ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಲಿರುವ ಆರೋಗ್ಯ ಸಚಿವ ಹರ್ಷವರ್ಧನ್
ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಲು ಸಜ್ಜಾಗಿದ್ದಾರೆ.
ಒಟ್ಟು 34 ಮಂದಿ ಸದಸ್ಯರಿರುವ ಈ ಮಂಡಳಿಯ ಹಾಲಿ ಅಧ್ಯಕ್ಷ ಜಪಾನಿನ ಡಾ. ಹಿರೋಕಿ ನಕಟನಿ ಅವರ ಸ್ಥಾನವನ್ನು ಹರ್ಷವರ್ಧನ್ ತುಂಬಲಿದ್ದಾರೆ. ಹರ್ಷವರ್ಧನ್ ಆವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕಗೊಳಿಸುವ ಪ್ರಸ್ತಾಪಕ್ಕೆ 194 ದೇಶಗಳ ವಿಶ್ವ ಆರೋಗ್ಯ ಅಸೆಂಬ್ಲಿ ಮಂಗಳವಾರ ಸಹಿ ಹಾಕಿದೆ.
ಮೇ 22ರಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಅವರನ್ನು ಈ ಹುದ್ದೆಗೆ ಅಧಿಕೃತವಾಗಿ ಆಯ್ಕೆ ಮಾಡಲಾಗುವುದು. ಈ ಹುದ್ದೆಯನ್ನು ಅವರು ಒಂದು ವರ್ಷ ಹೊಂದಲಿದ್ದು ರೊಟೇಶನ್ ಆಧಾರದಲ್ಲಿ ಸದಸ್ಯ ರಾಷ್ಟ್ರಗಳಿಗೆ ಈ ಹುದ್ದೆ ದೊರೆಯುತ್ತದೆ.
ಈ ಮಂಡಳಿ ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಭೆ ಸೇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ಧಾರಗಳನ್ನು ಜಾರಿಗೆ ತರುವ ಜವಾಬ್ದಾರಿ ಈ ಮಂಡಳಿಗಿದೆ.
Next Story