1,100 ಕೆಲಸಗಾರರನ್ನು ವಜಾಗೊಳಿಸಿದ ಸ್ವಿಗ್ಗಿ

ಹೊಸದಿಲ್ಲಿ,ಮೇ 18: ಕೊರೋನ ವೈರಸ್ ಮಹಾಮಾರಿ ಆಹಾರ ಪೂರೈಕೆಯ ವ್ಯವಹಾರದ ಮೇಲೂ ಪರಿಣಾಮಬೀರಿದ್ದು, ಮುಂದಿನ ಕೆಲವು ದಿನಗಳಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿರುವ 1,100 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಆಹಾರ ಸರಬರಾಜು ಕಂಪೆನಿ ಸ್ವಿಗ್ಗಿ ಸೋಮವಾರ ಘೋಷಿಸಿದೆ.
ಇಂದು ಸ್ವಿಗ್ಗಿಗೆ ಅತ್ಯಂತ ಬೇಸರದ ದಿನ. ನಮ್ಮ ಕಂಪೆನಿಯ ಸುಮಾರು ಶೇ.13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದು ಸೋಮವಾರ ತನ್ನ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ಸ್ವಿಗ್ಗಿಯ ಸಹ ಸ್ಥಾಪಕ ಹಾಗೂ ಸಿಇಒ ಶ್ರೀಹರ್ಷ ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಕಾಣಿಸಿಕೊಂಡ ಬಳಿಕ ಕಂಪೆನಿಯು ಈಗಾಗಲೇ ತನ್ನ ಅಡುಗೆ ವ್ಯವಸ್ಥೆಗಳನ್ನು ತಾತ್ಕಾಲಿಕ ಅಥವಾ ಖಾಯಂ ಆಗಿ ಬಾಗಿಲು ಮುಚ್ಚಲು ನಿರ್ಧರಿಸಿದೆ. ದುರದೃಷ್ಟವಶಾತ್ ಮುಂದಿನ ಕೆಲವು ದಿಗಳಲ್ಲಿ ನಗರಗಳಲ್ಲಿ ಹಾಗೂ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಶ್ರೇಣಿಯ ನಮ್ಮ ಕಂಪೆನಿಯ 1,100 ಉದ್ಯೋಗಿಗಳನ್ನು ಕೈಬಿಡುತ್ತಿದ್ದೇವೆ ಎಂದು ಶ್ರೀಹರ್ಷ ತಮ್ಮ ಕಂಪೆನಿಯ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ರೆಸ್ಟೊರೆಂಟ್ ಅಗ್ರಿಗೇಟರ್ ರೊಮೊಟೊ ತನ್ನ ಕಂಪೆನಿಯ ಶೇ.13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ ಬೆನ್ನಿಗೇ ಸ್ವಿಗ್ಗಿ ಕೂಡ ಅದೇ ಹಾದಿ ಹಿಡಿದಿದೆ.







