ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭ ಯಾವಾಗ?: ಕೇಂದ್ರ ಸಚಿವರು ಉತ್ತರಿಸಿದ್ದು ಹೀಗೆ..
ಹೊಸದಿಲ್ಲಿ: ಕೊರೋನ ವೈರಸ್ ಹಾವಳಿ ಕಡಿಮೆಯಾದಲ್ಲಿ ಜೂನ್ ಮಧ್ಯಭಾಗದಲ್ಲಿ ಅಥವಾ ಜುಲೈ ಕೊನೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಆರಂಭವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಲಾಕ್ ಡೌನ್ ನ ನಂತರ ಹಾರಾಟ ನಡೆಸದೆ ಬಾಕಿಯಾಗಿರುವ ಪ್ರಯಾಣಿಕ ವಿಮಾನಗಳು ಮತ್ತೆ ಕಾರ್ಯಾಚರಿಸುವಂತೆ ಮಾಡಲು ಸರಕಾರ ಕೆಲಸ ಮಾಡುತ್ತಿದೆ ಎಂದರು.
“ಆಗಸ್ಟ್ ಮತ್ತು ಸೆಪ್ಟಂಬರ್ ವರೆಗೆ ಕಾಯುವುದೇಕೆ? ಪರಿಸ್ಥಿತಿ ಸುಧಾರಿಸಿದರೆ ಮತ್ತು ಅದರೊಂದಿಗೆ ಬದುಕುವುದನ್ನು ಅಭ್ಯಸಿಸಿದರೆ ಜೂನ್ ಮಧ್ಯಭಾಗ ಅಥವಾ ಜುಲೈ ಅಂತ್ಯದಲ್ಲಿ ಆರಂಭಿಸಬಾರದೇಕೆ?” ಎಂದವರು ಪ್ರಶ್ನಿಸಿದರು.
Next Story