ಸೀಲ್ ಡೌನ್ ಆಗಿರುವ ಪಿಲಾರಿನಲ್ಲಿ ದಿ ಕಿನ್ಝ್ ಫೌಂಡೇಶನ್ ನಿಂದ ಈದ್ ಕಿಟ್ ವಿತರಣೆ

ಮಂಗಳೂರು : ಗುರುವಾರ ಸಂಜೆ ಸೀಲ್ ಡೌನ್ ಆಗಿರುವ ಪಿಲಾರು ದಾರಂದ ಬಾಗಿಲು ಪ್ರದೇಶದಲ್ಲಿ ಸರ್ವಧರ್ಮೀಯ ಸುಮಾರು 100 ಮನೆಗಳಿಗೆ ದಿ ಕಿನ್ಝ್ ಫೌಂಡೇಶನ್ ವತಿಯಿಂದ ರಮಝಾನ್ ಈದ್ ಕಿಟ್ ವಿತರಿಸಲಾಯಿತು.
ಅನಿವಾಸಿ ಭಾರತೀಯ ಉದ್ಯಮಿ ಅಲ್ತಾಫ್ ಉಳ್ಳಾಲ್ ಸಾಕೋ ಅವರು ದಿ ಕಿನ್ಝ್ ಫೌಂಡೇಶನ್ ನ ಅಧ್ಯಕ್ಷರಾಗಿದ್ದಾರೆ.
ಪಿಲಾರು ಮದನಿ ಮಸೀದಿಯ ಅಧ್ಯಕ್ಷ ಅಸ್ಲಮ್, ಚೆಮ್ಬುಗುಡ್ಡೆ ಮಸೀದಿಯ ಅಧ್ಯಕ್ಷ ಹನೀಫ್, ಝಕಾರಿಯಾ ಮಲಾರ್, ಮನ್ಸೂರ್, ಅಲ್ಫಾ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ನಝೀರ್, ಇಲ್ಯಾಸ್, ಸಾಜಿದ್, ಇಕ್ಬಾಲ್, ಸಿದ್ದೀಕ್ , ಅಲ್ತಾಫ್ ಮತ್ತಿತರರು ಉಪಸ್ಥಿತರಿದ್ದರು.
ವ್ಯವಸ್ಥಾಪಕ ಮೂಸಾ ಫಾಝಿಲ್ ಉಸ್ತುವಾರಿ ವಹಿಸಿದ್ದರು. ಸೀಲ್ ಡೌನ್ ಪ್ರದೇಶದಲ್ಲಿ ಕಿಟ್ ವಿತರಣೆಗೆ ಅನುಮತಿ ಕೊಡಿಸುವಲ್ಲಿ ಶಾಸಕ ಯುಟಿ ಖಾದರ್ ಅವರು ಸಹಕರಿಸಿದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story









