Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವೈದ್ಯರಿಗೆ ಕೊರೋನ ಹೇಳಿದ ಕಿವಿ ಮಾತು

ವೈದ್ಯರಿಗೆ ಕೊರೋನ ಹೇಳಿದ ಕಿವಿ ಮಾತು

ವಾರ್ತಾಭಾರತಿವಾರ್ತಾಭಾರತಿ25 May 2020 11:26 PM IST
share
ವೈದ್ಯರಿಗೆ ಕೊರೋನ ಹೇಳಿದ ಕಿವಿ ಮಾತು

ಕೊರೋನ ನಮ್ಮ ವ್ಯವಸ್ಥೆಯ ಕರಾಳ ಮುಖಗಳನ್ನು ತೆರೆದಿಟ್ಟಿದೆ. ನಮ್ಮ ನಡುವಿನ ಲಕ್ಷಾಂತರ ವಲಸೆ ಕಾರ್ಮಿಕರ ದೈನೇಸಿ ಸ್ಥಿತಿಯನ್ನು ಕೊರೋನ ವಿಶ್ವಕ್ಕೆ ತೆರೆದಿಟ್ಟಿತು. ಈ ಸಮಸ್ಯೆ ಸೃಷ್ಟಿಯಾಗಿರುವುದು ಕೊರೋನ ದೆಸೆಯಿಂದ ಎಂದು ಬಿಂಬಿಸಲಾಗುತ್ತಿದೆ. ಆದರೆ, ವಲಸೆ ಕಾರ್ಮಿಕರ ಕುರಿತಂತೆ ವ್ಯವಸ್ಥೆ ಪ್ರದರ್ಶಿಸುತ್ತಾ ಬಂದಿದ್ದ ಕ್ರೌರ್ಯ ಇದೀಗ ಕೊರೋನ ಕಾರಣದಿಂದ ಬೆಳಕಿಗೆ ಬಂದಿದೆಯಷ್ಟೇ. ಕೊರೋನ ಸವಾಲು ಮನುಷ್ಯನ ದೈಹಿಕ ಆರೋಗ್ಯಕ್ಕೆ ಎದುರಾಗಿರುವ ಸವಾಲಾಗಿ ಅಷ್ಟೇ ಉಳಿದಿಲ್ಲ, ಅದು ನಮ್ಮ ಮಾನವೀಯತೆಗೆ ಎದುರಾದ ಸವಾಲಾಗಿ ಪರಿವರ್ತನೆಗೊಂಡಿದೆ. ಕೊರೋನದ ಹೆಸರಿನಲ್ಲಿ ಜಾತಿ, ಧರ್ಮದ ಕ್ರೌರ್ಯಗಳೂ ಬೀದಿಗೆ ಬಂದಿವೆ. ಕೊರೋನಕ್ಕೂ ಕೋಮು ಬಣ್ಣ ನೀಡಿ, ಆ ಮೂಲಕ ಜನರ ನಡುವೆ ದ್ವೇಷವನ್ನು ಹರಡಿದ ದೇಶ ಎಂಬ ಹೆಮ್ಮೆಗೆ ಭಾರತ ಪಾತ್ರವಾಗಿದೆ. ರೋಗ, ವಿಪತ್ತು ಮನುಷ್ಯನೊಳಗಿನ ಮಿತಿಯನ್ನು ಎತ್ತಿ ತೋರಿಸಿ ಅವನನ್ನು ಮಾನವೀಯವಾಗಿಸುತ್ತದೆ ಎನ್ನುವ ಅಭಿಪ್ರಾಯ ಕೂಡ ಸುಳ್ಳಾಗಿದೆ. ಕೊರೋನ ಈ ದೇಶದ ಮನುಷ್ಯನ ಮನಸ್ಸಿಗಂಟಿದ ಇನ್ನಷ್ಟು ವೈರಸ್‌ಗಳನ್ನು ಹೊರಗೆ ಹಾಕಿದೆ. ಇವೆಲ್ಲದರ ನಡುವೆ ಕೊರೋನ ಇನ್ನೊಂದು ವಿಸ್ಮಯವನ್ನು ಸೃಷ್ಟಿಸಿದೆ. ಈವರೆಗೆ ರೋಗ ರುಜಿನಗಳಿಂದ ಆಸ್ಪತ್ರೆಗಳಿಗೆ ದಾಳಿಯಿಡುತ್ತಿರುವ ಜನರು ಆಸ್ಪತ್ರೆಗಳಿಂದ ಭಾಗಶಃ ದೂರ ಉಳಿದಿದ್ದಾರೆ.

ಲಾಕ್‌ಡೌನ್ ಅದಕ್ಕೆ ಒಂದು ಕಾರಣವಿರಬಹುದು. ಇನ್ನೊಂದೆಡೆ ಕೊರೋನ ಭಯ ಅವರನ್ನು ಕಾಡುತ್ತಿರಬಹುದು. ಜೊತೆಗೆ, ವೈದ್ಯರೇ ಆಸ್ಪತ್ರೆಗಳ ಬಾಗಿಲುಗಳನ್ನು ಮುಚ್ಚಿ ಕೂತಿರುವುದರಿಂದ ರೋಗಿಗಳು ಅನಿವಾರ್ಯವಾಗಿ ಆಸ್ಪತ್ರೆಗಳಿಂದ ದೂರ ಉಳಿದಿರಬಹುದು. ಇದು ಕೆಲವು ಗಂಭೀರ ಕಾಯಿಲೆಗಳಿದ್ದ ಜನರ ಸಾವಿಗೂ ಕಾರಣವಾಗಿದೆ. ಕೊರೋನ ಹೊರತು ಪಡಿಸಿದ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು ಔಷಧಿ, ಆರೈಕೆ ಸಿಗದೇ ಮೃತಪಟ್ಟಿರುವುದು ಮಾಧ್ಯಮಗಳಲ್ಲಿ ಸುದ್ದಿಯೇ ಆಗಿಲ್ಲ. ಆದರೆ ಇವೆಲ್ಲದರಾಚೆಗೆ, ಸಣ್ಣ ಪುಟ್ಟ ಕಾಯಿಲೆಗಳಿಗಾಗಿ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದವರ ಸಂಖ್ಯೆ ಕಡಿಮೆಯಾಗಿವೆ. ಮುಖ್ಯವಾಗಿ, ಇಂತಹ ಕಾಯಿಲೆಗಳಿಂದ ಬಳಲುತ್ತಿರುವವರು ಲಾಕ್‌ಡೌನ್ ಕಾರಣದಿಂದ ಆರೋಗ್ಯವಂತರಾಗಿದ್ದಾರೆ ಎಂಬ ವರದಿ ಬಹಿರಂಗವಾಗಿದೆ. ಬಿಬಿಎಂಪಿ ದತ್ತಾಂಶಗಳ ಪ್ರಕಾರ 2019ರ ಮಾರ್ಚ್‌ನ ಲ್ಲಿ ಬೆಂಗಳೂರಿನಲ್ಲಿ ವೈದ್ಯಕೀಯ ಕಾರಣಗಳಿಂದಾಗಿ 5,400 ಸಾವುಗಳು ಸಂಭವಿಸಿದ್ದವು. 2020ರ ಮಾರ್ಚ್‌ನಲ್ಲಿ ಈ ಸಂಖ್ಯೆ 4,716ಕ್ಕೆ ಇಳಿದಿದೆ. 2019ರ ಎಪ್ರಿಲ್‌ನಲ್ಲಿ 4,806 ಸಾವುಗಳು ಸಂಭವಿಸಿದ್ದರೆ 2020ರ ಎಪ್ರಿಲ್‌ನಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ 3,327. ಇದು ಬಿಬಿಎಂಪಿಗಷ್ಟೇ ಸೀಮಿತವಾಗಿಲ್ಲ. ದಿಲ್ಲಿ, ಮುಂಬೈಯಂತಹ ಶಹರದಲ್ಲಿ ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ಇತರ ಕಾಯಿಲೆಗಳಲ್ಲಿ ಇಳಿಮುಖ ಕಂಡು ಬಂದಿದೆ. 

ಕೊರೋನ ಆಗಮಿಸುವ ಮುನ್ನವೇ ದಿಲ್ಲಿಯಂತಹ ನಗರಗಳಲ್ಲಿ ಜನರು ಮುಖಗವಸು ಧರಿಸಿ ಓಡಾಡುತ್ತಿದ್ದರು. ದಿಲ್ಲಿಯ ಪರಿಸರ ಆ ಮಟ್ಟಿಗೆ ಕೆಟ್ಟು ಹೋಗಿತ್ತು. ಲಾಕ್‌ಡೌನ್‌ನಿಂದ ಕೊರೋನ ಸರಪಳಿ ಕಡಿಯಿತೋ ಇಲ್ಲವೋ, ಆದರೆ ಬೃಹತ್ ಶಹರಗಳ ಪರಿಸರದ ಮೇಲೆ ಅದು ಧನಾತ್ಮಕ ಪರಿಣಾಮಗಳನ್ನು ಬೀರಿದೆ. ವಾಹನಗಳ ದಟ್ಟನೆ ಇಳಿಮುಖವಾಗುತ್ತಿದ್ದಂತೆಯೇ ಸ್ವಚ್ಛ ಗಾಳಿ ಜನರಿಗೆ ದೊರಕ ತೊಡಗಿದೆ. ಬಹುತೇಕ ಕೈಗಾರಿಕೆಗಳು ಸ್ಥಗಿತಗೊಂಡ ಕಾರಣ ರಾಸಾಯನಿಕ ಹೊಗೆಯ ದಟ್ಟನೆಯೂ ಕಡಿಮೆಯಾಗಿದೆ. ಭಕ್ತರೆಲ್ಲ ಮನೆಯೊಳಗೆ ಇದ್ದ ಕಾರಣಕ್ಕಾಗಿ ಗಂಗಾ, ಯುಮುನಾ ಮೊದಲಾದ ನದಿಗಳ ಮಾಲಿನ್ಯ ಇಳಿಮುಖವಾಗಿದೆ. ಭೂಮಿಯ ಅಂತರ್ಜಲ ಮಟ್ಟವೂ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲಸದ ಒತ್ತಡದ ಕಾರಣದಿಂದಾಗಿ ಆಹಾರದ ಕುರಿತಂತೆ ವಹಿಸುತ್ತಿದ್ದ ಬೇಜವಾಬ್ದಾರಿಗಳು ಕಡಿಮೆಯಾಗಿ, ಮನೆಯ ಅಡುಗೆಯನ್ನು ನೆಚ್ಚಿಕೊಳ್ಳುವಂತಾಗಿ ದೈಹಿಕ ಆರೋಗ್ಯ ಸುಧಾರಣೆಗೊಂಡಿದೆ. ಕೌಟುಂಬಿಕ ಬಂಧಗಳು ಇನ್ನಷ್ಟು ಗಟ್ಟಿಯಾದ ಕಾರಣದಿಂದ ಒಂಟಿತನ, ಖಿನ್ನತೆಯಿಂದ ಜನರು ದೂರವಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 

ಮದ್ಯ ನಿಷೇಧ ಜನರ ಆರೋಗ್ಯ ಉತ್ತಮಗೊಳ್ಳಲು ಬಹುದೊಡ್ಡ ಕೊಡುಗೆ ನೀಡಿದೆ. ಖಾಸಗಿ ಆಸ್ಪತ್ರೆಯೊಂದರ ಹಿರಿಯ ವೈದ್ಯರೊಬ್ಬರ ಪ್ರಕಾರ, ಟ್ರೋಮಾ ಪ್ರಕರಣಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ವಾಂತಿ ಭೇದಿ, ಕರುಳು ಹಾಗೂ ಪಿತ್ತ ಜನಕಾಂಗ ಸಂಬಂಧಿ ಪ್ರಕರಣಗಳು ಬಹಳ ಕಡಿಮೆಯಾಗಿವೆ. ದೈಹಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ ಕೈ ತೊಳೆದುಕೊಳ್ಳುವುದರಿಂದಾಗಿ, ಸೋಂಕು ಪ್ರಕರಣಗಳು ಕೂಡ ಕಡಿಮೆಯಾಗಿವೆ. ಆಸ್ಪತ್ರೆಗೆ ಬರುವ ಎಮರ್ಜೆನ್ಸಿ ಅಡ್ಮಿಶನ್‌ಗಳಲ್ಲಿ ಶೇ.50ರಷ್ಟು ಇಳಿಕೆಯಾಗಿದೆ. ಕೊರೋನ ವೈರಸ್‌ನಿಂದಾಗಿ ಮಧ್ಯಮ ಗಾತ್ರದ ಆಸ್ಪತ್ರೆಗಳೆಲ್ಲ ರೋಗಿಗಳ ಕೊರತೆಯಿಂದ ಬಣಗುಡುತ್ತಿವೆ. ಒಂದು ರೀತಿಯಲ್ಲಿ ವೈದ್ಯರೇ ಕೊರೋನ ದೆಸೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕೊರೋನವನ್ನು ಬಳಸಿಕೊಂಡು ಬೃಹತ್ ಆಸ್ಪತ್ರೆಗಳು ಜನರನ್ನು ದೋಚುತ್ತಿರುವ ಕಡೆಗೂ ಸರಕಾರ ಗಮನ ನೀಡಬೇಕಾಗಿದೆ. ವೈದ್ಯಕೀಯ ವಿಮೆಯ ಮೊತ್ತವನ್ನು ಮುಂದಿಟ್ಟುಕೊಂಡು, ಖಾಸಗಿ ಆಸ್ಪತ್ರೆಗಳು ಭಾರೀ ಮೊತ್ತಗಳನ್ನು ರೋಗಿಗಳಿಂದ ಅನಗತ್ಯವಾಗಿ ಸುಲಿಯುತ್ತಿರುವ ಕುರಿತಂತೆ ವರದಿಗಳು ಹೊರ ಬೀಳುತ್ತಿವೆ. 

ಇತ್ತೀಚೆಗೆ ಗುರ್ಗಾಂವ್‌ನ ಆಸ್ಪತ್ರೆಯೊಂದು ರೋಗಿ ಒಬ್ಬರಿಗೆ 6.7 ಲಕ್ಷ ರೂ. ಬಿಲ್ ಮಾಡಿತು. ಆದರೆ ಜೀವ ವಿಮಾ ಕಂಪೆನಿ ಆ ಬಿಲ್‌ನ್ನು ನಿರಾಕರಿಸಿ, ಅದರಲ್ಲಿ ಶೇ.50 ದಷ್ಟು ಕಡಿತಮಾಡಿತು. ಹಲವು ವೆಚ್ಚಗಳು ಅನಗತ್ಯವೆಂದು ಅದು ಪತ್ತೆಹಚ್ಚಿತು. ಇನ್ನೊಂದು ಆಘಾತಕಾರಿ ಪ್ರಕರಣದಲ್ಲಿ ಆಸ್ಪತ್ರೆಯೊಂದು ಒಂದು ವಾರದ ಅವಧಿಗೆ ಕೇವಲ ಒಬ್ಬ ರೋಗಿಗೆ 1,300 ಜತೆ ಕೈಚೀಲಗಳ ಬಾಬ್ತು ಕ್ಲೈಮ್ ಸಲ್ಲಿಸಿತು. ಜೀವ ವಿಮೆ ಮಾಡಿದಾತ ಇದನ್ನು ಪತ್ತೆ ಹಚ್ಚಿದಾಗ ಆಸ್ಪತ್ರೆ ಆಡಳಿತ ಇದನ್ನು ಯಾರಿಗೂ ತಿಳಿಸಬೇಡಿ ಎಂದು ವಿನಂತಿಸಿ ತನ್ನ ಕ್ಲೈಮನ್ನು ಹಿಂದಕ್ಕೆ ಪಡೆಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಮಿತಿಮಿರಿ ಬಿಲ್ ಮಾಡುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ಈ ದಂಧೆ ಹೊಸತೇನೂ ಅಲ್ಲ. ಸದ್ಯಕ್ಕೆ ಕೊರೋನದ ಹೆಸರಲ್ಲಿ ಅವುಗಳು ಕೊಯ್ಲು ಕೊಯ್ಯ ಹೊರಟಿವೆ. 

ಖಾಸಗಿ ಆಸ್ಪತ್ರೆಗಳು ಲಾಭ ಮಾಡಿಕೊಳ್ಳ ಕೂಡದೆಂದು ಇದರರ್ಥವಲ್ಲ ಅಥವಾ ಆರೋಗ್ಯದ ಮೂಲ ಚೌಕಟ್ಟು, ಆಧುನಿಕ ಉಪಕರಣ, ವೃತ್ತಿಪರ ಮಾನವ ಶಕ್ತಿ ಮತ್ತು ಇತರ ವೈದ್ಯಕೀಯ ಅವಶ್ಯಕತೆಗಳ ರಂಗದಲ್ಲಿ ಖಾಸಗಿ ಆಸ್ಪತ್ರೆಗಳು ಮಾಡುತ್ತಿರುವ ಬಂಡವಾಳ ಹೂಡಿಕೆಯನ್ನು ಕೀಳಂದಾಜು, ಮೇಲಂದಾಜು ಮಾಡುವುದು ಸರಿಯಲ್ಲ. ಆದರೆ ವೆಚ್ಚಗಳನ್ನು ಮಾಡಿದ ಬಳಿಕ ನ್ಯಾಯಬದ್ಧವಾದ ಲಾಭ ಮಾಡಿಕೊಳ್ಳುವುದಕ್ಕೂ ಮತ್ತು ರೋಗಿಗಳಿಗೆ ಮಿತಿಮೀರಿ ಶುಲ್ಕ ವಿಧಿಸಿ ಅವರಿಂದ ದೊಡ್ಡ ಮೊತ್ತವನ್ನು ಕಸಿದುಕೊಳ್ಳುವುದಕ್ಕೂ ನಡುವೆ ವ್ಯತ್ಯಾಸವಿದೆ. ಆಸ್ಪತ್ರೆಯೊಂದು ರೂ.2,000 ಬೆಲೆಯ ಪಿಪಿಇ ಕಿಟ್‌ಗೆ (ರಕ್ಷಣಾ ಕವಚ ಉಡುಗೆ) 4,500 ರೂ. ವಸೂಲಿ ಮಾಡುವುದನ್ನು ಹೇಗೆ ಸಮರ್ಥಿಸಬಹುದು? ‘ಕೊರೋನ ಜೊತೆಗೆ ಬದುಕಲು ಕಲಿಯೋಣ’ ಎಂದು ಸರಕಾರ ಈಗಾಗಲೇ ಘೋಷಿಸಿದೆ. ಕೊರೋನ ಜೊತೆಗೇನೋ ಬದುಕಬಹುದು. ಆದರೆ ವೈದ್ಯರು ಬದುಕಲು ಅವಕಾಶಕೊಟ್ಟರೆ ಮಾತ್ರ ಅದು ಸಾಧ್ಯ. ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಮೂಲಕ ನಮ್ಮದಾಗಿಸಿಕೊಂಡಿರುವ ಆರೋಗ್ಯವನ್ನು ಮತ್ತೆ ಕಳೆದುಕೊಳ್ಳದಿರೋಣ. ಈಗಾಗಲೇ ರೂಢಿಸಿಕೊಂಡಿರುವ ಕೆಲವು ಜೀವನ ಶೈಲಿಗಳನ್ನು ಬದಲಿಸದೇ ಮುಂದುವರಿಸುತ್ತಾ, ನಮ್ಮ ಪರಿಸರವನ್ನು, ನಮ್ಮ ಆರೋಗ್ಯವನ್ನು ಉಳಿಸಿಕೊಳ್ಳೋಣ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X