ರಾಜ್ಯದಲ್ಲಿಂದು 1,606 ಕೆಎಸ್ಆರ್‌ಟಿಸಿ ಬಸ್ ಗಳ ಸಂಚಾರ: 53,506 ಪ್ರಯಾಣಿಕರು ಪ್ರಯಾಣ

ಬೆಂಗಳೂರು, ಮೇ 19: ರಾಜ್ಯ ಸರಕಾರ ಸಾರಿಗೆ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ನಿಗಮದ ವ್ಯಾಪ್ತಿಯ ವಿಭಾಗಗಳಿಂದ ಬೆಂಗಳೂರು, ಮಂಗಳೂರು, ಮೈಸೂರು ಒಳಗೊಂಡಂತೆ ರಾಜ್ಯದ ವಿವಿಧೆಡೆ ಮೇ 19ರಂದು 1,606 ಬಸ್ಸುಗಳು ಕಾರ್ಯಾಚರಣೆ ಮಾಡಿದ್ದು, ಒಟ್ಟು 53,506 ಪ್ರಯಾಣಿಕರು ಸಂಚರಿಸಿದ್ದಾರೆ.
ಬೆಂಗಳೂರಿನಿಂದ ಮೇ 19ರಂದು 213 ಬಸ್ಸುಗಳು ಹಾಗೂ ಆರು ಸಾವಿರ ಪ್ರಯಾಣಿಕರು ರಾಜ್ಯದ ವಿವಿಧ ಜಿಲ್ಲೆಗಳಾದ ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ದಾವಣಗೆರೆ, ಮೈಸೂರು, ಹುಬ್ಬಳ್ಳಿ, ಸಿರಸಿ, ಮಂಗಳೂರು, ಬಳ್ಳಾರಿ, ರಾಯಚೂರು, ಹೊಸಪೇಟೆ, ಕಲಬುರಗಿ, ಚಿಕ್ಕಮಗಳೂರು, ಮಡಿಕೇರಿಗೆ ಪ್ರಯಾಣಿಸಿದ್ದಾರೆ.
ಮೇ 20ರ ಪ್ರಯಾಣಕ್ಕಾಗಿ ಈಗಾಗಲೇ 148 ಬಸ್ಸುಗಳನ್ನು ಮುಂಗಡವಾಗಿ ನಿಗದಿಪಡಿಸಿದ್ದು, 3,760 ಆಸನಗಳನ್ನು ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಿರುತ್ತಾರೆ. ಪ್ರಯಾಣಿಕರು ಕೆಎಸ್ಆರ್‌ಟಿಸಿ ವೆಬ್‍ಸೈಟ್ www.ksrtc.in ಮೂಲಕ ಅಥವಾ ನಿಗಮದ ಟಿಕೇಟ್ ಕೌಂಟರ್ ಗಳ, ಫ್ರಾಂಚೈಸಿ ಕೌಂಟರ್ ಗಳ ಮೂಲಕ ಟಿಕೇಟುಗಳನ್ನು ಕಾಯ್ದಿರಿಸಬಹುದಾಗಿದೆ.
ಎಲ್ಲಿಂದ ಎಲ್ಲಿಗೆ: ಬೆಂಗಳೂರಿನಿಂದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಹರಪ್ಪನಹಳ್ಳಿ, ಕೊಪ್ಪಳ, ಕಾರವಾರ, ಮಂಗಳೂರು, ಮಡಿಕೇರಿ, ಮೈಸೂರು, ರಾಯಚೂರು, ಶಿವಮೊಗ್ಗ, ಶಿರಸಿ, ವಿಜಯಪುರ, ಉಡುಪಿ ಹಾಗೂ ಯಾದಗಿರಿಗೆ ಪ್ರಯಾಣಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಹಾಗೆಯೇ ಬೆಳಗಾವಿ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಗಂಗಾವತಿ, ಹುಬ್ಬಳ್ಳಿ, ಹಡಗಲಿ, ಹರಿಹರ, ಹೊಸಪೇಟೆ, ಕಂಪ್ಲಿ, ಕುಂದಾಪುರ, ಕುಮಟಾ, ಕೊಪ್ಪಳ, ಕುಷ್ಟಗಿ, ಮಂಗಳೂರು, ಮಡಿಕೇರಿ, ಮೈಸೂರು, ವಿಜಯಪುರ, ಸಂಡೂರು, ಶಿವಮೊಗ್ಗ, ಶಿರಗುಪ್ಪ, ಶಿರಸಿ, ಉಡುಪಿ, ಯಾದಗಿರಿ, ಯಲಬುರ್ಗ, ಯಲ್ಲಾಪುರದಿಂದ ಬೆಂಗಳೂರಿಗೆ ಪ್ರಯಾಣಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.ksrtc.in ಗೆ ಭೇಟಿ ನೀಡಬಹುದು ಹಾಗೂ ಕಾಲ್‍ಸೆಂಟರ್ ನಂಬರ್ 9449596666ಕ್ಕೆ ಸಂಪರ್ಕಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.






.jpg)
.jpg)
.jpg)
.jpg)
.jpg)
.jpg)
.jpg)

