ಹೆಚ್ಚುತ್ತಿರುವ ಕೊರೋನ: ಭಾರತದಲ್ಲಿರುವ ಚೀನಿಯರ ಏರ್‌ಲಿಫ್ಟ್‌ಗೆ ಚೀನಾ ಸಿದ್ಧತೆ
ಹೊಸದಿಲ್ಲಿ, ಮೇ 25: ಕೊರೋನ ವೈರಸ್ ಹಾವಳಿಯಿಂದಾಗಿ ಭಾರತದಲ್ಲಿ ಸಿಲುಕಿರುವ ಹಾಗೂ ತಾಯ್ನಾಡಿಗೆ ವಾಪಾಸಾಗಲು ಬಯಸುತ್ತಿರುವ ತನ್ನ ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ಪ್ರವಾಸಿಗರನ್ನು ತೆರವುಗೊಳಿಸಲು ಚೀನಾ ನಿರ್ಧರಿಸಿದೆ.
ಈ ಬಗ್ಗೆ ಚೀನಾ ರಾಯಭಾರಿ ಕಚೇರಿಯು ಸೋಮವಾರ ವೆಬ್‌ಸೈಟ್ ಒಂದರಲ್ಲಿ ನೋಟಿಸ್ ಒಂದನ್ನು ಪ್ರಕಟಿಸಿದ್ದು, ತಾಯ್ನಾಡಿಗೆ ವಾಪಾಸಾಗಲು ಬಯಸುತ್ತಿರುವ ಚೀನಿ ಪ್ರಜೆಗಳು ವಿಶೇಷ ವಿಮಾನಗಳಿಗಾಗಿ ಟಿಕೆಟ್ ಕಾದಿರಿಸಬಹುದೆಂದು ಹೇಳಿದೆ.
ಚೀನಾಗೆ ಹಿಂತಿರುಗಲು ಬಯಸುವವರು ಎಲ್ಲಾ ರೀತಿಯ ಕ್ವಾರಂಟೈನ್ ನಿಬಂಧನೆಗಳನ್ನು ಹಾಗೂ ಸೋಂಕುರೋಗ ತಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಚೀನಿ ರಾಯಭಾರಿ ಕಟೇರಿ ನೋಟಿಸ್‌ನಲ್ಲಿ ತಿಳಿಸಿದೆ.
ಆದರೆ ಕೊರೋನ ಸೋಂಕಿನ ಚಿಕಿತ್ಸೆ ಪಡೆಯುತ್ತಿರುವವರು ಅಥವಾ ಕಳೆದ 14 ದಿನಗಳಿದ ಸೋಂಕಿನ ಲಕ್ಷಣಗಳನ್ನು ಪ್ರದರ್ಶಿಸುತ್ತಿರುವವರು ಪ್ರಯಾಣಿಸುವಂತಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
Next Story