ಮೇ 18: ಬ್ಯಾಂಕ್‌ಗಳ ಸಮೀಕ್ಷಾ ಸಭೆ
ಮಂಗಳೂರು, ಮೇ 16: ಸಂಸದ ನಳಿನ್ ಕುಮಾರ್ ಕಟೀಲ್ ಮೇ 18ರಂದು ಬೆಳಗ್ಗೆ 10:30ಕ್ಕೆ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ಬ್ಯಾಂಕರ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಭೆ ನಡೆಸಲಿದ್ದಾರೆ.
ಮುದ್ರಾ ಸಾಲ ಯೋಜನೆಯಡಿ ಸಾಧನೆ, ಎಂ.ಎಸ್.ಎಂ.ಇ ಮತ್ತು ಸರಕಾರಿ ಪ್ರಾಯೋಜಿತ ಯೋಜನೆಗಳಡಿ ಕಾರ್ಯಕ್ಷಮತೆ, ಪಿ.ಎಂ.ಜೆ.ಡಿ.ವೈ ಯೋಜನೆಯಡಿ ಸಾಧನೆ, ಪ್ರಧಾನ ಮಂತ್ರಿ ಸಾಮಾಜಿಕ ಕಲ್ಯಾಣ ಯೋಜನೆಯಡಿ ಸಾಧನೆ, ಲಾಕ್‌ಡೌನ್ ಅವಧಿಯಲ್ಲಿ ಹಣಕಾಸಿನ ನೆರವು ವಿಸ್ತರಣೆ, ಮೀನುಗಾರಿಕೆ ಸಾಲ ಮನ್ನಾ ಯೋಜನೆಯಡಿ ಪ್ರಗತಿ ಮತ್ತಿತರ ವಿಷಯಗಳ ಬಗ್ಗೆ ಸಭೆ ನಡೆಯಲಿದೆ.
Next Story





