Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೊರೋನ: ಅತಿ ಶ್ರೀಮಂತರಿಗೆ ಶೇಕಡ 2...

ಕೊರೋನ: ಅತಿ ಶ್ರೀಮಂತರಿಗೆ ಶೇಕಡ 2 ಸಂಪತ್ತಿನ ತೆರಿಗೆ ವಿಧಿಸಲು ಅಭಿಯಾನ

ವಾರ್ತಾಭಾರತಿವಾರ್ತಾಭಾರತಿ25 May 2020 11:23 PM IST
share
ಕೊರೋನ: ಅತಿ ಶ್ರೀಮಂತರಿಗೆ ಶೇಕಡ 2 ಸಂಪತ್ತಿನ ತೆರಿಗೆ ವಿಧಿಸಲು ಅಭಿಯಾನ

ಮಾನ್ಯರೇ,

ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು ಸಾಂವಿಧಾನಿಕ ದಾರಿಯಾದ 1% ಅತಿ ಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ: ಈ ಅಭಿಯಾನದಲ್ಲಿ 2020 ಮೇ 1 ರ ಸಂಪತ್ತಿನ ತೆರಿಗೆ ಪಿಟಿಷನ್‍ಗೆ ಸಹಿ ಮಾಡುವ ಮೂಲಕ ಪಾಲ್ಗೊಳ್ಳಿ ಎಂದು ಮನವಿ ಮಾಡುತ್ತಿದ್ದೇವೆ.

ಭಾರತವು ಕಲ್ಯಾಣರಾಜ್ಯ (Welfare State)ಕಡೆಗೆ ಚಲಿಸಬೇಕೆಂಬ ಆಶಯಗಳು ಇದ್ದಾಗ 1957ರಲ್ಲೇ ಸಂಪತ್ತಿನ ಮೇಲೆ ತೆರಿಗೆ ಪರಿಕಲ್ಪನೆ ಜಾರಿಯಲ್ಲಿತ್ತಾದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರಲಿಲ್ಲ. ಆದರೆ, 1991ರ ನಂತರ ಮಾರುಕಟ್ಟೆ ಶಕ್ತಿಗಳು ಆಳ್ವಿಕೆಯನ್ನು ನಿಯಂತ್ರಿಸತೊಡಗಿದ ಪರಿಣಾಮವಾಗಿ 2015 ರಲ್ಲಿ ಕೇಂದ್ರ ಸರ್ಕಾರವು ಸಂಪತ್ತಿನ ಮೇಲಿನ ತೆರಿಗೆ ಪರಿಕಲ್ಪನೆಯನ್ನೇ ರದ್ದುಮಾಡಿಬಿಟ್ಟಿತು.  ಆದರೀಗ, ಒಂದು ಲಕ್ಷ ದಾಟಿ ಓಡುತ್ತಿರುವ ಕೊರೋನ ಸೋಂಕಿನ ದಾಳಿಯಿಂದ ತತ್ತರಿಸುತ್ತಿರುವ ಭಾರತವು ಚೇತರಿಸಿಕೊಳ್ಳುವಂತಾಗಲು 1% ಅತಿ ಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ ವಿಧಿಸಿಯಾದರೂ ಕೊರೋನ ತಹಬಂದಿಗೆ ತರುವುದು ಇಂದಿನ ತುರ್ತಾಗಿದೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‍ಜಿಯವರು ಈಗಾಗಲೇ ತಮ್ಮ ಒಟ್ಟು ಸಂಪತ್ತಿನ ಶೇ. 2% ರಷ್ಟನ್ನು ಕೊರೋನ ಬಿಕ್ಕಟ್ಟಿನ ನಿವಾರಣೆಗಾಗಿ ಬಿಟ್ಟುಕೊಟ್ಟಿರುವುದನ್ನು ಗಮನಿಸಿ ಹೇಳುವುದಾದರೆ ಈ ಸಾಧ್ಯತೆ ಅಂತಹ ಕಷ್ಟದಾಯಕವಾದುದ್ದೇನೂ ಅಲ್ಲ.  ಈ ವಿಚಾರದಲ್ಲಿ ಜನರಿಂದ ಆಯ್ಕೆಯಾದ ಮತ್ತು ಶಕ್ತಿಯುತವಾದ ಯಾವುದೇ ಸರ್ಕಾರವು ಹಿಂದೆ-ಮುಂದೆ ನೋಡದೆ ತುಂಬಾ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ.

ಇಂದಿನ ಕೊರೋನ ಬಿಕ್ಕಟ್ಟಿನ ಭಯಂಕರ ಪರಿಸ್ಥಿತಿಯನ್ನು ಎದುರಿಸಲು ಇತ್ತೀಚೆಗೆ, ನಮ್ಮ ಪ್ರಧಾನ ಮಂತ್ರಿಗಳು ಘೋಷಿಸಿರುವ 20 ಲಕ್ಷಕೋಟಿ ಪ್ಯಾಕೇಜ್‍ನ ಒಳಹೊಕ್ಕು ನೋಡಿದರೆ, ಇದರಲ್ಲಿ-

1) ಸ್ವಾಯತ್ತ ಸಂಸ್ಥೆಯಾದ ರಿಸರ್ವ್ ಬ್ಯಾಂಕ್‍ ಆಫ್ ಇಂಡಿಯಾವು ತನ್ನ ಹಣಕಾಸು (ಮಾನಿಟರಿ) ನೀತಿಗೆ ಅನುಗುಣವಾಗಿ ಪ್ರಕಟಿಸಿದ ಕ್ರಮಗಳನ್ನು ಹಾಗೂ ಬಡ್ಡಿದರ ಮತ್ತು ಬ್ಯಾಂಕ್ ನಿರ್ವಹಣೆ ಕುರಿತಾಗಿ ಮಾಡಿರುವ ಘೋಷಣೆಗಳನ್ನು ಸರ್ಕಾರ ತನ್ನದೇ ಎಂಬಂತೆ ಬಿಂಬಿಸಿಕೊಂಡಿದೆ!

2) ಈ 20 ಲಕ್ಷಕೋಟಿ ಪ್ಯಾಕೇಜನ್ನು ಘೋಷಿಸುವ ಮುನ್ನವೇ ಬಜೆಟ್ಟಿನಲ್ಲಿ ಈ ಹಿಂದೆಯೇ ಮಾಡಿದ್ದ ಘೋಷಣೆಗಳನ್ನೂ ಮತ್ತು ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿಗಧಿಪಡಿಸುತ್ತಾ ಬರುವ ಹಣಕಾಸನ್ನೂ ಕ್ರೋಢೀಕರಿಸಿ ಈ 20 ಲಕ್ಷ ಕೋಟಿ ಕೋವಿಡ್ ಪ್ಯಾಕೇಜಿನ ಭಾಗವಾಗಿ ಸೇರಿಸಲಾಗಿದೆ!

3) ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೃಷಿ, ಮೀನುಗಾರಿಕೆಗೆ ಸಂಬಂಧಿಸಿದ 1 ಲಕ್ಷ 40 ಸಾವಿರಕೆ ಕೋಟಿ ರೂಪಾಯಿಗಳನ್ನು ಘೋಷಿಸಿರುವುದು ಇವತ್ತಿನ ತುರ್ತಿಗೆ ಪ್ರಯೋಜನಕ್ಕೆ ಬಾರಲಾಗದ ಒಂದು ಆಶಯ ಯೋಜನೆಯಾಗಿದೆ.

4) ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಎಲ್ಲಾ ಕೂಡಿ ಕಳೆದು ವಾಸ್ತವವಾಗಿ ಸರ್ಕಾರ ಕೋವಿಡ್‍ನ ಆರ್ಥಿಕ ಮುಗ್ಗಟ್ಟು ಎದುರಿಸಲು ವಾಸ್ತವವಾಗಿ ಘೋಷಿಸಿರುವುದು ಹೆಚ್ಚೆಂದರೆ 2 ಲಕ್ಷಕೋಟಿ ರೂಪಾಯಿಗಳಾಗ ಬಹುದಷ್ಟೆ. ಹೀಗೆಂದೇ ಎಲ್ಲಾ ಆರ್ಥಿಕ ತಜ್ಞರೂ, ವಿವಿಧ ಬ್ಯಾಂಕಿನ ಮುಖ್ಯಸ್ಥರೂ ಹೇಳುತ್ತಿದ್ದಾರೆ. ಸರ್ಕಾರವೂ ಇದನ್ನು ನಿರಾಕರಿಸಿಲ್ಲ. ಹೀಗಿದೆ ಇದರ ಕತೆ.

ವಾಸ್ತವ ಹೀಗಿರುವಾಗ, ಈ ಕೊರೋನ ದುರಂತ ಸಂದರ್ಭದಲ್ಲಿನ ಸಮಾಜೋ-ಆರ್ಥಿಕ ಬಿಕ್ಕಟ್ಟನ್ನು ನಿಜವಾಗಿ, ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸುವ ಸಲುವಾಗಿ ದೇಶದ 1% ಅತಿಶ್ರೀಮಂತರಿಗೆ ಸಂಪತ್ತಿನ ಮೇಲೆ 2%, ಸಂಪತ್ತಿನ ತೆರಿಗೆಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲೋಸುಗ ದೇಶದ ಪ್ರಜ್ಞಾವಂತರು 2020 ಮೇ 1 ರಂದು ಪಿಟಿಷನ್ ಹಾಕಿದ್ದಾರೆ. ಈ 2020 ಮೇ 1 ರ ಪಿಟಿಷನ್‍ಗೆ ಕರ್ನಾಟಕ ಜಾಗೃತ ಸಮುದಾಯವೂ ಜೊತೆಗೂಡಬೇಕೆಂದು ವಿನಂತಿಸುತ್ತೇವೆ. ಇದಕ್ಕಾಗಿ, ಇಲ್ಲಿ ಲಗತ್ತಿಸಿರುವ 2020 ಮೇ 1ರ ಪಿಟಿಷನ್ ಗೆ ಮಾಧ್ಯಮ ಪ್ರಕಟಣೆ, ಸಾಮಾಜಿಕ ಜಾಲತಾಣ ಪ್ರಚಾರ ಹಾಗೂ ಸಹಿ ಮಾಡುವ ಮೂಲಕ ಬೆಂಬಲಿಸಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇವೆ.

ಕರ್ನಾಟಕದ ಪ್ರವರ್ತಕರು

►   ಎ. ಆರ್. ವಾಸವಿ (ಸಾಮಾಜಿಕ ಮಾನವಶಾಸ್ತ್ರಜ್ಞೆ, ನಿವೃತ್ತ ಪ್ರಾದ್ಯಾಪಕರು NIAS,, ಬೆಂಗಳೂರು )

►   ವಿ.ಕೆ.ನಟರಾಜ್ (ವಿಶ್ರಾಂತ ಪ್ರಾದ್ಯಾಪಕರು, ಮೈಸೂರು ವಿಶ್ವವಿದ್ಯಾಲಯ)

►   ಟಿ.ಆರ್. ಚಂದ್ರಶೇಖರ (ನಿವೃತ್ತ ಪ್ರಾದ್ಯಾಪಕರು, ಕನ್ನಡ ವಿವಿ, ಅಭಿವೃದ್ದಿ ಆರ್ಥಿಕ ತಜ್ಞರು)

►   ಪುರುಷೋತ್ತಮ ಬಿಳಿಮಲೆ (ಕನ್ನಡ ಪ್ರಾದ್ಯಾಪಕರು, ಭಾರತೀಯ ಬಾಷೆಗಳ ಅದ್ಯಯನ ಕೇಂದ್ರ, ಜೆಎನ್‍ಯು)

►   ದೇವನೂರ ಮಹಾದೇವ (ಲೇಖಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು)

►   ಎಸ್. ಆರ್, ಹಿರೇಮಠ್ ( ಸಂಚಾಲಕರು, ಸಿಟಿಜನ್ಸ್ ಫಾರ್ ಡೆಮಾಕ್ರಸಿ)

►   ದು. ಸರಸ್ವತಿ (ಬರಹಗಾರರು, ಸಾಮಾಜಿಕ ಕಾರ್ಯಕರ್ತರು)

►   ಚುಕ್ಕಿ ನಂಜುಂಡಸ್ವಾಮಿ (ಕೆ.ಆರ್.ಆರ್.ಎಸ್, ಅಮೃತ ಭೂಮಿ)

►   ರೂಪ ಹಾಸನ (ಬರಹಗಾರರು, ಪ್ರೇರಣಾ ವಿಕಾಸ ವೇದಿಕೆ, ಹಾಸನ)

►   ಸಪ್ತಗಿರಿ ಐಯ್ಯಂಗಾರ್ (People's Association In Grassroots Action and Movement)

►   ಎ. ನಾರಾಯಣ (ಸಹ ಪ್ರಾದ್ಯಾಪಕರು, ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ)

►   ಕೆ.ಸಿ.ರಘು (ಆಹಾರ ತಜ್ಞರು)

►   ಪ್ರಕಾಶ ಕಮ್ಮರಡಿ (ಕೃಷಿ ಆರ್ಥಿಕ ತಜ್ಞ ಮತ್ತು ಮಾಜಿ ಅದ್ಯಕ್ಷ ಕರ್ನಾಟಕ ಕೃಷಿ ಬೆಲೆ ಆಯೋಗ, ಬೆಂಗಳೂರು)

►   ಡಾ. ರಜಾಕ್ ಉಸ್ತಾದ್ (ರಾಜ್ಯ ಉಪಾದ್ಯಕ್ಷರು ಹೈದರಬಾದ್ ಕರ್ನಾಟಕ ಹೋರಾಟ ಸಮಿತಿ)

1, ಮೇ 2020ರ ಪಿಟಿಶನ್‍ನ ಅಪೀಲುದಾರರು

►   ಡಾ.ಜಿ.ಜಿ ಪಾರೀಖ್ (ಪ್ರಖ್ಯಾತಗಾಂಧಿವಾದಿ ಸಮಾಜವಾದಿಗಳು- ಜನತಾ ವೀಕ್ಲಿ, ಮುಂಬೈ)

►   ನ್ಯಾಯಾಧೀಶ ಬಿ ಜಿ ಕೋಲ್ಸೆ ಪಾಟೀಲ್, ಪುಣೆ (ವಿಶ್ರಾಂತ ನ್ಯಾಯಾಧೀಶರು, ಮುಂಬೈ ಉನ್ನತ ನ್ಯಾಯಾಲಯ)

►   ಮೇಧಾ ಪಾಟ್ಕರ್, ಬರ್ವಾಣಿ, ಪಾರ್ಲಿಮೆಂಟ್ ಸದಸ್ಯರು (ನರ್ಮದಾ ಬಚಾವ್‍ಅಂದೋಲನ್: ಜನರ ಚಳುವಳಿಯ ರಾಷ್ಟ್ರೀಯ ಮೈತ್ರಿಕೂಟ)

►   ಜಿಗ್ನೇಶ್ ಮೆವಾನಿ, ಅಹಮದಾಬಾದ್ (ಶಾಸಕರು, ವಡ್ಗಾಂ, ಗುಜರಾತ್: ರಾಷ್ಟ್ರೀಯ ದಲಿತ ಅಧಿಕಾರ ಮಂಚ್)

►   ಅರುಣಾರಾಯ್, ರಾಜ್ಸಮಂಡ್, ರಾಜಾಸ್ಥಾನ್ (ಮಜ್ದೂರ್ ಕಿಸಾನ್ ಸಂಘಟನ್)

►   ಪ್ರೊ ಅನಿಲ್ ಸದ್ಗೋಪಾಲ್, ಭೂಪಾಲ್ (ಮಾಜಿ ಡೀನ್, ದೆಹಲಿ ವಿಶ್ವವಿದ್ಯಾನಿಲಯ; ಅಖಿಲ ಭಾರತ ಶಿಕ್ಷಣದ ಹಕ್ಕು ವೇದಿಕೆ)

►   ಪೋ ಜಗಮೋಹನ್ ಸಿಂಗ್, ಲೂಧಿಯಾನ (ಪ್ರಜಾಸತ್ತಾತ್ಮಕ ಹಕ್ಕುಗಳ ಅಸೋಸಿಯೇಷನ್)

►   ದುನಾರಾಯ್, ದೆಹಲಿ (ಮಾಜಿ ಎಫ್‍ಆರ್‍ಇಎಯಲ್ಲಿ ಇದ್ದವರು, ಈಗ ಹಜಾರ್ಡ್ ಸೆಂಟರ್ ನಿರ್ದೇಶಕರು, ದೆಹಲಿ)

►   ಡಾ ಪ್ಯಾರೇಲಾಲ್‍ಗಾರ್ಗ್, ಚಂಡೀಘರ್ (ಭಾರತ್‍ ಜ್ಞಾನ್ ವಿಜ್ಞಾನ್ ಸಮಿತಿ, ಪಂಜಾಬ್)

►   ಡಾ. ಇಮ್ರಾನ್ ಖಾದಿರ್, ದೆಹಲಿ (ಮಾಜಿ ಪ್ರಾಧ್ಯಾಪಕರು, ಜೆಎನ್‍ಯು, ಈಗ ಡಿಸ್ಟಿಂಗ್ವಿಷಡ್ ಪ್ರೊಫೆಸರ್, ಕೌನ್ಸಿಲ್ ಫಾರ್ ಸೋಷಿಯಲ್ ಡೆವಲಪ್‍ಮೆಂಟ್, ನವದೆಹಲಿ)

►   ಡಾ. ಎಸ್ ಪಿ ಉದಯ್‍ಕುಮಾರ್, ನಾಗರ್‍ಕೋಯಿಲ್, ತಮಿಳುನಾಡು (ಅಣುಶಕ್ತಿಯ ವಿರುದ್ಧ ಜನತಾ ಆಂದೋಲನ)

►   ಅವಿಕ್ ಷಾ, ದೆಹಲಿ (ಸ್ವರಾಜ್ ಅಭಿಯಾನ್)

►   ಪ್ರೊ.ರೂಪರೇಖಾ ವರ್ಮ, ಲಕ್ನೊ (ಮಾಜಿ ಕುಲಪತಿಗಳು, ಲಕ್ನೊ ವಿಶ್ವವಿದ್ಯಾನಿಲಯ; ಕಾರ್ಯದರ್ಶಿ, ಶಾಜಿ ದುನಿಯಾ)

►   ನೀರಜ್‍ಜೈನ್, ಪುಣೆ (ಲೋಕಾಯತ, ಪುಣೆ; ಸಹ ಸಂಪಾದಕರು, ಜನತಾ ವೀಕ್ಲಿ, ಮುಂಬೈ)

►   ಪ್ರೊ ಸುಭಾಷ್ ವಾರೆ, ಪುಣೆ (ಎಸ್ ಎಂ ಜೋಷಿ ಸಮಾಜವಾದಿ ಪೀಠ, ಪುಣೆ)

►   ಪ್ರೊ.ಆರ್‍ರಾಮಾನುಜಂ, ಚೆನ್ನೈ( ಇನ್ಸ್ಟಿಟ್ಯೂಟ್‍ಆಫ್ ಮ್ಯಾಥಮೆಟಿಕಲ್ ಸೈನ್ಸಸ್, ಚೆನ್ನೈ; ತಮಿಳುನಾಡು ವಿಜ್ಞಾನ ವೇದಿಕೆ)

►   ಪ್ರೊ. ಇಂದ್ರಾಣಿ ದತ್, ಗೌಹಾತಿ (ಕಾಟನ್‍ಯುನಿವರ್ಸಿಟಿ, ಗೌಹಾತಿ)

►   ಪ್ರೊ ವಿ ವಸಂತಿದೇವಿ, ಚೆನ್ನೈ (ಮಾಜಿ ಕುಲಪತಿಗಳು, ಎಂ ಎಸ್ ವಿಶ್ವವಿದ್ಯಾನಿಲಯ, ತಮಿಳುನಾಡು, ಪ್ರಸ್ತುತ, ಅಧ್ಯಕ್ಷರು ಶಾಲಾ ಶಿಕ್ಷಣ ಉಳಿಸಿ ಚಳುವಳಿ, ತಮಿಳು ನಾಡು)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X