ಬಂದರ್ ಪರಿಸರದಲ್ಲಿದ್ದ ವಲಸೆ ಕಾರ್ಮಿಕರಿಗೆ ಬಸ್ಸಿನ ವ್ಯವಸ್ಥೆ

ಮಂಗಳೂರು, ಮೇ 19: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದರು ಪರಿಸರದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಒರಿಸ್ಸಾ ಮೂಲದ 150 ವಲಸೆ ಕಾರ್ಮಿಕರಿಗೆ ಸೋಮವಾರ ಮತ್ತು ಮಂಗಳವಾರ ಸ್ಥಳೀಯ ಕಾರ್ಪೊರೇಟರ್ ಲತೀಫ್ ಕಂದುಕ ಮತ್ತು ಕಂದಕ್ ಮುಸ್ಲಿಂ ಜಮಾಅತ್‌ನ ಮುಖಂಡರು ನಾಲ್ಕು ಬಸ್ಸಿನ ವ್ಯವಸ್ಥೆ ಕಲ್ಪಿಸಿ ಮಾದರಿಯಾಗಿದ್ದಾರೆ.
ಸ್ವಗ್ರಾಮ ತಲುಪಲಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಈ ವಲಸೆ ಕಾರ್ಮಿಕರು ಬಂದರ್ ಕಂದುಕದ ಮುಸ್ಲಿಂ ಜಮಾಅತ್‌ನ ಮುಖಂಡರೊಂದಿಗೆ ಅಹವಾಲು ತೋಡಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕಾರ್ಪೊರೇಟರ್ ಅಧಿಕಾರಿಗಳೊಂದಿಗೆ ಮಾತುಕತಡೆ ನಡೆಸಿ ತಕ್ಷಣ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದರು.
ಅಂದರೆ ಸೋಮವಾರ ಮತ್ತು ಮಂಗಳವಾರ ತಲಾ ಎರಡು ಬಸ್ಸಿನಲ್ಲಿ ತಲಾ 75 ಮಂದಿಯನ್ನು ಊರಿಗೆ ಕಳುಹಿಸಿಕೊಡಲು ಮತ್ತು ಪಾಸ್ ವ್ಯವಸ್ಥೆ ಮಾಡಿಕೊಟ್ಟರು. ಕಾರ್ಪೊರೇಟರ್ ಜೊತೆ ಕಂದಕ್ ಮುಸ್ಲಿಂ ಜಮಾಅತ್‌ನ ಇಬ್ರಾಹೀಂ, ಕಾಸಿಮ್, ಸಿದ್ದೀಕ್, ಅಶ್ರಫ್, ಆಸೀಫ್ ಮತ್ತಿತರರು ಸಹಕರಿಸಿದ್ದರು.

Next Story





