಳಿದರು.
ಲಾಕ್‌ಡೌನ್‌ನಿಂದ ಅನುತ್ಪಾದಕತೆ ಇರುವುದರಿಂದ ಬ್ಯಾಂಕ್ ಸಾಲದ ಕಂತು ಮತ್ತು ಬಡ್ಡಿ ಮನ್ನಾ ಮಾಡಬೇಕು. ಆಸ್ತಿ ತೆರಿಗೆ/ಕಟ್ಟಡ ತೆರಿಗೆಗಳಲ್ಲಿ ರಿಯಾ ಯಿತಿ ನೀಡಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು. ಸ್ಥಳೀಯಾಡಳಿತ ಸಂಸ್ಥೆಗಳು ರೆಸ್ಟೋರೆಂಟ್‌ಗಳಿಗೆ ನೀಡುವ ಪರವಾನಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ. ಜಿಲ್ಲಾ ಉಪಾಧ್ಯಕ್ಷ ಡೆರಿಕ್ ಡಿಸೋಜ, ಉಡುಪಿ ತಾಲೂಕು ಅಧ್ಯಕ್ಷ ಮಿಥುನ್ ಹೆಗ್ಡೆ, ಕಾರ್ಕಳ ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ, ಕುಂದಾಪುರ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.







