ಮೇ 21:ಎಸ್ಸೆಸ್ಸೆಫ್ ರಾಜ್ಯ ಮಟ್ಟದ ತರ್ತೀಲ್ ಸ್ಪರ್ಧೆ

ಮಂಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಪೆಢರೇಶನ್ ಕ್ಯಾಂಪಸ್ ಹಾಗೂ ವಿಸ್ಡಂ ವಿಭಾಗವು ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಈ ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ಮೂಲಕ ಖುರ್ಆನ್ ತರ್ತೀಲ್ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.
ಯೂನಿಟ್, ಸೆಕ್ಟರ್, ಡಿವಿಷನ್, ಝೋನ್, ಜಿಲ್ಲಾ ಮಟ್ಟದ ಸ್ಪರ್ಧೆಗಳು ಮುಗಿದಿದ್ದು, ರಾಜ್ಯ ಮಟ್ಟದ ತರ್ತೀಲ್ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಉಮ್ಮರ್ ಅಸ್ಸಖಾಫ್ ತಂಙಳ್ ಮದನಿರವರ ಅಧ್ಯಕ್ಷತೆಯಲ್ಲಿ ಮೇ 21ರ ಬೆಳಿಗ್ಗೆ 11 ಗಂಟೆಗೆ ಆನ್ಲೈನ್ ನಲ್ಲಿ ನಡೆಯಲಿರುವುದು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಸಯ್ಯಿದ್ ಹಾಮಿಮ್ ಶಿಹಾಬ್ ತಂಙಳ್ ಬಾಳೆಹೊನ್ನೂರು ದುಆ: ಗೆ ನೇತೃತ್ವ ನೀಡಲಿರುವರು. ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು ಪ್ರಾಸ್ತಾವಿಕ ಭಾಷಣ ಮಾಡಲಿರುವರು.
ಕೆಸಿಎಫ್ ಐ.ಎನ್.ಸಿ ಚಯರ್ ಮ್ಯಾನ್ ಶೇಖ್ ಬಾವ ,ಇಶಾರ ಪಾಕ್ಷಿಕದ ಪ್ರಧಾನ ಸಂಪಾದಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಹಮೀದ್ ಬಜ್ಪೆ, ಸಾದಿಕ್ ಮಾಸ್ಟರ್ , ಎಸ್ಸೆಸ್ಸೆಫ್ ರಾಜ್ಯ ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಹಫೀಲ್ ಸಅದಿ ಮಡಿಕೇರಿ, ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಆರಿಫ್ ರಝಾ ತುಮಕೂರು ಮೊದಲಾದವರು ಭಾಗವಹಿಸಿ ಶುಭ ಮಾತಗಳನ್ನಾಡಲಿದ್ದಾರೆ.
ಬಳಿಕ ರಾಜ್ಯ ಮಟ್ಟದ ತರ್ತೀಲ್ ಸ್ಪರ್ಧೆಗಳು ಕ್ಯಾಂಪಸ್ ಜೂನಿಯರ್,ಕ್ಯಾಂಪಸ್ ಸೀನಿಯರ್,ದಆವಾ ಕ್ಯಾಂಪಸ್ ಜೂನಿಯರ್,ದಅವಾ ಕ್ಯಾಂಪಸ್ ಸೀನಿಯರ್ ವಿಭಾಗಗಳಲ್ಲಿ ಖಿರಾಅತ್,ಖುರ್ಅನ್ ಹಿಫ್ಳ್,ಖುರ್ಅನ್ ಕ್ವಿಝ್ ಸ್ಪರ್ಧೆಗಳು ನಡಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







