ಲೋಂಬಾರ್ಡ್ ಆರೋಗ್ಯ ಸಹಾಯವಾಣಿ
ಉಡುಪಿ, ಮೇ 24: ಉಡುಪಿ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ ಯು ಪ್ರಥಮ ಬಾರಿಗೆ ಹೆರಿಗೆ ಮತ್ತು ಇತರ ಆರೋಗ್ಯ ಸೇವೆಗಳಿಗಾಗಿ ಉಚಿತ ದೂರ ಸಂಪರ್ಕ ಸಮಾಲೋಚನೆ ‘ಲೋಂಬಾರ್ಡ್ ಆರೋಗ್ಯ ಸಹಾಯ ವಾಣಿ’ಯನ್ನು ಮೇ 25ರಿಂದ ಆರಂಭಿಸಲಿದೆ.
ಹೆರಿಗೆ ಸೇವೆಗಳ ಸಹಾಯ ಪಡೆಯಲು ಮೊಬೈಲ್ ಸಂಖ್ಯೆ 9113878414 ಹಾಗೂ ಇತರ ವಿಭಾಗಗಳ ಸೇವೆಯ ಸಮಾಲೋಚನೆಗಾಗಿ ಮೊಬೈಲ್ ಸಂಖ್ಯೆ 7892256066, ಸ್ಥಿರ ದೂರವಾಣಿ ಸಂಖ್ಯೆ 0820-4294283, 4294284 ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.
ರವಿವಾರ ಹೊರತು ಪಡಿಸಿ ಪ್ರತಿ ದಿನ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಈ ಸೇವೆ ಲಭ್ಯ ಇದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





