ಜಮ್ಮು-ಕಾಶ್ಮೀರದ ಲೆ.ಗವರ್ನರ್ ಸಲಹೆಗಾರರ ಪತ್ನಿ, ಪುತ್ರನಿಗೆ ಕೋವಿಡ್-19 ಸೋಂಕು

ಜಮ್ಮು,ಮೇ 25: ಜಮ್ಮು-ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಜಿ.ಸಿ.ಮುರ್ಮು ಅವರ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಪತ್ನಿ ಮತ್ತು ಪುತ್ರ ಕೊರೋನ ವೈರಸ್ ಸೋಂಕಿಗೊಳಗಾಗಿದ್ದಾರೆ. ಸಲಹೆಗಾರರು ರಿಯಾಸಿ ಜಿಲ್ಲೆಯ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ವಯಂ ಕ್ವಾರಂಟೈನ್‌ಗೊಳಗಾಗಿದ್ದು,ಅದೇ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಅವರ ಪತ್ನಿ ಮತ್ತು ಪುತ್ರನನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಲಹೆಗಾರರ ಪತ್ನಿ ಮತ್ತು ಪುತ್ರ ಕೆಲವು ದಿನಗಳ ಹಿಂದೆ ದಿಲ್ಲಿಯಿಂದ ಮರಳಿದ್ದು ಅತಿಥಿ ಗೃಹವೊಂದರಲ್ಲಿ ಉಳಿದುಕೊಂಡಿದ್ದರು. ರವಿವಾರ ರಾತ್ರಿ ಅವರ ಸ್ಯಾಂಪಲ್‌ಗಳ ಪರೀಕ್ಷಾ ವರದಿಗಳು ಬಂದಿದ್ದು,ಇಬ್ಬರೂ ಪಾಸಿಟಿವ್ ಆಗಿದ್ದಾರೆ. ಸಲಹೆಗಾರರ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅತಿಥಿ ಗೃಹದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರ ಪತ್ತೆ ಕಾರ್ಯ ನಡೆಯುತ್ತಿದ್ದು,ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.
Next Story





