ನೈಜೀರಿಯ: ನಿಷೇಧ ಉಲ್ಲಂಘಿಸಿದ ಬ್ರಿಟಿಶ್ ವಿಮಾನ ಮುಟ್ಟುಗೋಲು

ಅಬುಜ (ನೈಜೀರಿಯ), ಮೇ 18: ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ವಿಧಿಸಲಾಗಿರುವ ವಿಮಾನ ಹಾರಾಟ ನಿಷೇಧವನ್ನು ಉಲ್ಲಂಘಿಸಿರುವುದಕ್ಕಾಗಿ ಬ್ರಿಟಿಶ್ ಕಂಪೆನಿಯೊಂದು ನಿರ್ವಹಿಸುತ್ತಿರುವ ವಿಮಾನವೊಂದನ್ನು ನೈಜೀರಿಯ ಮುಟ್ಟುಗೋಲು ಹಾಕಿಕೊಂಡಿದೆ ಎಂದು ದೇಶದ ವಾಯುಯಾನ ಸಚಿವ ಹದಿ ಸಿರಿಕ ರವಿವಾರ ತಿಳಿಸಿದ್ದಾರೆ.
ಸಿಕ್ಕಿಹಾಕಿಕೊಂಡಿರುವ ವಿದೇಶೀಯರನ್ನು ಹೊರಗೆ ಸಾಗಿಸುವ ಅಥವಾ ನೈಜೀರಿಯದ ನಾಗರಿಕರನ್ನು ವಿದೇಶಗಳಿಂದ ಕರೆತರುವ ವಿಮಾನಗಳನ್ನು ಹೊರತುಪಡಿಸಿ, ಇತರ ಯಾವುದೇ ಪ್ರಯಾಣಿಕ ವಿಮಾನಗಳನ್ನು ಹಲವು ವಾರಗಳ ಹಿಂದೆಯೇ ನೈಜೀರಿಯ ನಿಷೇಧಿಸಿದೆ. ನಿಷೇಧವು ಕನಿಷ್ಠ ಜೂನ್ 4ರವರೆಗೆ ಚಾಲ್ತಿಯಲ್ಲಿರುತ್ತದೆ.
‘‘ಮಾನವೀಯ ಉದ್ದೇಶಕ್ಕಾಗಿ ವಿಮಾನ ಹಾರಿಸಲು ನಾವು ಬ್ರಿಟನ್‌ನ ಕಂಪೆನಿಯೊಂದಕ್ಕೆ ಅನುಮತಿ ನೀಡಿದ್ದೆವು. ಆದರೆ ದುರದೃಷ್ಟವಶಾತ್ ಅವರು ವಾಣಿಜ್ಯ ಹಾರಾಟಕ್ಕಾಗಿ ಈ ಅನುಮತಿಯನ್ನು ಬಳಸಿಕೊಂಡಿದ್ದಾರೆ’’ ಎಂದು ಸಚಿವ ಹದಿ ಸಿರಿಕ ತಿಳಿಸಿದರು.
Next Story





