ತಾಯಿಗೆ ಕೊರೋನ ವೈರಸ್ ಸೋಂಕು: ನಟ ಸತ್ಯಜೀತ ದುಬೆ ಮತ್ತು ಸೋದರಿ ಐಸೊಲೇಷನ್ನಲ್ಲಿ
ಮುಂಬೈ, ಮೇ 17: ತಾಯಿಗೆ ಕೊರೊನ ವೈರಸ್ ಸೋಂಕು ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸತ್ಯಜೀತ ದುಬೆ ಅವರು ತನ್ನ ಸೋದರಿಯೊಂದಿಗೆ ತನ್ನ ನಿವಾಸದಲ್ಲಿ ಐಸೊಲೇಷನ್ಗೆ ಒಳಗಾಗಿದ್ದಾರೆ.
‘ತೀವ್ರ ತಲೆನೋವು,ತೀವ್ರ ಜ್ವರ ಮತ್ತು ಮೈಕೈ ನೋವಿನೊಂದಿಗೆ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ನನ್ನ ತಾಯಿಯನ್ನು ಕೊರೋನ ವೈರಸ್ ಪರೀಕ್ಷೆಗೊಳಪಡಿಸಿದ್ದು, ಗುರುವಾರ ಪಾಸಿಟಿವ್ ವರದಿ ಬಂದಿತ್ತು. ಅವರನ್ನು ಐಸೊಲೇಷನ್ ವಾರ್ಡ್ನಲ್ಲಿ ನಿರೀಕ್ಷಣೆಯಲ್ಲಿರಿಸಲಾ ಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ನಾನು ಮತ್ತು ಸೋದರಿ ನಮ್ಮ ಮನೆಯಲ್ಲಿ ಐಸೊಲೇಷನ್ನಲ್ಲಿದ್ದು,ನಮ್ಮಲ್ಲಿ ಯಾವುದೇ ಲಕ್ಷಣಗಳಿಲ್ಲ. ನನ್ನ ತಾಯಿಯಲ್ಲಿಯೂ ಕೋವಿಡ್-19ನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ ’ಎಂದು ಇತ್ತೀಚಿಗೆ ‘ಪ್ರಸ್ಥಾನಂ’ಚಿತ್ರದಲ್ಲಿ ಸಂಜಯ ದತ್ ಅವರೊಂದಿಗೆ ನಟಿಸಿರುವ ದುಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story