ನೆದರ್‌ಲ್ಯಾಂಡ್ಸ್: ನಾಯಿ, 3 ಬೆಕ್ಕುಗಳಲ್ಲಿ ಕೊರೋನ ವೈರಸ್

ದ ಹೇಗ್ (ನೆದರ್‌ಲ್ಯಾಂಡ್ಸ್), ಮೇ 16: ನೆದರ್‌ಲ್ಯಾಂಡ್ಸ್‌ನಲ್ಲಿ ಒಂದು ನಾಯಿ ಮತ್ತು ಮೂರು ಬೆಕ್ಕುಗಳಲ್ಲಿ ನೋವೆಲ್-ಕೊರೋನ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಸಾಂಕ್ರಾಮಿಕವು ಮನುಷ್ಯರಿಗೆ ಪ್ರಾಣಿಗಳಿಂದ ಹರಡುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
8 ವರ್ಷ ಪ್ರಾಯದ ಬುಲ್‌ಡಾಗ್ ಕೋವಿಡ್-19 ರೋಗಿಗೆ ಸೇರಿದ್ದಾಗಿದೆ. ಅದು ತನ್ನ ಒಡೆಯನಿಂದ ರೋಗವನ್ನು ಪಡೆದುಕೊಂಡಿದೆ ಎಂದು ನಂಬಲಾಗಿದೆ ಎಂದು ಡಚ್ ಕೃಷಿ ಸಚಿವೆ ಕ್ಯಾರಲಾ ಶೌಟಿನ್ ಹೇಳಿದರು.
ಸೋಂಕಿಗೊಳಗಾದ ಮೂರು ಬೆಕ್ಕುಗಳು ಮಿಂಕ್ (ನೀರು ನಾಯಿಯನ್ನು ಹೋಲುವ ಒಂದು ಜಾತಿಯ ಸಸ್ತನಿ ಪ್ರಾಣಿ) ಫಾರ್ಮ್‌ನಲ್ಲಿ ಪತ್ತೆಯಾಗಿದ್ದವು. ಆ ಫಾರ್ಮ್‌ನಲ್ಲಿನ ಮಿಂಕ್‌ಗಳಲ್ಲಿ ಕೊರೋನ ವೈರಸ್ ಇತ್ತು.
ಈ ಎಲ್ಲ ಪ್ರಕರಣಗಳಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ಹರಡುವುದನ್ನು ನಾವು ನೋಡಿಲ್ಲ. ಆದರೆ, ಮನುಷ್ಯರಿಂದ ಪ್ರಾಣಿಗಳಿಗೆ ಹರಡಿದೆ ಎಂದು ಶೌಟಿನ್ ಹೇಳಿರುವುದಾಗಿ ಡಚ್ ಎಎನ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story







