ಭಾರೀ ಮಳೆ: ಬೈಕಂಪಾಡಿ ಎಪಿಎಂಸಿಯಲ್ಲಿ ನೀರು ಪಾಲಾದ ಹಣ್ಣು, ತರಕಾರಿ!

ಮಂಗಳೂರು, ಮೇ 18: ದ.ಕ. ಜಿಲ್ಲೆಯಾದ್ಯಂತ ವಿವಿಧ ಕಡೆ ಸುರಿದ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಕೆಲವೆಡೆ ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಇದೇ ವೇಳೆ ಕೊರೋನ ಭೀತಿಯ ಹಿನ್ನೆಲೆಯಲ್ಲಿ ನಗರದ ಸೆಂಟ್ರಲ್ ಮಾರುಕಟ್ಟೆಯಿಂದ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಗೊಂಡಿದ್ದು ತರಕಾರಿ ಹಣ್ಣು ಹಂಪಲುಗಳ ವ್ಯಾಪಾರ ಬಹುತೇಕ ನೀರು ಪಾಲಾಗಿದೆ.
ಮುಂಜಾನೆ ಐದು ಗಂಟೆಯ ಸುಮಾರಿಗೆ ಬಿರುಗಾಳಿ, ಗುಡುಗು, ಮಿಂಚಿನೊಂದಿಗೆ ಸುರಿದ ಭಾರೀ ಮಳೆ ಅಲ್ಲಲ್ಲಿ ಕೃತಕ ನೆರೆಯನ್ನು ಸೃಷ್ಟಿಸಿತು. ಮೂಲಭೂತ ಸೌಕರ್ಯಗಳ ಕೊರತೆಯಿಂದ ತತ್ತರಿಸಿರುವ ಬೈಕಂಪಾಡಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮಳೆಯ ಸಂದರ್ಭ ನೋಡ ನೋಡುತ್ತಿದ್ದಂತೆಯೇ ಅವರ ತರಕಾರಿ ನೀರಿನ ಜತೆ ಕೊಚ್ಚಿ ಹೋದವು. ಲಕ್ಷಾಂತರ ಮೌಲ್ಯದ ತರಕಾರಿ, ಹಣ್ಣು ಹಂಪಲಗಳು ರಖಂ ವ್ಯಾಪಾರಕ್ಕೆ ಎಪಿಎಂಸಿಯಲ್ಲಿ ಶೇಖರಣೆಯಾಗಿದ್ದು, ಸಮರ್ಪಕವಾದ ಮೂಲಭೂತ ಸೌಕರ್ಯಗಳಿಲ್ಲದೆ ಸಾಕಷ್ಟು ನಷ್ಟ ಸಂಭವಿಸುರವುದಾಗಿ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಾಗುವ ಮೇರಿಹಿಲ್‌ನ ವೌಂಟ್ ಕಾರ್ಮೆಲ್ ಶಾಲೆಯಿಂದ ಒಳ ರಸ್ತೆಯ ವೆಂಕಟರಮಣ ದೇವಸ್ಥಾನದ ಬಳಿಯಲ್ಲಿ ಮಳೆ ನೀರು ಕೃತಕ ನೆರೆಯನ್ನು ಸೃಷ್ಟಿಸಿ, ವಾಹನ ಚಾಲಕರು ಪರದಾಡಿದರು. ನಗರದ ಬಹುತೇಕ ಪ್ರದೇಶಗಳಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ನೀರು ರಸ್ತೆಯಲ್ಲೇ ಹರಿದಾಡಿತು.
ಮಳೆಯ ಆಹ್ಲಾದದ ಜತೆ ಆತಂಕ!
ಕಳೆದ ಒಂದೆರಡು ತಿಂಗಳಿನಿಂದ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನಜೀವನಕ್ಕೆ ಮುಂಗಾರು ಪೂರ್ವ ಮಳೆ ಒಂದಷ್ಟು ಆಹ್ಲಾದವನ್ನು ನೀಡಿದೆ. ಆದರೆ ಈಗಾಗಲೇ ಕೊರೋನ ಭೀತಿ, ಲಾಕ್‌ಡೌನ್‌ನಿಂದ ತತ್ತರಿಸಿರುವ ಜನತೆ ಇದೀಗ ಮಳೆ ನೀರಿನಿಂದ ಸಾಂಕ್ರಾಮಿಕ ರೋಗಗ ಹಾವಳಿಯ ಬಗ್ಗೆ ಆತಂಕ್ಕೀಡಾಗಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿ ಮಲೇರಿಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳು ಜನ ಜೀವನವನ್ನು ಅದರಲ್ಲೂ ಮಂಗಳೂರು ನಗರವನ್ನು ಕಂಗೆಡಿಸುತ್ತಿದ್ದರೆ, ಕಳೆದ ಬಾರಿ ಜಿಲ್ಲೆಯಲ್ಲಿ ಡೆಂಗ್ ಹಾವಳಿ ಇನ್ನಿಲ್ಲದಂತೆ ಜಿಲ್ಲೆಯ ಜನತೆಯನ್ನು ಕಾಡಿತ್ತು. ಇದೀಗ ಮತ್ತೆ ಮಳೆ ಸುರಿಯುತ್ತಿ ದ್ದಂತೆಯೇ ಜನರು ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಆತಂಕ ಪಡುವಂತಾಗಿದೆ. ಬೆಳಗ್ಗಿನ ಹೊತ್ತು ಸುಮಾರು 2 ಗಂಟೆಗಳ ಸುರಿದ ಮಳೆ ಮಧ್ಯಾಹ್ನದ ವೇಳೆ ನಿಂತಿತ್ತು.
ಬೀದಿ ಪಾಲಾಗಿರುವ ಕಾರ್ಮಿಕರು ಮಳೆಗೆ ಕಂಗಾಲು!
ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ತೆರಳಲಾಗದೆ ಕಳೆದ ಹಲವಾರು ದಿನಗಳಿಂದ ನಗರದ ವಿವಿಧ ಕಡೆಗಳಲ್ಲಿ ಬೀದಿ ಬದಿಯಲ್ಲಿ ನಿರ್ವಸಿತರಾಗಿದ್ದಾರೆ. ನಗರದ ಸಿಟಿ ಬಸ್ಸು ನಿಲ್ದಾಣ, ಪುರಭವನದ ಹೊರಗಡೆ ಸೇರಿ ದಂತೆ ಅಲ್ಲಲ್ಲಿ ಅತಂತ್ರವಾಗಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಇಂದು ಸುರಿದ ಭಾರೀ ಮಳೆಗೆ ತಮ್ಮ ಬ್ಯಾಗ್ಗಳೊಂದಿಗೆ ಒದ್ದೆಯಾಗಿ ಕಂಗಾಲಾದರು.
ಕೆಪಿಟಿ ಗೋದಾಮಿಗೆ ನುಗ್ಗಿದ ಮಳೆ ನೀರು: ತೋಯ್ದ ಅಕ್ಕಿ ಚೀಲಗಳು!
ಕೆಪಿಟಿ ಆವರಣದಲ್ಲಿರುವ ಆಹಾರ ಇಲಾಖೆಯ ಗೋದಾಮಿಗೂ ಮಳೆ ನೀರು ನುಗ್ಗಿದ್ದು, ಗೋದಾಮಿನ ತಳ ಭಾಗದಲ್ಲಿದ್ದ ಅಕ್ಕಿ ಚೀಲಗಳು ನೀರಿ ನಲ್ಲಿ ತೋಯ್ದು ಹೋಗಿವೆ. ಇತ್ತೀಚೆಗಷ್ಟೆ ಜೋಕಟ್ಟೆ ಪ್ರದೇಶದಲ್ಲಿ ಕಳಪೆ ಅಕ್ಕಿ ಪೂರೈಕೆ ಆರೋಪಕ್ಕೆ ಸಂಬಂಧಿಸಿ ಗೋದಾಮಿಗೆ ಅಧಿಕಾರಿಗಳು ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ದರು. ಮುಂಗಾರು ಪೂರ್ವ ಮಳೆಯ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಜನಸಾಮಾನ್ಯರಿಗೆ ವಿತರಿಸಲಾಗುವ ಈ ಅಕ್ಕಿ ಚೀಲಗಳನ್ನು ಸುರಕ್ಷಿತವಾಗಿರಿಸುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲ ವಾದ ಕಾರಣ ಸಾಕಷ್ಟು ಪ್ರಮಾಣದ ಅಕ್ಕಿ ಚೀಲಗಳು ಮಳೆ ನೀರಿಗೆ ಒದ್ದೆಯಾಗಿವೆ.
ಪಡಿತರ, ಅಂಗನವಾಡಿ ಸಹಿತ ವಿವಿಧ ಕಡೆ ಪೂರೈಕೆಗಾಗಿ ಗೋದಾಮಿನಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂ. ವೌಲ್ಯದ ಅಕ್ಕಿ ಚೀಲಗಳು ಒದ್ದೆಯಾಗಿ ನಷ್ಟವಾಗಿದೆ.
ಕೆಪಿಟಿ ಗೋದಾಮಿಗೆ ನುಗ್ಗಿದ ಮಳೆ ನೀರು: ಅಕ್ಕಿ ಚೀಲಗಳ ಸ್ಥಳಾಂತರ
ಕೆಪಿಟಿ ಆವರಣದಲ್ಲಿರುವ ಆಹಾರ ಇಲಾಖೆಯ ಗೋದಾಮಿಗೂ ಮಳೆ ನೀರು ನುಗ್ಗಿದ್ದು, ಗೋದಾಮಿನ ತಳ ಭಾಗದಲ್ಲಿದ್ದ ಅಕ್ಕಿ ಚೀಲಗಳು ನೀರಿ ನಲ್ಲಿ ತೋಯ್ದು ಹೋಗಿವೆ. ಇತ್ತೀಚೆಗಷ್ಟೆ ಜೋಕಟ್ಟೆ ಪ್ರದೇಶದಲ್ಲಿ ಕಳಪೆ ಅಕ್ಕಿ ಪೂರೈಕೆ ಆರೋಪಕ್ಕೆ ಸಂಬಂಧಿಸಿ ಗೋದಾಮಿಗೆ ಅಧಿಕಾರಿ ಗಳು ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ದರು. ಮುಂಗಾರು ಪೂರ್ವ ಮಳೆಯ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿ ದ್ದರೂ ಜನಸಾಮಾನ್ಯರಿಗೆ ವಿತರಿಸಲಾಗುವ ಈ ಅಕ್ಕಿ ಚೀಲಗಳನ್ನು ಸುರಕ್ಷಿತವಾಗಿರಿಸುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲವಾದ ಕಾರಣ ಸಾಕಷ್ಟು ಪ್ರಮಾಣದ ಅಕ್ಕಿ ಚೀಲಗಳು ಮಳೆ ನೀರಿಗೆ ಒದ್ದೆಯಾಗಿವೆ.
‘‘ಕೆಪಿಟಿಯಲ್ಲಿ ಇರಿಸಲಾದ ಅಕ್ಕಿ ಚೀಲಗಳ ಗೋದಾಮಿನಲ್ಲಿ ಒಂದು ಕೋಣೆಗೆ ತಳ ಭಾಗದಿಂದ ನೀರು ಹರಿದು ಸುಮಾರು 15ರಷ್ಟು ಅಕ್ಕಿ ಚೀಲಗಳು ಒದ್ದೆಯಾಗಿವೆ. ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಕಾರಣ ನೀರು ಕೋಣೆಯೊಳಗೆ ನುಗ್ಗಿದೆ. ಅಲ್ಲಿ ಸುಮಾರು 4000 ಅಕ್ಕಿ ಚೀಲಗಳಿದ್ದು, ತಳ ಭಾಗಕ್ಕೆ ಪ್ಲಾಸ್ಟಿಕ್ ಹಾಸಲಾಗಿತ್ತು. ಹಾಗಾಗಿ ಹೆಚ್ಚಿನ ಹಾನಿ ಆಗಿಲ್ಲ. ಆ ಕೋಣೆಯಿಂದ ಸಂಪೂರ್ಣ ವಾಗಿ ಅಕ್ಕಿ ಚೀಲಗಳನ್ನು ಸ್ಥಳಾಂತರಿಸಲಾಗುತ್ತಿದೆ’’ ಎಂದು ದ.ಕ. ಜಿಲ್ಲಾ ಆಹಾರ ಇಲಾಖೆಯ ಸಹಾುಕ ನಿರ್ದೇಶಕಿ ಸುನಂದ ತಿಳಿಸಿದ್ದಾರೆ.







