ಅಹ್ಮದಾಬಾದ್ ಸರಕಾರಿ ಆಸ್ಪತ್ರೆಯ ನರ್ಸ್ ಆತ್ಮಹತ್ಯೆ
ಅಹ್ಮದಾಬಾದ್,ಮೇ 25: ಇಲ್ಲಿಯ ಸರಕಾರಿ ಆಸ್ಪತ್ರೆಯ 28ರ ಹರೆಯದ ನರ್ಸ್ ಓರ್ವಳು ಸೋಮವಾರ ನ್ಯೂ ಮಣಿನಗರದ ವಸತಿ ಸಮುಚ್ಚಯದ ಹತ್ತನೇ ಅಂತಸ್ತಿನಲ್ಲಿಯ ತನ್ನ ಹೆತ್ತವರ ಫ್ಲಾಟ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತನ್ನ ಪುತ್ರಿ ಕಳೆದ 2-3 ದಿನಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು ಎಂದು ಮೃತಳ ತಂದೆ ತಿಳಿಸಿದ್ದಾರೆ.
ಮೃತಳು ವಿವಾಹಿತೆಯಾಗಿದ್ದು ಪತಿಯೊಂದಿಗೆ ಸಿಟಿಎಂ ಪ್ರದೇಶದಲ್ಲಿ ವಾಸವಿದ್ದಳು. ಆದರೆ ಕೆಲವು ದಿನಗಳ ಹಿಂದೆ ತವರಿಗೆ ಬಂದಿದ್ದು, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು. ಆತ್ಮಹತ್ಯೆಗೆ ಕಾರಣವನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
Next Story