Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಏನಿದು ಮಿದುಳು ಸ್ತಂಭನ?: ಅದು ಹೇಗೆ...

ಏನಿದು ಮಿದುಳು ಸ್ತಂಭನ?: ಅದು ಹೇಗೆ ಸಂಭವಿಸುತ್ತದೆ?

ವಾರ್ತಾಭಾರತಿವಾರ್ತಾಭಾರತಿ19 May 2020 11:17 PM IST
share
ಏನಿದು ಮಿದುಳು ಸ್ತಂಭನ?: ಅದು ಹೇಗೆ ಸಂಭವಿಸುತ್ತದೆ?

ಬೇಸಿಗೆಯ ದಿನಗಳಲ್ಲಿ ಐಸ್‌ಕ್ರೀಮ್ ಮತ್ತು ತಂಪು ಪಾನೀಯಗಳೆಂದರೆ ನಿಮಗೆ ತುಂಬ ಇಷ್ಟವೇ? ಹಾಗಿದ್ದರೆ ಎಚ್ಚರಿಕೆಯಿಂದಿರಿ,ಏಕೆಂದರೆ ನಿಮ್ಮ ಈ ಇಷ್ಟವು ನಿಮ್ಮ ಪಾಲಿಗೆ ಅಪಾಯಕಾರಿಯಾಗಬಹುದು. ಯಾವುದೇ ಋತುವಿನಲ್ಲಿಯೂ ಒಂದು ಟೇಬಲ್‌ಸ್ಪೂನ್‌ನಷ್ಟು ಐಸ್‌ಕ್ರೀಮ್,ವಿಶೇಷವಾಗಿ ನೀವು ಅದನ್ನು ನಿರಂತರವಾಗಿ ತಿನ್ನುತ್ತಿದ್ದರೆ,ನಿಮ್ಮ ಮಿದುಳನ್ನು ಸ್ತಂಭನಗೊಳಿಸಬಹುದು. ಬ್ರೇನ್ ಫ್ರೀಝ್ ಅಥವಾ ಮಿದುಳು ಸ್ತಂಭನ ಯಾವುದೇ ಶೀತಲೀಕೃತ ಆಹಾರವನ್ನು ದಿಢೀರ್ ಸೇವಿಸಿದಾಗ ಉಂಟಾಗುವ ಸಮಸ್ಯೆಯಾಗಿದೆ.

ಮಿದುಳು ಸ್ತಂಭನ ಒಂದು ವಿಧದ,ಹಣೆಯ ಭಾಗದಲ್ಲಿ ಕಾಣಿಸಿಕೊಳ್ಳುವ ತಲೆನೋವು ಆಗಿದ್ದರೂ ಕೆಲವೊಮ್ಮೆ ಅದು ಮಾಮೂಲು ತಲೆನೋವಿಗಿಂತ ತೀವ್ರವಾಗಿರುತ್ತದೆ. ಹೆಚ್ಚಿನ ಸಲ ನಿಮ್ಮ ಮಿದುಳು ಶೀತಲ ತಾಪಮಾನಕ್ಕೆ ಒಡ್ಡಿಕೊಂಡಾಗ ಮಿದುಳು ಸ್ತಂಭನ ಉಂಟಾಗುತ್ತದೆ. ಹೆಚ್ಚಿನ ಜನರಿಗೆ ತಲೆನೋವು ಬರುತ್ತಿರುತ್ತದೆ ಮತ್ತು ಅದು ದೊಡ್ಡ ಸಮಸ್ಯೆಯಾಗಿದ್ದರೂ ಅದನ್ನು ಮಾಮೂಲು ತಲೆನೋವು ಎಂದು ಪರಿಗಣಿಸುವುದರಿಂದ ಮಿದುಳು ಸ್ತಂಭನದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಮಿದುಳು ಏಕೆ ಸ್ತಂಭಿಸುತ್ತದೆ?

 ನೀವು ತಂಪುಪಾನೀಯ ಅಥವಾ ಐಸ್‌ಕ್ರೀಂ ಅನ್ನು ಅತಿ ವೇಗವಾಗಿ ಸೇವಿಸಿದಾಗ ನಿಮ್ಮ ಕ್ಯಾರೊಟಿಡ್ ಆರ್ಟರಿ ಅಥವಾ ಮಿದುಳು,ಮುಖ ಮತ್ತು ಕುತ್ತಿಗೆಗೆ ರಕ್ತವನ್ನು ಪೂರೈಸುವ ಪ್ರಮುಖ ರಕ್ತನಾಳ ಶೀರ್ಷಧಮನಿ ಅಪಧಮನಿಯು ಕುತ್ತಿಗೆಯ ಹಿಂಭಾಗದ ಉಷ್ಣತೆಯಲ್ಲಿ ಕ್ಷಿಪ್ರ ಬದಲಾವಣೆಯನ್ನುಂಟು ಮಾಡುತ್ತದೆ ಮತ್ತು ಇದು ಮಿದುಳು ರಕ್ತ ಸಂಚಾರವನ್ನು ನಿಲ್ಲಿಸಲು ಕಾರಣವಾಗುತ್ತದೆ ಮತ್ತು ನೋವು ಕಾಣಿಸಿಕೊಳ್ಳುತ್ತದೆ.

ಇದಲ್ಲದೆ,ನಿಮ್ಮ ಮಿದುಳು ದಿಢೀರ್ ಬದಲಾವಣೆಯನ್ನು ಬಯಸುವುದಿಲ್ಲ ಮತ್ತು ತನ್ನ ಕಾರ್ಯವನ್ನು ನಿಲ್ಲಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದನ್ನು ಮನಸ್ಸಿನ ತಕ್ಷಣದ ಸ್ತಂಭನ ಎಂದು ಕರೆಯಲಾಗುತ್ತದೆ.

ಮಿದುಳು ತನ್ನಲ್ಲಿರುವ ಕೋಟ್ಯಂತರ ‘ನ್ಯೂರಾನ್ ’ಅಥವಾ ನರಕೋಶಗಳಿಂದಾಗಿ ನೋವನ್ನು ಅನುಭವಿಸುವುದಿಲ್ಲ,ಆದರೆ ಎರಡು ಅಪಧಮನಿಗಳು ಸೇರುವ ‘ಮೆನಿಂಜೆಸ್’ ಎಂದು ಕರೆಯಲಾಗುವ ಮಿದುಳಿನ ಹೊರಕವಚದಲ್ಲಿಯ ಮಿದುಳು ಸ್ತಂಭನದೊಂದಿಗೆ ಗುರುತಿಸಿಕೊಂಡಿರುವ ನೋವನ್ನು ‘ರೆಸೆಪ್ಟರ್’ ಅಥವಾ ಗ್ರಾಹಕಗಳು ಗ್ರಹಿಸುತ್ತವೆ. ಶೀತಲತೆ ಹೆಚ್ಚಿದಾಗ ಅದು ಈ ಅಪಧಮನಿಗಳ ಆಕುಂಚನ ಮತ್ತು ಸಂಕುಚನಗಳನ್ನುಂಟು ಮಾಡುತ್ತದೆ ಮತ್ತು ನಮಗೆ ಏಕಾಏಕಿಯಾಗಿ ತೀವ್ರ ತಲೆನೋವಿನ ಅನುಭವವಾಗುತ್ತದೆ.

 ಅಲ್ಲದೆ,ತಣ್ಣನೆಯ ಆಹಾರ ಅಥವಾ ಪಾನೀಯ ಉಷ್ಣತೆ ಸಂವೇದಕ ಜಾಗವಾಗಿರುವ ಬಾಯಿಯ ಹಿಂಭಾಗ ಅಥವಾ ಗಂಟಲನ್ನು ಮೊದಲು ತಾಡಿಸುತ್ತದೆ. ಇದರಿಂದ ರಕ್ತನಾಳಗಳು ಮತ್ತು ನರಗಳು ಪ್ರಚೋದಿಸಲ್ಪಡುತ್ತವೆ ಮತ್ತು ರಕ್ತ ಸಂಚಾರವು ಹೆಚ್ಚಾಗುತ್ತದೆ. ಶೀತಲತೆ ಮಿದುಳಿನ ಮಧ್ಯವನ್ನು ತಲುಪಿದಾಗ ಮಿದುಳು ಸ್ತಂಭನಗೊಳ್ಳುತ್ತದೆ. ಆದರ ನಮ್ಮ ತಲೆಯಲ್ಲಿ ರಕ್ತಸಂಚಾರ ಸ್ಥಗಿತಗೊಂಡಾಗ ಮಾತ್ರ ನೋವು ನಮ್ಮ ಅನುಭವಕ್ಕೆ ಬರುತ್ತದೆ.

ಮಿದುಳು ಸ್ತಂಭನವನ್ನು ತಡೆಯುವುದು ಹೇಗೆ?

ನಾವು ನಮ್ಮ ಮಿದುಳನ್ನು ಸ್ತಂಭನಗೊಳ್ಳುವುದರಿಂದ ಸುಲಭವಾಗಿ ರಕ್ಷಿಸಬಹುದು. ಇದಕ್ಕಾಗಿ ನಾವು ಈ ಕೆಳಗಿನ ಅಂಶಗಳ ಕುರಿತು ಎಚ್ಚರಿಕೆ ವಹಿಸಬೇಕಷ್ಟೇ.

ಐಸಕ್ರೀಮ್ ಮತ್ತು ತಂಪು ಪಾನೀಯಗಳ ಸೇವನೆಯನ್ನು ಸಾಧ್ಯವಾದಷ್ಟು ನಿವಾರಿಸಿ. ಆದರೂ ನೀವು ಇವುಗಳನ್ನು ಸೇವಿಸುತ್ತಿದ್ದರೆ ಐಸ್‌ಕ್ರೀಮ್ ಅಥವಾ ತಂಪುಪಾನೀಯ ಏಕಾಏಕಿ ಅದು ನಿಮ್ಮ ಬಾಯಿಯ ಮೇಲ್ಭಾಗದತ್ತ ಸಾಗದಂತೆ ನೋಡಿಕೊಳ್ಳಿ,ಅದನ್ನು ನಿಧಾನವಾಗಿ ಸೇವಿಸಿ. ನೀವು ನಿಮ್ಮ ಬಾಯಿಯ ಉಷ್ಣತೆಯನ್ನು ನಾಲಿಗೆಯ ಉಷ್ಣತೆಗೆ ಅನುಗುಣವಾಗಿ ಕಾಯ್ದುಕೊಳ್ಳಬಹುದು. ಇದಕ್ಕಾಗಿ ನೀವು ತಣ್ಣಗಿನ ಏನನ್ನಾದರೂ ಸೇವಿಸುವ ಮುನ್ನ ಅದನ್ನು ನಾಲಿಗೆಯ ಕೆಳಗೆ ನಿಧಾನವಾಗಿ ಕರಗಿಸಿ. ನಿಮ್ಮ ಬಾಯಿಯ ಉಷ್ಣತೆಯನ್ನು ಸೂಕ್ತವಾಗಿ ಕಾಯ್ದುಕೊಳ್ಳಲು ನಾಲಿಗೆಯು ನೆರವಾಗುತ್ತದೆ. ನೀವು ತಂಪು ಪದಾರ್ಥಗಳನ್ನು ಸೇವಿಸಿದಾಗ ಅವುಗಳಲ್ಲಿಯ ಉಷ್ಣತೆಯು ನಾಲಿಗೆಗೆ ವರ್ಗಾವಣೆಗೊಳ್ಳುತ್ತದೆ ಮತ್ತು ಮಿದುಳು ಅದನ್ನು ಗುರುತಿಸುವ ವೇಳೆಗೆ ಉಷ್ಣತೆಯು ಸಾಮಾನ್ಯಗೊಂಡಿರುತ್ತದೆ.

 ಯಾವುದೇ ಬಿಸಿಯಾದ ಖಾದ್ಯವನ್ನು ಸೇವಿಸಿದ ಬಳಿಕ ಏಕಾಏಕಿಯಾಗಿ ಐಸ್‌ಕ್ರೀಮ್ ಮತ್ತು ತಂಪುಪಾನೀಯ ಮುಂತಾದವುಗಳನ್ನು ಸೇವಿಸಬೇಡಿ,ಏಕೆಂದರೆ ನಿಮ್ಮ ಬಾಯಿಯು ಬಿಸಿ ಮತ್ತು ತಂಪಿಗೆ ಸಂವೇದಿಸುತ್ತದೆ ಮತ್ತು ಇದರಿಂದಾಗಿ ರಕ್ತಸಂಚಾರದ ಮೇಲೆ ಪರಿಣಾಮವುಂಟಾಗುತ್ತದೆ. ಅಲ್ಲದೆ ನಿಮ್ಮ ಮಿದುಳು ಕೂಡ ಈ ಸಂವೇದನಕ್ಕೆ ಸಜ್ಜಾಗಿರುವುದಿಲ್ಲ ಮತ್ತು ಸ್ತಂಭನಗೊಳ್ಳುತ್ತದೆ.

ಚಳಿಗಾಲದಲ್ಲಿ ದಿಢೀರ್‌ನೆ ಎದ್ದು ಹೊರಗೆ ಹೋಗಬೇಡಿ. ವಾತಾವರಣದ ಉಷ್ಣತೆ ನಿಮ್ಮ ಶರೀರದ ಉಷ್ಣತೆಯ ಮೇಲೆ ಪರಿಣಾಮ ಬೀರದಂತಿರಲು ತಲೆಯನ್ನು ಮುಚ್ಚಿಕೊಳ್ಳುವುದನ್ನು ಮರೆಯಬೇಡಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X