ಬಸ್ ನಿಲ್ದಾಣದಲ್ಲಿ ಕೊರೋನ ಸೋಂಕಿತ ವ್ಯಕ್ತಿಯ ಮೃತದೇಹ ಪತ್ತೆ !
ಹೊಸದಿಲ್ಲಿ: ಕೊರೋನ ವೈರಸ್ ಸೋಂಕಿತ ವ್ಯಕ್ತಿಯೊಬ್ಬರ ಮೃತದೇಹ ಬಸ್ ನಿಲ್ದಾಣವೊಂದರಲ್ಲಿ ಪತ್ತೆಯಾದ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಮೇ 10ರಂದು 67 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೋನ ವರದಿ ಪಾಸಿಟಿವ್ ಎಂದು ಬಂದಿತ್ತು. “ಮೇ 15ರಂದು ನಿಮ್ಮ ತಂದೆಯ ಮೃತದೇಹ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರಿಂದ ಕರೆ ಬಂತು” ಎಂದು ವ್ಯಕ್ತಿಯ ಪುತ್ರ ತಿಳಿಸಿದ್ದಾರೆ.
“ರೋಗಿಗೆ ಅಲ್ಪ ಲಕ್ಷಣಗಳಿದ್ದವು. ಹೊಸ ಮಾರ್ಗಸೂಚಿಗಳ ಪ್ರಕಾರ ನಾವು ಹೋಮ್ ಕ್ವಾರಂಟೈನ್ ನಲ್ಲಿರುವಂತೆ ತಿಳಿಸಲಾಗಿತ್ತು. ಮೇ 14ರಂದು ಅವರು ಬಿಡುಗಡೆಯಾಗಿದ್ದರು. ಆ ಸಂದರ್ಭ ಅವರು ಆರೋಗ್ಯದಿಂದಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅವರು ಬಸ್ ನಿಲ್ದಾಣಕ್ಕೆ ಬಂದದ್ದು ಹೇಗೆ?, ಆಸ್ಪತ್ರೆಯಿಂದ ಬಿಡುಗಡೆಯಾದಾಗ ಕುಟುಂಬಕ್ಕೆ ಯಾಕೆ ಮಾಹಿತಿ ನೀಡಿಲ್ಲ ಎನ್ನುವ ಬಗ್ಗೆ ಸಂಶಯಗಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story