178 ಅನಿವಾಸಿ ಕನ್ನಡಿಗರು ಕ್ವಾರಂಟೈನ್‌ಗೆ
ಮಂಗಳೂರು, ಮೇ 19:ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಬೈಯಲ್ಲಿ ಸಿಲುಕಿಕೊಂಡಿದ್ದ ಅನಿವಾಸಿ ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ‘ವಂದೇಭಾರತ’ ಕಾರ್ಯಾಚರಣೆಯಡಿ ಸೋಮವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ 35 ಗರ್ಭಿಣಿ ಯರ ಸಹಿತ 178 ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
110 ಮಂದಿಯು ಅವರ ಆಯ್ಕೆಯ ಹೊಟೇಲ್/ಲಾಡ್ಜ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಗಾದರೆ 24 ಮಂದಿಗೆ ಸರಕಾರಿ ಉಚಿತ ಕ್ವಾರಂಟೈನ್ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು.
Next Story





