Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈದ್ ಮುಬಾರಕ್

ಈದ್ ಮುಬಾರಕ್

ಆಬಿದಾ ಬಾನು, ಕೊಪ್ಪಆಬಿದಾ ಬಾನು, ಕೊಪ್ಪ24 May 2020 6:08 PM IST
share
ಈದ್ ಮುಬಾರಕ್

ಉಪವಾಸಿಗರು ರಮಝಾನ್ ತಿಂಗಳ ಪ್ರತಿದಿನವನ್ನು ಆತ್ಮಾವಲೋಕನ ಮಾಡುತ್ತಾ ತಮ್ಮ ಪಾಪ - ಪುಣ್ಯಗಳ ಮೇಲೆ ಕಣ್ಣಿಟ್ಟು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಲೂ ಅವನಿಂದ ಕ್ಷಮೆಯಾಚಿಸುತ್ತಲೂ ಕಳೆಯುತ್ತಾರೆ. ವರ್ಷದ ಬೇರೆಲ್ಲ ದಿನಗಳಲ್ಲಿ ಮಾಡುವುದಕ್ಕಿಂತ ಹೆಚ್ಚಿನ ಆರಾಧನಾ ಕರ್ಮಗಳನ್ನು ಮತ್ತು ಆತ್ಮ ವಿಮರ್ಶೆಯನ್ನು ಅವರು ರಮಝಾನ್ ತಿಂಗಳಲ್ಲಿ ಮಾಡುತ್ತಾರೆ. ಹಾಗೆಯೇ ಅವರ ದಾನ ಧರ್ಮ, ಜನಸೇವೆ ಇತ್ಯಾದಿ ಚಟುವಟಿಕೆಗಳೂ ಈ ತಿಂಗಳಲ್ಲಿ ತಾರಕದಲ್ಲಿರುತ್ತವೆ.

ರಮಝಾನ್ ತಿಂಗಳೆಂದರೆ ಉಪವಾಸಿಗ ಮುಸ್ಲಿಮರೆಲ್ಲಾ ಭಾರೀ ಸಮಯಪ್ರಜ್ಞೆ ಬೆಳೆಸಿಕೊಳ್ಳುವ ತಿಂಗಳು. ಆ ತಿಂಗಳಲ್ಲಿ ಹಲವು ಹೆಚ್ಚುವರಿ ಆಧ್ಯಾತ್ಮಿಕ ಹಾಗೂ ಆರಾಧನಾ ಚಟುವಟಿಕೆಗಳು ನಡೆಯುತ್ತಿರುತ್ತವೆ. ಎಲ್ಲವನ್ನೂ ಸಮಯಬದ್ಧವಾಗಿ ಸಕಾಲದಲ್ಲಿ ಮಾಡಬೇಕೆಂಬ ನಿಯಮವನ್ನು ಅವರು ಈ ತಿಂಗಳಲ್ಲಿ ಪಾಲಿಸುತ್ತಾರೆ. ಆದ್ದರಿಂದಲೇ, ತಿಂಗಳುದ್ದಕ್ಕೂ ಅವರು ಗಡಿಯಾರ ಮತ್ತು ಕ್ಯಾಲೆಂಡರ್ ಮೇಲೆ ಕಣ್ಣಿಟ್ಟಿರುತ್ತಾರೆ. ಉಪವಾಸಿಗರ ದೃಷ್ಠಿಯಲ್ಲಿ ನಿತ್ಯ ಎರಡು ಸಮಯಗಳು ಬಹಳ ಮುಖ್ಯವಾಗಿರುತ್ತವೆ: 1. ಸಹೂರ್ 2. ಇಫ್ತಾರ್. ಸಹೂರ್ ನೊಂದಿಗೆ ನಿತ್ಯದ ಉಪವಾಸ ಆರಂಭವಾಗುತ್ತದೆ. ಹಾಗೆಯೇ, ಇಫ್ತಾರ್ ನೊಂದಿಗೆ ನಿತ್ಯದ ಉಪವಾಸ ಪೂರ್ಣಗೊಳ್ಳುತ್ತದೆ.

ಇದು ರಮಝಾನ್ ತಿಂಗಳ ನಿತ್ಯದ ಕಥೆಯಾದರೆ, ‘ಈದುಲ್ ಫಿತ್ರ್’ (ರಮಝಾನ್ ಹಬ್ಬ) ಎಂಬುದು ಸಂಪೂರ್ಣ ರಮಝಾನ್ ತಿಂಗಳ ಎಲ್ಲ ಉಪವಾಸಗಳ ಪಾಲಿನ ‘ಇಫ್ತಾರ್’ ಆಗಿರುತ್ತದೆ. ಈ ಕಾರಣಕ್ಕಾಗಿಯೇ ಅದನ್ನು ‘ಈದುಲ್ ಫಿತ್ರ್’ ಅಥವಾ ‘ಈದ್ ಅಲ್ ಫಿತ್ರ್’ (ಇಫ್ತಾರ್ ನ ಹಬ್ಬ) ಎಂದು ಕರೆಯುತ್ತಾರೆ. ನಿಜವಾಗಿ ಫಿತ್ರ್ ಮತ್ತು ಇಫ್ತಾರ್ ಒಂದೇ ಮೂಲದ ಪದಗಳು. ರಮಝಾನ್ ತಿಂಗಳುದ್ದಕ್ಕೂ ಸೂರ್ಯಾಸ್ತಮಾನದ ಸಮಯವು ಆಯಾ ದಿನದ ಇಫ್ತಾರ್ ಸಮಯವಾಗಿರುತ್ತದೆ. ಆದರೆ, ರಮಝಾನ್ ತಿಂಗಳ ಕೊನೆಯ ದಿನ ಸಂಜೆ, ಶವ್ವಾಲ್ ತಿಂಗಳ ಚಂದ್ರದರ್ಶನವಾದಂತೆ ಆ ದಿನದ ಉಪವಾಸ ಮಾತ್ರವಲ್ಲ, ಆ ಸಂಪೂರ್ಣ ತಿಂಗಳ ಉಪವಾಸ ವ್ರತವು ಕೊನೆಗೊಳ್ಳುತ್ತದೆ. ಅಷ್ಟೇ ಏಕೆ? ಶವ್ವಾಲ್ ಮಾಸದ ಚಂದ್ರನ ದರ್ಶನದೊಂದಿಗೆ ಆ ವರ್ಷದ ಮಟ್ಟಿಗೆ ಉಪವಾಸದ ಋತು ಮುಗಿದಂತಾಗುತ್ತದೆ. ಈ ರೀತಿ ರಮಝಾನ್ ಮುಗಿಯಿತೆನ್ನುವ ಕ್ಷಣ ಉಪವಾಸಿಗರ ಪಾಲಿಗೆ ಭಾರೀ ಭಾವುಕತೆಯ ಕ್ಷಣವಾಗಿರುತ್ತದೆ. ಅದು ಹಲವು ಬಗೆಯ ಅನಿಸಿಕೆಗಳು ಮನದೊಳಗೆ ಮೂಡಿ ಉಕ್ಕುವ ಕ್ಷಣವಾಗಿರುತ್ತದೆ. ಅದು ಒಂದೆಡೆ ಏನನ್ನೋ ಸಾಧಿಸಿ ಬಿಟ್ಟೆವೆಂಬ ಸಂಭ್ರಮದ ಕ್ಷಣವಾದರೆ ಇನ್ನೊಂದೆಡೆ ಏನನ್ನೋ ಕಳೆದುಕೊಂಡೆವೆಂಬ ಸಂಕಟದ ಕ್ಷಣವೂ ಆಗಿರುತ್ತದೆ.

    

 ಬದುಕೆಂಬುದು ಒಂದು ಪರೀಕ್ಷಾವಧಿ ಎನ್ನುವುದು ಜಗತ್ತಿನ ಎಲ್ಲ ಮುಸಲ್ಮಾನರ ಮೂಲಭೂತ ನಂಬಿಕೆಗಳಲ್ಲೊಂದು. ಬದುಕು ಎಂಬ ಸಂಕ್ಷಿಪ್ತ ಅವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಲು ಸಿಗುವ ಒಂದೊಂದು ಅವಕಾಶವನ್ನೂ ಅವರು ತಮ್ಮ ಪಾಲಿನ ದೇವದತ್ತ ಸೌಭಾಗ್ಯ ಎಂದು ಪರಿಗಣಿಸುತ್ತಾರೆ. ಅಲ್ಲಾಹುಮ್ಮ ವಫ್ಫಿಕ್ನಾ ಲಿಮಾ ತುಹಿಬ್ಬು ವ ತರ್ಲಾ (ಓ ಅಲ್ಲಾಹ್, ನೀನು ಪ್ರೀತಿಸುವ ಮತ್ತು ನೀನು ಮೆಚ್ಚುವ ಕಾರ್ಯಗಳನ್ನು ಮಾಡುವ ಸೌಭಾಗ್ಯವನ್ನು ನಮಗೆ ಕರುಣಿಸು) ಎಂಬುದು ಅವರ ನಿತ್ಯ ಪ್ರಾರ್ಥನೆಗಳಲ್ಲೊಂದು. ಒಂದೊಂದು ಸತ್ಕಾರ್ಯ ಮಾಡಿದ ಬಳಿಕವೂ ಅವರು ದೇವರೇ, ಈ ನಮ್ಮ ಕರ್ಮವನ್ನು ಸ್ವೀಕರಿಸು ಎಂದು ವಿನೀತರಾಗಿ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾರೆ. ನಮಗೆ ಈ ಸತ್ಕಾರ್ಯವನ್ನು ಮಾಡುವ ಸೌಭಾಗ್ಯ ವನ್ನು ಕರುಣಿಸಿದ ನಿನಗಿದೋ ನಾವು ಕೃತಜ್ಞರು - ಎನ್ನುತ್ತಾ ವಿನಯದೊಂದಿಗೆ ಅವನ ಮುಂದೆ ತಲೆ ಬಾಗುತ್ತಾರೆ. ಯಾವುದೇ ಕರ್ಮವನ್ನು ಅವನು ಸ್ವೀಕರಿಸದಿದ್ದರೆ ಅದೆಷ್ಟೇ ದೊಡ್ಡ ಸತ್ಕಾರ್ಯವಾಗಿದ್ದರೂ ಅದು ವ್ಯರ್ಥ ಎಂದು ಅವರು ನಂಬಿರುತ್ತಾರೆ. ಹಾಗೆಯೇ ಪ್ರತಿಯೊಂದು ಪಾಪ ಕೃತ್ಯದಿಂದ ನಮ್ಮನ್ನು ರಕ್ಷಿಸು ಎಂದು ನಿತ್ಯ ಹಲವು ಬಾರಿ ಅವರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಪಾಪಕೃತ್ಯವೆಸಗದೆ ಕಳೆದು ಹೋದ ಒಂದೊಂದು ಕ್ಷಣಕ್ಕಾಗಿಯೂ ಅವರು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ನಿತ್ಯದ ಈ ಕಾಯಕ ರಮಝಾನ್ ತಿಂಗಳಲ್ಲಿ ಉತ್ತುಂಗದಲ್ಲಿರುತ್ತದೆ. ಉಪವಾಸಿಗರು ರಮಝಾನ್ ತಿಂಗಳ ಪ್ರತಿದಿನವನ್ನು ಆತ್ಮಾವಲೋಕನ ಮಾಡುತ್ತಾ ತಮ್ಮ ಪಾಪ - ಪುಣ್ಯಗಳ ಮೇಲೆ ಕಣ್ಣಿಟ್ಟು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಲೂ ಅವನಿಂದ ಕ್ಷಮೆಯಾಚಿಸುತ್ತಲೂ ಕಳೆಯುತ್ತಾರೆ. ವರ್ಷದ ಬೇರೆಲ್ಲ ದಿನಗಳಲ್ಲಿ ಮಾಡುವುದಕ್ಕಿಂತ ಹೆಚ್ಚಿನ ಆರಾಧನಾ ಕರ್ಮಗಳನ್ನು ಮತ್ತು ಆತ್ಮ ವಿಮರ್ಶೆಯನ್ನು ಅವರು ರಮಝಾನ್ ತಿಂಗಳಲ್ಲಿ ಮಾಡುತ್ತಾರೆ. ಹಾಗೆಯೇ ಅವರ ದಾನ ಧರ್ಮ, ಜನಸೇವೆ ಇತ್ಯಾದಿ ಚಟುವಟಿಕೆಗಳೂ ಈ ತಿಂಗಳಲ್ಲಿ ತಾರಕದಲ್ಲಿರುತ್ತವೆ. ಹಬ್ಬದ ದಿನವು ಶ್ರದ್ಧಾಳು ಮುಸ್ಲಿಮರ ಪಾಲಿಗೆ ವಿರಾಮದ ದಿನವಾಗಿರುವುದಿಲ್ಲ. ಮುಸ್ಲಿಮರು ತಮ್ಮ ಎರಡು ವಾರ್ಷಿಕ ಹಬ್ಬಗಳ ಸಂದರ್ಭದಲ್ಲೂ ಕೆಲವು ಹೆಚ್ಚುವರಿ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಉದಾ: ಈದ್ ನ ದಿನ, ನಿತ್ಯದ ಐದು ಹೊತ್ತಿನ ನಮಾಝ್ ಜೊತೆಗೆ ಒಂದು ಹೊತ್ತಿನ ಹೆಚ್ಚುವರಿ ನಮಾಝ್ ಅನ್ನು ಸಾಮೂಹಿಕವಾಗಿ ಸಲ್ಲಿಸಬೇಕು. ಸೂರ್ಯೋದಯದ ಬಳಿಕ ಸಲ್ಲಿಸಲಾಗುವ ಈ ನಮಾಝ್ ನಲ್ಲಿ ಬೇರೆ ನಮಾಝ್‌ಗಳಲ್ಲಿ ಹೇಳುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತಕ್ಬೀರ್ (ಅಲ್ಲಾಹನೇ ಮಹಾನ್ ಎಂದು ಸಾರುವ ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ) ಹೇಳಬೇಕು. ಸಾಮಾನ್ಯವಾಗಿ ಶುಕ್ರವಾರದ ದಿನ ಮಸೀದಿಯಲ್ಲಿ ಮೊದಲು ಭಾಷಣ ಅಥವಾ ಉಪದೇಶ ನಡೆದು ಆ ಬಳಿಕ ನಮಾಝ್ ನಡೆಯುತ್ತದೆ. ಆದರೆ ಹಬ್ಬದ ದಿನ ಮೊದಲು ನಮಾಝ್ ನಡೆಯುತ್ತದೆ ಮತ್ತು ಆ ಬಳಿಕ ಉಪದೇಶ ನಡೆಯುತ್ತದೆ. ಉಪದೇಶಿಸುವವರು ಮುಖ್ಯವಾಗಿ - ಪವಿತ್ರ ಕುರ್ ಆನ್ ಗ್ರಂಥವನ್ನು ಕಳಿಸಿ ಕೊಟ್ಟದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಲು ನೀವು ತಿಂಗಳಿಡೀ ಉಪವಾಸ ಆಚರಿಸಿದಿರಿ, ಕುರ್‌ಆನ್‌ನ ಮಾರ್ಗದರ್ಶನ ಪ್ರಕಾರ ಜೀವನ ಸಾಗಿಸಲು ಸಾಧ್ಯವಾಗಬೇಕೆಂದು ನಿಮ್ಮ ಚಿತ್ತವನ್ನು ಹದ್ದು ಬಸ್ತಿನಲ್ಲಿಡುವ ಮತ್ತು ಸ್ವನಿಯಂತ್ರಣದ ತರಬೇತಿಯನ್ನು ಪಡೆದಿರಿ. ಈ ಸ್ಫೂರ್ತಿಯನ್ನು ವರ್ಷವಿಡೀ ಉಳಿಸಿಕೊಳ್ಳಿ, ಕುರ್‌ಆನ್‌ನ ಮಾರ್ಗದರ್ಶನವನ್ನು ನಿತ್ಯ ಜೀವನದಲ್ಲಿ ಕಟ್ಟು ನಿಟ್ಟಾಗಿ ಪಾಲಿಸಿ - ಎಂದು ಬೋಧಿಸುತ್ತಾರೆ. ಹಬ್ಬದ ದಿನ ಮುಸಲ್ಮಾನರು ಪರಸ್ಪರ ಎದುರುಗೊಂಡಾಗ ಈದ್ ಮುಬಾರಕ್ ಎಂದು ಹಬ್ಬದ ಶುಭಹಾರೈಕೆಯನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ತಕಬ್ಬಲಲ್ಲಾಹು ಮಿನ್ನಾ ವ ಮಿನ್ ಕುಮ್ (ಅಲ್ಲಾಹನು ನಮ್ಮಿಂದಲೂ ನಿಮ್ಮಿಂದಲೂ - ಸತ್ಕರ್ಮಗಳನ್ನು- ಸ್ವೀಕರಿಸಲಿ) ಎಂದು ಪರಸ್ಪರರ ಪರವಾಗಿ ಪ್ರಾರ್ಥಿಸುತ್ತಾರೆ.

 ಈ ವಿಶೇಷ ನಮಾಝ್‌ಗೆ ಮುಂಚಿತವಾಗಿ ‘ಸದಖ ಅಲ್ ಫಿತ್ರ್’ ಅಥವಾ ‘ಫಿತ್ರ್ ದಾನ’ ವನ್ನು ಪಾವತಿಸಬೇಕು. ಈ ದಾನವನ್ನು ಶ್ರೀಮಂತರು ಮಾತ್ರವಲ್ಲ, ಹಬ್ಬದ ದಿನದ ತಮ್ಮ ಅನ್ನಾಹಾರಕ್ಕೆ ಎಷ್ಟು ಬೇಕೋ ಅದಕ್ಕಿಂತ ಹೆಚ್ಚಿನ ಸಂಪತ್ತಿರುವ ಎಲ್ಲರೂ ಪಾವತಿಸಬೇಕು. ಗಂಡು, ಹೆಣ್ಣು, ಹಿರಿಯರು, ಮಕ್ಕಳು ಹೀಗೆ ಕುಟುಂಬದ ಪ್ರತಿಯೊಬ್ಬ ಸದಸ್ಯನ ಪರವಾಗಿಯೂ ಪಾವತಿಸಬೇಕು. ಮನೆಯ ಪ್ರತಿ ಒಬ್ಬ ಸದಸ್ಯನ ಪರವಾಗಿ, ಸುಮಾರು 3 ಕಿಲೋಗ್ರಾಮ್ ನಷ್ಟು ಸ್ಥಳೀಯ ಧಾನ್ಯವನ್ನು ಅಥವಾ ಅದರ ಮೌಲ್ಯವನ್ನು ಅರ್ಹ ಬಡಜನರಿಗೆ ತಲುಪಿಸಬೇಕು. ಈ ಮೊತ್ತವನ್ನು ಈದ್ ನಮಾಝ್‌ಗೆ ಮುನ್ನವೇ ಪಾವತಿಸಬೇಕು. ಸಾಧ್ಯವಾದರೆ ಈದ್ ನ ಹಿಂದಿನ ದಿನ ಅಥವಾ ಅದಕ್ಕಿಂತಲೂ ಮುನ್ನ ಪಾವತಿಸಿದರೆ ಒಳ್ಳೆಯದು. ಈ ಮೂಲಕ, ಸಮಾಜದ ತೀರಾ ಬಡವರ್ಗದವರೂ ನೆಮ್ಮದಿಯಿಂದ ಹಬ್ಬದಲ್ಲಿ ಪಾಲುಗೊಳ್ಳಲು ಸಾಧ್ಯವಾಗುತ್ತದೆ. ಒಂದೆಡೆ ಕೆಲವರು ಹಬ್ಬದ ಸಂಭ್ರಮದಲ್ಲಿರುವಾಗ ಇನ್ನೊಂದೆಡೆ ಕೆಲವು ಮಂದಿ ಹೊಟ್ಟೆಗಿಲ್ಲದೆ ನರಳುವುದು ತಪ್ಪುತ್ತದೆ.

 ಹಬ್ಬದ ದಿನ ಏನನ್ನು ಧರಿಸಬೇಕು, ಏನನ್ನು ತಿನ್ನಬೇಕು ಇತ್ಯಾದಿ ವಿಷಯಗಳಲ್ಲಿ ಧರ್ಮವು ಏನನ್ನೂ ನಿರ್ಬಂಧಿಸುವುದಿಲ್ಲ. ಇತರೆಲ್ಲ ಸಾಂಸ್ಕೃತಿಕ ವಿಷಯಗಳಂತೆ ಈವಿಷಯದಲ್ಲೂ ಕೆಲವು ನೈತಿಕ ನಿಯಮಗಳಿಗೆ ಬದ್ಧವಾಗಿ, ಜನರಿಗೆ ಅವರವರ ಪ್ರದೇಶದ ಅಥವಾ ಇಚ್ಛೆಯ ಆಚಾರಗಳನ್ನು ಅನುಸರಿಸುವುದಕ್ಕೆ ಮುಕ್ತ ಅವಕಾಶವಿದೆ.

 ಆದ್ದರಿಂದಲೇ ಜಗತ್ತಿನ ವಿವಿಧ ಪ್ರದೇಶಗಳ ಮುಸ್ಲಿಮರು ಹಬ್ಬದ ದಿನ ತಮ್ಮದೇ ಆದ ವಿಶೇಷ ಆಹಾರ ಪಾನೀಯಗಳನ್ನು ತಯಾರಿಸಿ ಪರಸ್ಪರ ಹಂಚಿಕೊಂಡು ಸಂಭ್ರಮಿಸುತ್ತಾರೆ. ಪ್ರತಿಯೊಂದು ಪ್ರದೇದವರು ತಮ್ಮದೇ ಆದ ಸಂಸ್ಕೃತಿಗಳನ್ನು ಪ್ರತಿನಿಧಿಸುವ ವಿಶಿಷ್ಟ ಉಡುಗೆಗಳನ್ನು ಧರಿಸುತ್ತಾರೆ. ಹೆಚ್ಚಿನೆಡೆ ಮಹಿಳೆಯರು ಮತ್ತು ಮಕ್ಕಳು ಸಾಮೂಹಿಕ ಈದ್ ನಮಾಝ್ ನಲ್ಲಿ ಭಾಗವಹಿಸುತ್ತಾರೆ. ಕೆಲವು ಊರುಗಳಲ್ಲಿ ಈದ್ ನಮಾಝ್ ಅನ್ನು ಮಸೀದಿಯ ಬದಲು ‘ಈದ್ ಗಾಹ್’ ಎಂಬ ತೆರೆದ ಮೈದಾನದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸಲ್ಲಿಸಲಾಗುತ್ತದೆ. ಈ ಬಾರಿ ಕೋವಿಡ್-19 ದುರಂತದಿಂದಾಗಿ ಈ ಎಲ್ಲ ನಿಯಮಗಳು ಅಮಾನತಿನಲ್ಲಿವೆ. ಮುಸ್ಲಿಮರೆಲ್ಲ ಸನ್ನಿವೇಶದ ವಿಷಮತೆಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಸ್ಥಳೀಯ ನಾಯಕರ ಮಾರ್ಗದರ್ಶನದ ಪ್ರಕಾರ ತೀರಾ ಸೀಮಿತ ರೀತಿಯಲ್ಲಿ ಈದ್ ಆಚರಿಸಲಿದ್ದಾರೆ.

share
ಆಬಿದಾ ಬಾನು, ಕೊಪ್ಪ
ಆಬಿದಾ ಬಾನು, ಕೊಪ್ಪ
Next Story
X