Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪಾದರಾಯನಪುರ ಪ್ರಕರಣದ ಹಿಂದಿರುವ ವೈರಸ್...

ಪಾದರಾಯನಪುರ ಪ್ರಕರಣದ ಹಿಂದಿರುವ ವೈರಸ್ ಯಾವುದು?

ವಾರ್ತಾಭಾರತಿವಾರ್ತಾಭಾರತಿ18 May 2020 12:10 AM IST
share
ಪಾದರಾಯನಪುರ ಪ್ರಕರಣದ ಹಿಂದಿರುವ ವೈರಸ್ ಯಾವುದು?

ಇತ್ತೀಚೆಗೆ ಕರ್ನಾಟಕದಲ್ಲಿ ‘ಪಾದರಾಯನಪುರ’ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಕ್ವಾರಂಟೈನ್‌ಗೆ ಈ ಪ್ರದೇಶದ ಜನರು ನಿರಾಕರಿಸಿದರೆಂದು, ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ದೌರ್ಜನ್ಯ ನಡೆಸಿದರೆಂದು ಟಿವಿ ಮಾಧ್ಯಮಗಳು ಒಂದಿಡೀ ದಿನ ಗದ್ದಲ ಎಬ್ಬಿಸಿದವು. ಈ ಪ್ರದೇಶದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕಾರ್ಮಿಕರೇ ದೊಡ್ಡ ಸಂಖ್ಯೆಯಲ್ಲಿರುವುದರಿಂದ ಪಾದರಾಯನ ಪುರ ಪ್ರಕರಣಕ್ಕೆ ಮಾಧ್ಯಮಗಳು ಧರ್ಮ ಲೇಪವನ್ನು ನೀಡಿದರು. ‘ತಬ್ಲೀಗಿ ವೈರಸ್’ನ್ನು ಸಂಶೋಧಿಸಿದ ಮಾಧ್ಯಮಗಳೇ, ಕರ್ನಾಟಕದಲ್ಲಿ ‘ಪಾದರಾಯನ ಪುರ ವೈರಸ್’ನ್ನು ಸೃಷ್ಟಿಸಲು ಗರಿಷ್ಠ ಪ್ರಯತ್ನ ನಡೆಸಿ ವಿಫಲವಾದವು. ಆದರೂ ಮಾಧ್ಯಮಗಳು ಅದಾಗಲೇ, ಪಾದರಾಯನ ಪುರದಲ್ಲಿರುವ ಮುಸ್ಲಿಮರು ಕ್ವಾರಂಟೈನ್‌ಗೆ ಸಹಕರಿಸುತ್ತಿಲ್ಲ ಎನ್ನುವ ವದಂತಿಯನ್ನು ಹರಡುವಲ್ಲಿ ಬಹುತೇಕ ಯಶಸ್ವಿಯಾದವು. ಮಾಧ್ಯಮಗಳು ಹರಡಿರುವ ಸುದ್ದಿಗಳನ್ನು ನಂಬಿ ಚಿಂತಕರು, ಪ್ರಗತಿಪರರು ಎಂದು ಗುರುತಿಸಿಕೊಂಡವರೇ, ನಾಡಿನ ಮುಸ್ಲಿಮರಿಗೆ ‘ಉಪನ್ಯಾಸ’ಗಳನ್ನು ನೀಡ ತೊಡಗಿದರು. ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಕಾರ್ಮಿಕರು ವ್ಯವಸ್ಥೆಯ ವಿರುದ್ಧ ಸಂಘರ್ಷ ನಡೆಸುತ್ತಿರುವುದು ಸುದ್ದಿಯಾಗುತ್ತಿದ್ದರೂ, ಪಾದರಾಯನ ಪುರದಲ್ಲಿ ಮಾತ್ರ ಆ ಕಾರ್ಮಿಕರ ಸಂಕಷ್ಟಗಳಿಗೆ ಗಡ್ಡ ಮತ್ತು ಟೊಪ್ಪಿಯನ್ನು ತೊಡಿಸಲಾಯಿತು. ಇದೀಗ ಪಾದರಾಯನ ಪುರದಲ್ಲಿ ನಿಜಕ್ಕೂ ನಡೆದಿರುವುದೇನು? ಅಲ್ಲಿನ ಕಾರ್ಮಿಕರು ಯಾಕೆ ಸಿಬ್ಬಂದಿಯ ಜೊತೆಗೆ ಅಸಹಕರಿಸಿದರು? ಪೊಲೀಸರ ಮೇಲೆ ಹಲ್ಲೆ ನಡೆದಿದೆಯೆ? ಎಂಬಿತ್ಯಾದಿ ವಿವರಗಳನ್ನು ಸ್ವರಾಜ್ ಅಭಿಯಾನ್ ಮತ್ತು ಆಲ್ ಇಂಡಿಯಾ ಪೀಪಲ್ಸ್ ಫೋರಂ ತನಿಖೆ ನಡೆಸಿ ವರದಿಯೊಂದನ್ನು ನಾಡಿನ ಮುಂದಿಟ್ಟಿದೆ. ದೇಶಾದ್ಯಂತ ಕಾರ್ಮಿಕರ ಅಸಹಾಯಕತೆ, ಹತಾಶೆಯ ಮುಂದುವರಿದ ಭಾಗವಾಗಿದೆ ‘ಪಾದರಾಯನ ಪುರ ಪ್ರಕರಣ’ ಎನ್ನುವುದನ್ನು ಈ ವರದಿ ಸವಿವರವಾಗಿ ತೆರೆದಿಟ್ಟಿದೆ.

 ಸರಕಾರಿ ಸಿಬ್ಬಂದಿಯ ಒಟ್ಟು ವರ್ತನೆಯನ್ನು ಗಮನಿಸಿದಾಗ ಅವರಲ್ಲಿ, ಪಾದರಾಯನ ಪುರದ ಕಾರ್ಮಿಕರನ್ನು ಪ್ರಚೋದಿಸುವ ಉದ್ದೇಶವಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಪಾದರಾಯನಪುರದಲ್ಲಿ 37, 599ರಷ್ಟು ಜನಸಂಖ್ಯೆಯಿದ್ದು, 7,273 ಕುಟುಂಬಗಳಿಗೆ ಕೇವಲ ಒಂದು ಸಾರ್ವಜನಿಕ ಶೌಚಾಲಯವಿದೆ. ಇಲ್ಲಿ ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇದು ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ದಿನಗೂಲಿ ಕೆಲಸಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೀಡಿ ಸುತ್ತುವ, ಬ್ಯಾಗುಗಳನ್ನು ಹೊಲಿಯುವ, ಊದುಬತ್ತಿ ಹೊಸೆಯುವಂತಹ ಅಸಂಘಟಿತ ವಲಯದ ಕೆಲಸಗಳನ್ನೇ ಇವರು ನೆಚ್ಚಿಕೊಂಡಿದ್ದಾರೆ. ಇಂತಹ ಕಾರ್ಮಿಕರ ಮೇಲೆ ಲಾಕ್‌ಡೌನ್ ತೀವ್ರ ತರವಾದ ಪರಿಣಾಮವನ್ನು ಬೀರಿದೆ. ಒಂದೆಡೆ ದುಡಿಯುವುದಕ್ಕೆ ಕೆಲಸವಿಲ್ಲ, ಮಗದೊಂದೆಡೆ ಒಂದು ಹೊತ್ತಿನ ಆಹಾರಕ್ಕೂ ಗತಿಯಿಲ್ಲ. ಇವರ ಅಸಹಾಯಕ ಸ್ಥಿತಿಯನ್ನು ವಿಚಾರಿಸಲು ಯಾವನೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಇದೇ ಸಂದರ್ಭದಲ್ಲಿ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ಜೊತೆಗೆ ನೂರಾರು ಜನರನು ಅನಾಮತ್ತಾಗಿ ಪೊಲೀಸರು ಎತ್ತಿಕೊಂಡು ಹೋಗಲಿದ್ದಾರೆ ಎನ್ನುವ ವದಂತಿ ಹರಡತೊಡಗಿತ್ತು. ಒಂದೆಡೆ ಹಸಿವು, ಮಗದೊಂದೆಡೆ ಮನೆಯ ದುಡಿಯುವ ಸದಸ್ಯರನ್ನು ಎತ್ತಿಕೊಂಡು ಹೋದರೆ ಉಳಿದವರ ಗತಿಯೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಭಯಾನಕವಾಗಿ ಕಾಡತೊಡಗಿತ್ತು. ಅದಾಗಲೇ ‘ತಬ್ಲೀಗಿ’ ಹೆಸರಲ್ಲಿ ಮುಸ್ಲಿಮರನ್ನು ಬಲಿಪಶು ಮಾಡಲಾಗಿತ್ತು. ಈಗ ತಮ್ನನ್ನೂ ಅದೇ ರೀತಿಯಲ್ಲಿ ಬಲಿಪಶು ಮಾಡಲಾಗುತ್ತದೆ ಎಂದು ಈ ಕಾರ್ಮಿಕ ಕುಟುಂಬಗಳು ಆತಂಕಗೊಂಡಿದ್ದವು. ಪರಿಸ್ಥಿತಿ ಹದಗೆಡುತ್ತದೆ ಎನ್ನುವ ಎಲ್ಲ ಪೂರ್ವಸೂಚನೆಗಳು ಸರಕಾರಿ ಸಿಬ್ಬಂದಿಗೆ ಇದ್ದರೂ ಅವರು ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಜನರ ಜೊತೆಗೆ ಸಂವಹನ ನಡೆಸುವ ಯಾವುದೇ ಪ್ರಯತ್ನ ನಡೆಸಲಿಲ್ಲ. ಶಾಸಕ ಝಮೀರ್ ಅಹಮದ್ ಅವರು ‘‘ಜೊತೆಗೆ ನಾನು ಬರುತ್ತೇನೆ’’ ಎಂದು ಸಿಬ್ಬಂದಿಗೆ ಹೇಳಿದ್ದರು. ಅಷ್ಟೇ ಅಲ್ಲ ‘‘ರಾತ್ರಿ ಹೋಗುವುದು ಸರಿಯಲ್ಲ’’ ಎಂಬ ಸಲಹೆಯನ್ನೂ ನೀಡಿದ್ದರು. ಇವೆಲ್ಲವನ್ನೂ ನಿರಾಕರಿಸಿ ಸಿಬ್ಬಂದಿ ಪೊಲೀಸ್ ಬಲದಿಂದ ರಾತ್ರೋರಾತ್ರಿ ಪಾದರಾಯನ ಪುರಕ್ಕೆ ತೆರಳಿ ‘ಕ್ವಾರಂಟೈನ್’ ಹೆಸರಲ್ಲಿ ಜನರನ್ನು ವಶಕ್ಕೆ ಪಡೆಯುವುದರ ಉದ್ದೇಶವಾದರೂ ಏನಿತ್ತು?

 ಸರಕಾರೇತರ ಸಂಘಟನೆ ತಾನು ನಡೆಸಿದ ಅಧ್ಯಯನವನ್ನು ಮುಂದಿಟ್ಟು ಸರಕಾರಕ್ಕೆ ಏಳು ಪ್ರಶ್ನೆಗಳನ್ನು ಕೇಳಿದೆ. ಅದರಲ್ಲಿ 1. ಎ. 10ರಂದು ಯಾವ ಆಧಾರದ ಮೇಲೆ ಬಾಪೂಜಿ ನಗರ ಮತ್ತು ಪಾದರಾಯನ ಪುರವನ್ನು ಸೀಲ್ ಮಾಡಲಾಯಿತು? 2. ನಿರ್ಬಂಧಿತ ಪ್ರದೇಶವೆಂಬ ಆದೇಶ ಮತ್ತು ಇನ್ಸಿಡೆಂಟ್ ಕಮಾಂಡರ್ ಮತ್ತು ಇನ್ಸಿಡೆಂಟ್ ಕಮಾಂಡ್ ಸೆಂಟರ್ ಸೇರಿದಂತೆ ಸೂಕ್ತ ಮೂಲಸೌಕರ್ಯ ಕಲ್ಪಿಸದೆ ಆ ಪ್ರದೇಶವನ್ನು ಹೇಗೆ ಸೀಲ್ ಮಾಡಲಾಯಿತು? 3. ಒಮ್ಮೆ ಆ ವಾರ್ಡ್‌ಗಳನ್ನು ಸೀಲ್ ಮಾಡಿದ ಮೇಲೆ, ಮನೆ ಬಾಗಿಲಿಗೆ ಆಹಾರವೂ ಸೇರಿದಂತೆ ಅವಶ್ಯಕ ಸೇವೆಗಳನ್ನು ಖಾತ್ರಿ ಪಡಿಸಲು ಬಿಬಿಎಂಪಿ ಯಾವ ಕ್ರಮಗಳನ್ನು ಕೈಗೊಂಡಿತು? 4. ಎ. 10ರಿಂದ ಸೀಲ್ ಆಗಿರುವ ಪ್ರದೇಶದ ಜನರಿಗೆ ಸರಕಾರವು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಭೀತಿ ಮತ್ತು ತಪ್ಪು ಮಾಹಿತಿಯನ್ನು ತಡೆಗಟ್ಟುವುದನ್ನು ಖಾತ್ರಿಪಡಿಸಲು ಕೈಗೊಂಡ ಕ್ರಮಗಳೇನು? 5. ಸಾಂಸ್ಥಿಕ ಸಂಪರ್ಕ ನಿಷೇಧದ ಅಗತ್ಯವನ್ನು ಸ್ಪಷ್ಟವಾಗಿ ಎಲ್ಲ ನಿವಾಸಿಗಳಿಗೆ ತಿಳಿಸಲಾಗಿತ್ತೇ? ಇತರ ಎಲ್ಲ ವಾರ್ಡ್‌ಗಳಲ್ಲಿನ ಸೆಕೆಂಡರಿ ಸಂಪರ್ಕವನ್ನು ನಿಷೇಧಕ್ಕೆ ಒಳಪಡಿಸಲಾಗಿತ್ತೇ? ಹಾಗಿಲ್ಲದಿದ್ದರೆ ಈ ಪ್ರದೇಶದ ಜನರನ್ನು ಮಾತ್ರ ಸಾಂಸ್ಥಿಕ ನಿಷೇಧಕ್ಕೆ ಯಾಕೆ ಒಳಪಡಿಸಲಾಯಿತು? 6. ಪೊಲೀಸ್ ಆಯುಕ್ತರು ಸ್ಪಷ್ಟವಾಗಿ ‘ಪೊಲೀಸರಿಗಾಗಲಿ, ವೈದ್ಯರಿಗಾಗಲಿ, ಆರೋಗ್ಯ ಕಾರ್ಯಕರ್ತರಿಗಾಗಲಿ ಘಟನೆಯಲ್ಲಿ ಹಾನಿಯಾಗಿಲ್ಲ’ ಎಂಬ ಹೇಳಿಕೆ ನೀಡಿದ ಮೇಲೂ ಪೊಲೀಸರು ‘ಪೊಲೀಸರಿಗೆ ಹಾನಿಯಾಗಿದೆ’ ಎಂದು ಯಾಕೆ ಪ್ರಥಮ ಮಾಹಿತಿ ವರದಿಯಲ್ಲಿ ನೋಂದಾಯಿಸಿದರು? 7. ನ್ಯಾಯಯುತ ವಿಧಾನಗಳನ್ನು ಉಲ್ಲಂಘಿಸಿ, ಕಾರ್ಮಿಕರನ್ನು ಬಂಧಿಸುವ ಮೂಲಕ, ಸಮುದಾಯದೊಳಗಿನ ನಂಬಿಕೆಯನ್ನು ನಾಶಪಡಿಸಿ, ಆರೋಗ್ಯ ಉಪಕ್ರಮಗಳ ಮಧ್ಯಪ್ರವೇಶವನ್ನು ಇನ್ನಷ್ಟು ಕಷ್ಟಕರವಾಗಿಸುವಂತಹ ಕೆಲಸವನ್ನು ಪೊಲೀಸರು ಯಾಕೆ ಮಾಡಿದರು?

ಹೊರ ಜಗತ್ತಿಗೆ ಪಾದರಾಯನ ಪುರ ಪ್ರಕರಣ ಮುಗಿದ ಅಧ್ಯಾಯವಾಗಿದ್ದರೂ, ಅಲ್ಲಿನ ಜನರ ಪಾಲಿಗೆ ಅದಿನ್ನೂ ಮುಗಿದಿಲ್ಲ. ಪೊಲೀಸರು ಪ್ರಕರಣವನ್ನು ವೈಯಕ್ತಿಕವಾಗಿಸಿಕೊಂಡು, ಅಲ್ಲಿನ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಹಲವರನ್ನು ಯಾವುದೇ ಮಾಹಿತಿ ನೀಡದೆ ಬಂಧಿಸಲಾಗಿದೆ.ೆ ಅವರೆಲ್ಲಿದ್ದಾರೆ? ಎನ್ನುವ ಕುರಿತಂತೆ ಪೊಲೀಸರು ಕುಟುಂಬಕ್ಕೆ ವಿವರಗಳನ್ನು ನೀಡುತ್ತಿಲ್ಲ. ಪೊಲೀಸರ ವರ್ತನೆಯ ಹಿಂದೆ ಕೋಮು ಹಿತಾಸಕ್ತಿಗಳು ಕೆಲಸ ಮಾಡುತ್ತಿವೆಯೇ? ಎಂದು ಅನುಮಾನ ಪಡುವಂತಾಗಿದೆ. ಆದುದರಿಂದ, ಪಾದರಾಯನಪುರದ ಸದ್ಯದ ಅತಂತ್ರ ಸ್ಥಿತಿಗೆ ಕಾರಣವಾಗಿರುವ ಹೀನ ವೈರಸ್‌ಗಳನ್ನು ಪತ್ತೆ ಹಚ್ಚುವುದಕ್ಕಾಗಿ ಸರಕಾರ ಒಂದು ಸ್ವತಂತ್ರ ತನಿಖೆಯನ್ನು ನಡೆಸುವುದು ಅತ್ಯಗತ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X