ಉಡುಪಿ: ಮೇ 25ರೊಳಗೆ ಪಡಿತರ ಪಡೆಯಲು ಸೂಚನೆ
ಉಡುಪಿ, ಮೇ 20: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಯಡಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರ ಆಹಾರಧಾನ್ಯವನ್ನು ಪಡೆಯದೇ ಬಾಕಿ ಇರುವ ಪಡಿತರ ಕಾರ್ಡ್‌ದಾರರು ಮೇ 25ರೊಳಗೆ ಆಹಾರಧಾನ್ಯವನ್ನು ಕಡ್ಡಾಯವಾಗಿ ಪಡೆಯುವಂತೆ ತಿಳಿಸಲಾಗಿದೆ.
ಇಲ್ಲವಾದಲ್ಲಿ ನಂತರದ ದಿನಗಳಲ್ಲಿ ಪಡಿತರ ತರಿಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





