ಕಾಳಿಂಗ ಸರ್ಪಕ್ಕೆ ಬಕೆಟ್ ನೀರಿನಿಂದ ಸ್ನಾನ ಮಾಡಿಸಿದ ಯುವಕ: ಎಲ್ಲರ ಅಚ್ಚರಿಗೆ ಕಾರಣವಾದ ವೀಡಿಯೊ ವೈರಲ್

ಹೊಸದಿಲ್ಲಿ,ಮೇ 25: ತೆರೆದ ಕಂಪೌಂಡ್‌ನೊಳಗೆ ದೊಡ್ಡ ಗಾತ್ರದ ಕಾಳಿಂಗ ಸರ್ಪಕ್ಕೆ ವ್ಯಕ್ತಿಯೊಬ್ಬ ಬಕೆಟ್‌ನಿಂದ ನೀರು ಸುರಿಯುವ ಹುಬ್ಬೇರಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವಾಧಿಕಾರಿ ಸುಶಾಂತ್ ನಂದಾ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಾಕಿದ್ದು, ದಯವಿಟ್ಟು ಯಾರೂ ಕೂಡ ಮನೆಯಲ್ಲಿ ಇದನ್ನು ಪ್ರಯತ್ನಿಸಬೇಡಿ ಎಂದು ಅವರು ವಿನಂತಿಸಿದ್ದಾರೆ.
ವ್ಯಕ್ತಿಯೊಬ್ಬ ಹಾವಿನ ತಲೆಯ ಮೇಲೆ ಬಕೆಟ್‌ನಿಂದ ನೀರು ಸುರಿಯುವ ದೃಶ್ಯ ವೀಡಿಯೊದಲ್ಲಿದ್ದು, ಇದಕ್ಕೆ ಹಾವು ಕೂಡ ತನ್ನ ರೋಷವನ್ನು ತೋರಿಸದೆ ಸುಮ್ಮನಿತ್ತು. ವ್ಯಕ್ತಿಯು ಹಾವನ್ನು ನಿಭಾಯಿಸುವಲ್ಲಿ ಪರಿಣತಿ ಪಡೆದಿರುವಂತೆ ಕಾಣುತ್ತಿದೆ.ಎಚ್ಚರಿಕೆಯಿಂದ ಹಾವಿನ ತಲೆಯ ಮೇಲೆ ನೀರು ಸುರಿಯುವುದು ಕಂಡುಬಂತು.
ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಅರಣ್ಯಾಧಿಕಾರಿ ಸುಶಾಂತ್ ನಂದಾ, ಮನೆಯಲ್ಲಿ ಇಂತಹ ಸಾಹಸಕ್ಕೆ ಕೈಹಾಕಬೇಡಿ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಯಾರು ಇದನ್ನು ಪ್ರಯತ್ನಿಸಬಾರದು ಎಂದು ಟ್ವೀಟ್ ಮಾಡಿದ್ದಾರೆ.
ರವಿವಾರ 50 ಸೆಕೆಂಡ್‌ಗಳ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, 73,000 ಜನರು ವೀಕ್ಷಿಸಿದ್ದಾರೆ. ವ್ಯಕ್ತಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
OMG! It's a King Cobra. The man has some guts.
— Deb_Jai_Hind (@Deb_Jai_Hind) May 24, 2020







