ಕಾಸರಗೋಡು : ಇಂದು ಇಬ್ಬರಿಗೆ ಕೋವಿಡ್ ಪಾಸಿಟಿವ್ ದೃಢ

ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್ ಖಚಿತಗೊಂಡಿದೆ. ಪೈವಳಿಕೆ ನಿವಾಸಿಗಳಾದ 28 ವರ್ಷ ಪ್ರಾಯದ ಇಬ್ಬರಿಗೆ ಸೋಂಕು ಖಚಿತವಾಗಿದೆ. ಇವರು ಮುಂಬೈಯಿಂದ ಮೇ 15ರಂದು ಊರಿಗೆ ಬಂದವರು. ಬಂದ ಮೇಲೆ ಅವರು ಸರಕಾರಿ ಕ್ವಾರೆಂಟೈನ್ ನಲ್ಲಿ ದಾಖಲಾಗಿದ್ದರು. ಈಗ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 2456 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2101 ಮಂದಿ, ಆಸ್ಪತ್ರೆಗಳಲ್ಲಿ 355 ಮಂದಿ ನಿಗಾದಲ್ಲಿದ್ದಾರೆ. ಸೋಮವಾರ ಒಬ್ಬರನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 5635 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5137 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 118 ಮಂದಿಯ ಫಲಿತಾಂಶ ಲಭಿಸಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
Next Story





