Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ರವಿವಾರ ಒಟ್ಟು 23 ಕೊರೋನ...

ಉಡುಪಿ: ರವಿವಾರ ಒಟ್ಟು 23 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆ

ಮೂವರು ಪೊಲೀಸರು, ತುಂಬು ಗರ್ಭಿಣಿಗೆ ಸೋಂಕು

ವಾರ್ತಾಭಾರತಿವಾರ್ತಾಭಾರತಿ24 May 2020 8:31 PM IST
share
ಉಡುಪಿ: ರವಿವಾರ ಒಟ್ಟು 23 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆ

ಉಡುಪಿ, ಮೇ 24: ಉಡುಪಿ ಜಿಲ್ಲೆಯಲ್ಲಿ ಇಂದು ತುಂಬು ಗರ್ಭಿಣಿ ಹಾಗೂ ಮೂರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 23ಮಂದಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಕಂಡುಬಂದಿವೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ನಿನ್ನೆಯವರೆಗೆ 53 ಸಾಸಿಟಿವ್ ಪ್ರಕರಣಗಳೊಂದಿಗೆ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ, ಇಂದು ಒಟ್ಟು 76 ಪ್ರಕರಣಗಳೊಂದಿಗೆ 12ನೇ ಸ್ಥಾನಕ್ಕೆ ನೆಗೆದಿದ್ದು, ಪಕ್ಕದ ದಕ್ಷಿಣ ಕನ್ನಡ (16) ಹಾಗೂ ಉತ್ತರ ಕನ್ನಡ (17) ಜಿಲ್ಲೆಗಳನ್ನು ಹಿಂದಿಕ್ಕಿ ಮುಂದಕ್ಕೆ ಸಾಗಿದೆ.

ಇಂದು ವರದಿಯಾದ 23 ಪ್ರಕರಣಗಳಲ್ಲಿ 17 ಮಹಾರಾಷ್ಟ್ರ ರಾಜ್ಯದ ವಿವಿದೆಡೆಗಳಿಂದ ಬಂದವರು, ಒಬ್ಬ ಯುವಕ ತೆಲಂಗಾಣದಿಂದ ಬಂದವರು, ಮೂವರು ಬ್ರಹ್ಮಾವರ, ಅಜೆಕಾರು, ಕಾರ್ಕಳ ಗ್ರಾಮಾಂತರ ಠಾಣೆಗಳ ಪೊಲೀಸ್ ಸಿಬ್ಬಂದಿ, ಒಬ್ಬರು ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿ ಹಾಗೂ ಯುಎಇಯಿಂದ ಆಗಮಿಸಿದ 44ರ ಹರೆಯದ ಮಹಿಳೆ ಸೇರಿದ್ದಾರೆ.

ರವಿವಾರ ಪಾಸಿಟಿವ್ ಆದ 23 ಮಂದಿಯಲ್ಲಿ ಐವರು ಕುಂದಾಪುರ ತಾಲೂಕಿ ನವರಾದರೆ, ಎಂಟು ಮಂದಿ ಉಡುಪಿ ತಾಲೂಕಿನವರು, 10 ಮಂದಿ ಕಾರ್ಕಳ ತಾಲೂಕಿನವರು. ಮೇ 18ರಂದು ಯುಎಇಯಿಂದ ಬಂದ ಉದ್ಯಾವರದವರಾಗಿದ್ದು, ಉಡುಪಿಯ ಕ್ವಾರಂಟೈನ್‌ನಲ್ಲಿದ್ದರು ಎಂದು ಡಾ.ಸೂಡ ತಿಳಿಸಿದರು.

ಒಟ್ಟಾರೆಯಾಗಿ ಇಂದು 11 ಮಂದಿ ಪುರುಷರು, 8 ಮಂದಿ ಮಹಿಳೆಯರು ಹಾಗೂ 10 ವರ್ಷದೊಳಗಿನ ನಾಲ್ವರು ಮಕ್ಕಳು ಪಾಸಿಟಿವ್ ಬಂದವರಾಗಿದ್ದಾರೆ. 19 ಜಿಲ್ಲೆಯ ಹೊರಗಿನಿಂದ ಬಂದವರದ್ದಾಗಿದ್ದರೆ ಉಳಿದ ನಾಲ್ಕು ಪ್ರಕರಣಗಳು ಜಿಲ್ಲೆಯ ಒಳಗಿನಿಂದಲೇ ವರದಿಯಾಗಿದೆ. ಅದರಲ್ಲೂ 51, 41 ಹಾಗೂ 29 ವರ್ಷ ಪ್ರಾಯದ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳಲ್ಲಿ ಕೊರೋನ ಸೋಂಕು ಕಂಡುಬಂದಿದೆ. ಇವರೆಲ್ಲರನ್ನೂ ನಗರದ ಡಾ.ಟಿಎಂಎ ಪೈಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಜೆಕಾರು ಠಾಣೆಯ ಎಎಸ್‌ಐ, ಕಾರ್ಕಳ ಗ್ರಾಮಾಂತರ ಹಾಗೂ ಬ್ರಹ್ಮಾವರ ಠಾಣೆಗಳ ಕಾನ್‌ಸ್ಟೇಬಲ್‌ಗಳಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದ್ದು, ಈ ಎಲ್ಲಾ ಠಾಣೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸರಕಾರಿ ಮಾರ್ಗಸೂಚಿಯ ಪ್ರಕಾರ ಇವುಗಳನ್ನು ಸ್ಯಾನಿಟೈಸ್ ಮಾಡಿ 48 ಗಂಟೆ ಬಿಟ್ಟು ಪುನಹ ತೆರೆಯಬೇಕಾಗುತ್ತದೆ. ಇದರೊಂದಿಗೆ ಮೂವರ ನಿಕಟ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಎಸ್ಪಿಯವರು ಈ ಬಗ್ಗೆ ವಿಶೇಷ ನಿಗಾ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಜಿಲ್ಲೆಯ ಮಟ್ಟಿಗೆ ತುಂಬಾ ಮಹತ್ವದ ಬೆಳವಣಿಗೆ ಎಂದರೆ ಕಾರ್ಕಳ ತಾಲೂಕಿನ ತುಂಬು ಗರ್ಭಿಣಿಯೊಬ್ಬರಿಗೆ ಕೊರೋನ ಸೋಂಕು ತಗಲಿರುವುದು. 22ರ ಹರೆಯದ ಆಕೆಗೆ ಎಲ್ಲಿಂದ, ಹೇಗೆ, ಯಾರ ಸಂಪರ್ಕದಿಂದ ಸೋಂಕು ಬಂದಿದೆ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ. 9 ತಿಂಗಳ ಗರ್ಭಿಣಿಯಾಗಿರುವ ಆಕೆಗೆ ಇನ್ನು 10-15ದಿನಗಳಲ್ಲಿ ಹೆರಿಗೆಯಾಗಲಿದೆ. ಹೀಗಾಗಿ ಆಕೆಯ ಬಗ್ಗೆ ವಿಶೇಷ ನಿಗಾ ವಹಿಸಲಿದ್ದೇವೆ. ಜೊತೆಗೆ ಆಕೆಗೆ ಹೇಗೆ ಸೋಂಕು ಬಂದಿದೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಡಿಸಿ ತಿಳಿಸಿದರು.

ಮತ್ತೆ ನಾಲ್ವರು ಬಾಲಕರಿಗೆ ಪಾಸಿಟಿವ್
ಇಂದು ಪಾಸಿಟಿವ್ ಬಂದ ಹತ್ತು ವರ್ಷ ಪ್ರಾಯದೊಳಗಿನ ನಾಲ್ವರು ಬಾಲಕರು ಮುಂಬಯಿಯಿಂದ ತಮ್ಮ ಹೆತ್ತವರೊಂದಿಗೆ ಬಂದವರು. ಉಳಿದಂತೆ 11 ಮಂದಿ ಪುರುಷರು ಹಾಗೂ ಎಂಟು ಮಂದಿ ಮಹಿಳೆಯರು ಕೊರೋನ ಸೋಂಕಿಗೆ ತುತ್ತಾಗಿದ್ದಾರೆ.

ಇಂದು ಪಾಸಿಟಿವ್ ಆದವರು 35ರ ಹರೆಯದ ಮಹಿಳೆ (ಪಿ 1961), 22ರ ಮಹಿಳೆ (2045), 24ರ ಮಹಿಳೆ (2048), 35ರ ಮಹಿಳೆ (2049), 29ರ ಮಹಿಳೆ (2053), 23ರ ಮಹಿಳೆ (2055), 29ರ ಮಹಿಳೆ (2056) ಹಾಗೂ ಯುಎಇಯಿಂದ ಮರಳಿದ 44ರ ಮಹಿಳೆ (2058).
51 ವರ್ಷ ಪ್ರಾಯದ ಪುರುಷ (2040), 41ರ ಪುರುಷ (2041), 32ರ ಯುವಕ(2042), 50ರ ಪುರುಷ (2044),37ರ ಪುರುಷ (2046), 26ರ ಯುವಕ (2047), 29ರ ಯುವಕ (2051), 48 ವರ್ಷ ಪ್ರಾಯದ ಪುರುಷ (2054), 30ರ ಯುವಕ (2057), 45ರ ಪುರುಷ (2066), 26ರ ಯುವಕ (2067)ನಲ್ಲಿ ಸೋಂಕು ಪತ್ತೆಯಾಗಿದೆ.

ಉಳಿದಂತೆ 4 ವರ್ಷ ಪ್ರಾಯದ ಗಂಡು ಮಗು (2043), ಒಂದು ವರ್ಷದ ಗಂಡು ಮಗು (2050) ಹಾಗೂ 4 ವರ್ಷದ ಗಂಡು ಮಗು (2052) ಹಾಗೂ 2 ವರ್ಷದ ಗಂಡು ಮಗು (2065)ವಿನಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X