ಬದ್ರಿಯಾ ಫ್ರೆಂಡ್ಸ್ ಯುಎಇ, ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

ದುಬೈ: ಬದ್ರಿಯ ಫ್ರೆಂಡ್ಸ್ ಯು.ಎ.ಇ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಸಹಭಾಗಿತ್ವದಲ್ಲಿ ಲತೀಫಾ ಬ್ಲಡ್ ಬ್ಯಾಂಕ್ ದುಬೈ ಇದರ ಸಹಕಾರದೊಂದಿಗೆ ತುರ್ತು ರಕ್ತದಾನ ಶಿಬಿರ ಅಲ್ ವಸ್ಲ್ ಸ್ಪೋರ್ಟ್ಸ್ ಕ್ಲಬ್ ದುಬೈಯಲ್ಲಿ ನಡೆಯಿತು.
ಕೋವಿಡ್ ಭೀತಿಯ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ನಿರಂತರವಾಗಿ ಕ್ಯಾನ್ಸರ್ ಬಾಧಿತ ಮಕ್ಕಳಿಗೆ, ತಲಸ್ಸೇಮಿಯಾ ರೋಗಿಗಳಿಗೆ, ಅಪಘಾತದಿಂದ ಗಾಯಗೊಂಡವರಿಗೆ ತುರ್ತು ಚಿಕಿತ್ಸೆಗಳಿಗೆ ನಿರಂತರವಾಗಿ ರಕ್ತದ ಬೇಡಿಕೆ ಬರುತ್ತಿದ್ದು ರಕ್ತ ನಿಧಿಗಳಲ್ಲಿ ರಕ್ತದ ಅಭಾವವಿರುವುದನ್ನು ಮನಗಂಡು ಲತೀಫಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಹಕಾರದೊಂದಿಗೆ ಹಮ್ಮಿಕೊಳ್ಳಲಾದ ಈ ತುರ್ತು ರಕ್ತದಾನ ಶಿಬಿರದಲ್ಲಿ ಸುರಕ್ಷಿತ ವಿಧಾನಗಳೊಂದಿಗೆ ಒಟ್ಟು 43 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಈ ಸಂದರ್ಭ ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಇದರ ಆಯೋಜಕರಾದ ಅಬ್ದುಲ್ ರಹಿಮಾನ್ ಪೊಯ್ಯಲ್, ಅನ್ವರ್ ಸಾದಾತ್ , ಮೊಹಮ್ಮದ್ ಶಫಾಫ್, ಮೊಹಮ್ಮದ್ ಇರ್ಷಾದ್ ಓರಿಯನ್ , ಮುಶೀರ್ ,ಅಲ್ತಾಫ್, ತೌಫೀಕ್ ಬೆಂಗರೆ, ಆಸಿಫ್ ಬೆಂಗರೆ ಹಾಗೂ ಉಮ್ಮರ್ ಫಾರೂಕ್ ಉಪಸ್ಥಿತರಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು ಇದರ ಯು ಎ ಇ ಕಾರ್ಯ ನಿರ್ವಾಹಕರಾದ ಜಬ್ಬಾರ್ ಕೆ.ಕೆ ಕಲ್ಲಡ್ಕ (ಝಮಾನ್ ಬಾಯ್ಸ್), ಸದಸ್ಯರಾದ ಮೊಹಮ್ಮದ್ ಸಾದಿಕ್ ಪುತ್ತೂರು ಶಿಬಿರದ ಸ್ವಯಂ ಸೇವಕರಾಗಿದ್ದರು. ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಾಹಕರಾದ ನಝೀರ್ ಅಹಮದ್ ದುಬೈ ಕಾರ್ಯಕ್ರಮವನ್ನು ನಿರ್ವಹಿಸಿದರು.






.jpeg)


.jpeg)


