ಅಡ್ಡೂರು : ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಗುರುಪುರ, ಮೇ 16: ಅಡ್ಡೂರಿಗೆ ಸಮೀಪದ ಪಲ್ಲನೆಲ ಎಂಬಲ್ಲಿ ಶನಿವಾರ ಮುಂಜಾನೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಸುಮಾರು ಏಳು ಲಕ್ಷ ರೂ. ಮೌಲ್ಯದ 21 ಪವನ್ ಚಿನ್ನಾಭರಣ ಕಳವು ಮಾಡಿದ್ದಾರೆ.
ಅಹ್ಮದ್ ಬಾವ ಎಂಬವರ ಮನೆಯ ಕಿಟಕಿಯ ಸರಳು ಬಗ್ಗಿಸಿ ಮನೆಯೊಳಗೆ ಪ್ರವೇಶಿಸಿದ ಕಳ್ಳರು ಚಿನ್ನಾಭರಣ ಕಳವುಗೈದಿದ್ದಾರೆ. ಈ ಸಂದರ್ಭ ಅಹ್ಮದ್ ಬಾವಾ ಮತ್ತಿತರರಯ ಕುಳವೂರಿನಲ್ಲಿರುವ ಪುತ್ರನ ಮನೆಗೆ ಹೋಗಿದ್ದರು. ಬೆಳಗ್ಗೆ ಮನೆಗೆ ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಅಹ್ಮದ್ ಬಾವ ನೀಡಿದ ದೂರಿನ ಮೇರೆಗೆ ಬಜ್ಪೆಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





