Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಲಾಕ್‍ಡೌನ್‍ನಿಂದ ನಲುಗಿದ ಸಾವಿರಾರು...

ಲಾಕ್‍ಡೌನ್‍ನಿಂದ ನಲುಗಿದ ಸಾವಿರಾರು ಸುಣ್ಣಗಾರರ ಬದುಕು

ಬಾಬುರೆಡ್ಡಿ ಚಿಂತಾಮಣಿಬಾಬುರೆಡ್ಡಿ ಚಿಂತಾಮಣಿ21 May 2020 10:39 PM IST
share

ಬೆಂಗಳೂರು, ಮೇ 21: ತಲ ತಲಮಾರುಗಳಿಂದ ಸುಣ್ಣ ಉತ್ಪಾದನೆ ಮಾಡಿ ಊರೂರು ಅಲೆದು ಸುಣ್ಣ ಮಾರಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಜನರ ಬದುಕು ಲಾಕ್‍ಡೌನ್‍ನಿಂದ ನಲುಗಿ ಹೋಗಿದ್ದು, ಅವರ ಬದುಕೇ ಕಮರಿ ಹೋದಂತಾಗಿದೆ.

ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಜನರು ತಮ್ಮ ಕುಲ ಕಸಬು ನಂಬಿಕೊಂಡು ಜೀವನ ನಡೆಸುವವರಿದ್ದಾರೆ. ಆದರೆ, ಸರಕಾರ ಕೊರೋನ ನಿಯಂತ್ರಣಕ್ಕಾಗಿ ಘೋಷಿಸಿರುವ ಲಾಕ್‍ಡೌನ್‍ನಿಂದ ಅವರ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿದೆ. ಇದರಿಂದ ಅವರು ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.

ಹಲವಾರು ಕುಟುಂಬಗಳು ಸುಣ್ಣ ಮಾರುವ ಉದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ದಿನನಿತ್ಯ ಅದರಿಂದ ಬರುವ ಆದಾಯದಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಆದರೆ, ಒಂದು ದಿನ ವ್ಯಾಪಾರವಿಲ್ಲದಿದ್ದರೂ ಉಪವಾಸದಿಂದ ಕಾಲ ದೂಡಬೇಕಾದ ಪರಿಸ್ಥಿತಿ ಇವರದ್ದು. ಅಂತಹುದರಲ್ಲಿ ಸುಮಾರು ಎರಡು ತಿಂಗಳ ಕಾಲ ಲಾಕ್‍ಡೌನ್‍ನ ಪರಿಣಾಮದಿಂದಾಗಿ ಸಂಪೂರ್ಣ ಆದಾಯ ಕಡಿತವಾಗಿದೆ.

ಆದಾಯವಿಲ್ಲದೇ ಈ ಕುಟುಂಬಗಳು ಅಸಹಾಯಕರಾಗಿ ಜೀವನ ನಡೆಸಲು ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೊದಲಿಗೆ ಇದ್ದದ್ದರಲ್ಲಿಯೇ ಸರಿದೂಗಿಸಿಕೊಂಡು ಜೀವನ ನಡೆಸುತ್ತಿದ್ದೆವು. ಅನಂತರ ಕೆಲವು ದಿನಗಳಾದ ಮೇಲೆ ಒಂದಷ್ಟು ಜನರ ಬಳಿ ಸಾಲ ಮಾಡಿಕೊಂಡು ಜೀವನ ನಡೆಸಿದೆವು. ಆದರೆ, ಇದೀಗ ಬದುಕು ಬಹಳ ದುಸ್ತರವಾಗಿದೆ. ಈಗ ಅಂಗಡಿಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದ್ದರೂ ಎಳ್ಳಷ್ಟು ವ್ಯಾಪಾರವಾಗುತ್ತಿಲ್ಲ. ಆದಾಯವಿಲ್ಲದೆ, ಬೇರೆ ಕೆಲಸವೂ ಇಲ್ಲದೇ ಪರದಾಡುವಂತಾಗಿದೆ ಎಂದು ಸುಣ್ಣ ವ್ಯಾಪಾರಿ ರಾಮನ್ನ ನೊಂದು ನುಡಿದರು.

ನಮಗೆ ಏಕಿಲ್ಲ ನೆರವು: ಕುಲಕಸುಬು ನಂಬಿಕೊಂಡು ಬದುಕುತ್ತಿರುವವರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಬರುವ ರಾಜಕಾರಣಿಗಳು ಈಗ ಯಾರೂ ನಮ್ಮ ಕಷ್ಟವನ್ನು ನೋಡುತ್ತಿಲ್ಲ. ಯಾವುದೇ ಸಂಘ ಸಂಸ್ಥೆಗಳಿಂದಲೂ ನೆರವು ಸಿಕ್ಕಿಲ್ಲ. ಸುಣ್ಣದಂತೆಯೇ ನಮ್ಮ ಬದುಕು ಸುಟ್ಟಂತಾಗಿದೆ ಎಂದು ಸುಣ್ಣ ವ್ಯಾಪಾರಿ ಅಂಗಡಿ ಮಾಲಕ ವೆಂಕಟರಾಯಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಡೋಲಾಯಮಾನವಾದ ಬದುಕು: ಸಾವಿರಾರು ರೂಪಾಯಿ ವೆಚ್ಚದಲ್ಲಿ ಕಲ್ಲು ತಂದು ಐನೂರು ರೂಪಾಯಿಗಳಿಗೆ ಒಂದು ಚೀಲ ಇದ್ದಿಲು ತಂದು ಬೆಳಗ್ಗೆಯಿಂದ ಸಂಜೆ ತನಕ ಭಟ್ಟಿ ತುಂಬಿ ಇಡೀ ರಾತ್ರಿ ಸುಟ್ಟ ಸುಣ್ಣವನ್ನು ಮಾರಿ ಬಂದ ಹಣದಲ್ಲಿ ಜೀವನ ನಡೆಯಬೇಕು. ಆದರೆ ಕೊರೋನ ವೈರಸ್‍ನ ಹೊಡೆತಕ್ಕೆ ಇಡೀ ಉದ್ಯಮ ತಲ್ಲಣಗೊಂಡಿದೆ. ಎಲ್ಲೆಡೆ ಕೆಂಪು, ಹಳದಿ ವಲಯವನ್ನಾಗಿ ವಿಂಗಡಿಸಲಾಗಿದೆ. ಅಲ್ಲಿ ಅಂಗಡಿಗಳಿಗೆ ಜನರು ಬರಲು ಭಯ ಪಡುತ್ತಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಎರಡು ತಿಂಗಳಿನಿಂದ ಭಟ್ಟಿ ಶುರು ಮಾಡಿಲ್ಲ. ಸುಣ್ಣ ಮಾರಿದರೆ ಮಾತ್ರ ನಮ್ಮ ಜೀವನ ನಡೆಯೋದು. ಇಲ್ಲದಿದ್ದರೆ ಕಷ್ಟ ಆಗುತ್ತದೆ. ಆದರೆ, ಕೊರೋನದಿಂದ ರಕ್ಷಿಸಲು ಲಾಕ್‍ಡೌನ್ ಮಾಡಿದ್ದಾರೆ. ಈಗ ಅದಕ್ಕೆ ಸಡಿಲಿಕೆ ನೀಡಿದ್ದಾರೆಯಾದರೂ, ಯಾರೂ ಅಂಗಡಿಗೆ ಬರುತ್ತಿಲ್ಲ. ಸರಕಾರ ಎಲ್ಲರಿಗೂ ಪರಿಹಾರ ನೀಡಿದೆ. ನಮ್ಮ ಬದುಕಿನ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ನಾವೇನು ಪಾಪ ಮಾಡಿದ್ದೇವೆ.

-ಸುಬ್ಬಣ್ಣ, ಸುಣ್ಣ ತಯಾರಕ

share
ಬಾಬುರೆಡ್ಡಿ ಚಿಂತಾಮಣಿ
ಬಾಬುರೆಡ್ಡಿ ಚಿಂತಾಮಣಿ
Next Story
X