ಬೋಳೂರು: ಕೊರೋನ ಸೋಂಕಿತ ಅಜ್ಜ-ಮೊಮ್ಮಗಳು ಆಸ್ಪತ್ರೆಯಿಂದ ಬಿಡುಗಡೆ
ಸ್ಥಳೀಯರಿಂದ ಸ್ವಾಗತ
ಮಂಗಳೂರು, ಮೇ 20: ಕೋರೋನ ಸೋಂಕಿತ ಬೋಳೂರಿನ 62 ವರ್ಷ ಪ್ರಾಯದ ವ್ಯಕ್ತಿ ಮತ್ತು 11 ವರ್ಷದ ಬಾಲಕಿಯು ಗುಣಮುಖ ರಾಗಿದ್ದು, ಬುಧವಾರ ಅವರನ್ನು ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಮಾಡಲಾಗಿದೆ. ಇವರು ಅಜ್ಜ ಮತ್ತು ಮೊಮ್ಮಗಳಾಗಿದ್ದು, ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆಗಿ ಮನೆಗೆ ತೆರಳಿದ ಇವರನ್ನು ಸ್ಥಳೀಯರು ಸ್ವಾಗತಿಸಿದರು.
ಮನಪಾ ವ್ಯಾಪ್ತಿಯ ಬೋಳೂರಿನ 58ರ ಹರೆಯದ ಮಹಿಳೆಗೆ ಎ.30ರಂದು ಸೋಂಕು ದೃಢಗೊಂಡಿತ್ತು. ಮೇ 13ರಂದು ಈ ಮಹಿಳೆ ಮೃತಪಟ್ಟಿದ್ದರು. ಈ ಮಹಿಳೆಯ 62 ವರ್ಷ ಪ್ರಾಯದ ಪತಿಗೆ ಮೇ 1ರಂದು ಸೋಂಕು ದೃಢಗೊಂಡಿತ್ತು. ಬಳಿಕ ಮೇ 5ರಂದು ಈ ದಂಪತಿಯ 51ರ ಹರೆಯದ ಅಳಿಯನಿಗೆ ಸೋಂಕು ದೃಢಗೊಂಡಿತ್ತು. ಮೇ 6ರಂದು ಈ ದಂಪತಿಯ 38 ವರ್ಷ ಪ್ರಾಯದ ಮಗಳು ಮತ್ತು 11 ವರ್ಷದ ಮೊಮ್ಮಗಳಿಗೆ ಸೋಂಕು ದೃಢಪಟ್ಟಿತ್ತು.
ಇದೀಗ ಅಜ್ಜ ಮತ್ತು ಮೊಮ್ಮಗಳು ಗುಣಮುಖರಾಗಿದ್ದು, ಡಿಸ್‌ಜಾರ್ಜ್ ಆಗಿದ್ದಾರೆ. ಇನ್ನು ಈ ಮನೆಯ ದಂಪತಿಯು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story





