ಹೊರರಾಜ್ಯದ ಕಾರ್ಮಿಕರಿಲ್ಲದೆ ಮರಳಿನ ಸಮಸ್ಯೆ : ರಘುಪತಿ ಭಟ್
ಉಡುಪಿ, ಮೇ 19: ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿರುವುದರಿಂದ ಜಿಲ್ಲೆಯ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳ ದಿಬ್ಬಗಳನ್ನು ತೆರವುಗೊಳಿಸಲು 48 ಪರವಾನಿಗೆಗಳನ್ನು ನೀಡಲಾಗಿದೆ. ಅದರಲ್ಲಿ ಈಗ ನಾಲ್ಕು ಪರವಾನಿಗೆ ದಾರರು ಮಾತ್ರ ಮರಳು ತೆರವು ಗೊಳಿಸುತ್ತಿದ್ದಾರೆ. ಉಳಿದವರು ಡಿಡಿ ಮೂಲಕ ಹಣ ಪಾವತಿಸಿದ್ದರೂ ಕಾರ್ಮಿಕರಿಲ್ಲದೆ ಮರಳು ತೆರವುಗೊಳಿಸಲು ಸಾಧ್ಯ ವಾಗುತ್ತಿಲ್ಲ ಎಂದರು.
ಜೂ.1ರವರೆಗೆ ಈ ಮರಳು ದಿಬ್ಬ ತೆರವುಗೊಳಿಸಲು ಅವಕಾಶ ಇದೆ. ಜಿಲ್ಲೆಯಲ್ಲಿನ ಮರಳುಗಾರಿಕೆ ಮತ್ತು ಕಟ್ಟಡ ಕಾಮಗಾರಿಗಳು ಈ ಹೊರರಾಜ್ಯ ಕಾರ್ಮಿಕರನ್ನೇ ಅವಲಂಬಿಸಿಕೊಂಡಿದೆ. ಆದುದರಿಂದ ಇವರೆಲ್ಲ ಜಿಲ್ಲೆಯ ಅಭಿ ವೃದ್ಧಿಯಲ್ಲಿ ಭಾಗಿದಾರರು. ಇವರು ಮತ್ತೆ ವಾಪಾಸ್ಸು ಜಿಲ್ಲೆಗೆ ಬರಬೇಕಾಗಿ ರುವುದು ಅಗತ್ಯ ಎಂದು ಅವರು ಹೇಳಿದರು.
Next Story





