Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭಟ್ಕಳ ಲಾಕ್‍ಡೌನ್ ಸಡಿಲಿಕೆಗಾಗಿ...

ಭಟ್ಕಳ ಲಾಕ್‍ಡೌನ್ ಸಡಿಲಿಕೆಗಾಗಿ ತಾಲೂಕಾಡಳಿತದಿಂದ ಜನಾಭಿಪ್ರಾಯ ಸಂಗ್ರಹ

ಪ್ರತಿ ದಿನ 5 ಗಂಟೆ ಸಡಿಲಿಕೆ ನೀಡುವಂತೆ ಸಾರ್ವಜನಿಕರ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ25 May 2020 11:37 PM IST
share
ಭಟ್ಕಳ ಲಾಕ್‍ಡೌನ್ ಸಡಿಲಿಕೆಗಾಗಿ ತಾಲೂಕಾಡಳಿತದಿಂದ ಜನಾಭಿಪ್ರಾಯ ಸಂಗ್ರಹ

ಭಟ್ಕಳ : ಭಟ್ಕಳದಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ವೃದ್ಧರು ಚಿಕ್ಕ ಮಕ್ಕಳು ಸೇರಿದಂತೆ ಇಲ್ಲಿಯವರೆಗೆ 32 ಜನರು ಕೊರೋನ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು ಇನ್ನುಳಿದ 10ಜನರು ಆರೋಗ್ಯವಂತರಾಗಿದ್ದಾರೆ ಎಂದು ಅದಕ್ಕಾಗಿ ತಾಲೂಕಾಡಳಿತ ಭಟ್ಕಳದಲ್ಲಿ ಲಾಕ್‍ಡೌನ್ ಸಡಿಲಿಕೆ ಕುರಿತಂತೆ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್. ಹೇಳಿದರು.

ಅವರು ಸೋಮವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ  ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿಯ ಕೆಲವು ಭಾಗಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿದಂತೆ ಭಟ್ಕಳ ನಗರದಲ್ಲಿಯೂ ಕೂಡಾ ಸಡಿಲಿಕೆ ಮಾಡುವಲ್ಲಿ ಅಧಿಕಾರಿ ಗಳು, ಜಿಲ್ಲಾಡಳಿತ ಮುಂದಾಗಿದ್ದು ಜನರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು ಸಭೆಯಲ್ಲಿ ನಾಗರೀಕರು, ಪತ್ರಕರ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಭೆಯಲ್ಲಿ ಮಾತನಾಡಿದ ನಾಗರೀಕರು ಕಳೆದ ಎರಡು ತಿಂಗಳಿನಿಂದ ನಾವು ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಿಕೊಂಡು ಸಂಪೂರ್ಣ ಸಹಕಾರ ನೀಡಿದ್ದೆವು. ಮೊದಲು ಭಟ್ಕಳದಲ್ಲಿ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಇಡೀ ನಗರವನ್ನೇ ಸೀಲ್ ಡೌನ್ ಮಾಡಲಾ ಯಿತು. ಆದರೆ ಈಗ ಜಿಲ್ಲೆಯ ಎಲ್ಲಾ ಕಡೆಗಳಲ್ಲಿಯೂ ಕೂಡಾ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅಲ್ಲಲ್ಲಿ ಮಾತ್ರ ಸೀಲ್‍ಡೌನ್ ಮಾಡಿ ಉಳಿದ ಭಾಗದಲ್ಲಿ ಮಾಮೂಲಿನಂತೆ ಜನ ಜೀವನ ನಡೆಯುತ್ತಿದ್ದು ಅದರಂತೆಯೇ ಭಟ್ಕಳದಲ್ಲಿಯೂ ಕೂಡಾ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ತೆಗೆಯಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಭರತ್ ಎಸ್. ಭಟ್ಕಳದಲ್ಲಿ ಪ್ರಥಮವಾಗಿ ಕೊರೊನಾ ಸೋಂಕು ತಗುಲಿದಾಗಿನಿಂದ ಜನರ ಸಹಕಾರ ಉತ್ತಮವಾಗಿತ್ತು. ಆಗ ಭಟ್ಕಳವನ್ನು ಪತ್ರ್ಯೇಕಿಸುವುದಕ್ಕೆ ಕಾರಣ ಸೋಂಕು ಸಮುದಾಯಕ್ಕೆ ಹರಡಬಾರದು ಎಂದಾಗಿತ್ತು. ಅದಕ್ಕಾಗಿಯೇ ಸ್ವಲ್ಪ ವಿಸ್ತಾರವಾಗಿ ಕಂಟೈನ್‍ಮೆಂಟ್ ಝೋನ್ ಎಂದು ನಿಷೇಧಿಸಲಾಯಿತು.  ಆದರೆ ಇಂದು ಅಂತಹ ಕ್ಷೇತ್ರವನ್ನು ಕಡಿಮೆ ಗೊಳಿಸುವುದು ಅನಿವಾರ್ಯವಾಗಿದ್ದು ಜನತೆಗೆ ದಿನ ನಿತ್ಯದ ವ್ಯವಹಾರಕ್ಕೆ, ಮಳೆಗಾಲದ ತಯಾರಿಗೆ ಅನುವು ಮಾಡಿಕೊಡಬೇಕಾಗಿದೆ ಎಂದರು. ಅಲ್ಲದೇ ಔಷಧಿ ಅಂಗಡಿ, ಕಿರಾಣಿ, ದಿನಸಿ, ಹಣ್ಣು, ತರಕಾರಿ ಅಂಗಡಿಗಳು ಈ ಹಿಂದಿನಂತೆಯೇ ತೆರೆದಿರಲಿವೆ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಎ.ಎಸ್.ಪಿ. ನಿಖಿಲ್ ಬಿ., ಭಟ್ಕಳದ ಜನತೆಯ ಸಹಕಾರ ಉತ್ತಮವಾಗಿತ್ತು. ಇಲಾಖೆಯೊಂದಿಗೆ ಇಲ್ಲಿಯ ತನಕ ಸಹಕಾರ ಕೊಟ್ಟಿದ್ದೀರಿ, ಇನ್ನು ಮುಂದೆಯೂ ಸಹಕಾರ ಅಗತ್ಯವಾಗಿದೆ. ಜಿಲ್ಲಾಡಳಿತ ಹಾಗೂ ಸರಕಾರ ಕಾಲ ಕಾಲಕ್ಕೆ ಯಾವ ರೀತಿಯ ಸೂಚನೆ ನೀಡುತ್ತದೆ ಅದನ್ನು ನಾವು ಪಾಲಿಸಬೇಕಾಗಿದೆ. ಭಟ್ಕಳದಲ್ಲಿ ಇನ್ನೆರಡು ದಿನಗಳಲ್ಲಿ ಮುಂದಿನ ಮಾರ್ಗಸೂಚಿ ಬರಲಿದ್ದು ಜನತೆಗೆ ಅನುಕೂಲ ಮಾಡಿಕೊಡಲಿದ್ದೇವೆ. ಆದರೆ ಮಾಲ್, ಥಿಯೇಟರ್, ಮಲ್ಟಿ ಸ್ಟೋರಿ ಕಾಂಪ್ಲೆಕ್ಸ್‍ಗಳಿಗೆ ಅವಕಾಶವಿಲ್ಲ ಎಂದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ತಂಜೀಂ ಅಧ್ಯಕ್ಷ ಎಸ್.ಎಂ. ಪರ್ವೇಜ್ ನಾಗರೀಕರಿಗೆ ಅನುಕೂಲವಾಗುವಂತೆ ಲಾಕ್‍ಡೌನ್ ಸಡಿಲಿಕೆ ನಿಯಮ ರೂಪಿಸುವಂತೆ ಹಾಗೂ ಎಲ್ಲ ಅಂಗಡಿಗಳನ್ನು ತೆರೆಯುವಂತೆ ಕೋರಿದರು. ಸಾಲಗದ್ದೆ ಸ್ಪೋಟ್ಸ್ ಕ್ಲಬ್‍ನ ಶಾಂತಾರಾಮ ಭಟ್ಕಳ ಮಾತನಾಡಿ ಹೋಮ್ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ನಿಗಾ ಇಡಲು ಆಯಾಯ ಬೀಟ್ ಪೊಲೀಸರೊಂದಿಗೆ ಎರಡು ಸಭ್ಯ ನಾಗರೀಕರಿಗೆ ಜವಬ್ದಾರಿ ಕೊಡಿ. ಪೊಲೀಸರು ಮತ್ತು ಕರ್ತವ್ಯ ನಿರತರರು ಸೋಂಕಿಗೊಳಗಾದಂತೆ ಜಾಗೃತೆ ವಹಿಸಿ ಎಂದು ಹೇಳಿದರು. 

ಪುರಸಭಾ ಮಾಜಿ ಅಧ್ಯಕ್ಷ ಪರ್ವೆಝ್ ಕಾಶಿಮಜಿ ಮಾತನಾಡಿ ಜನತೆಗೆ ಯಾವ ರೀತಿಯಾಗಿ ಲಾಕ್‍ಡೌನ್ ಸಡಿಲಿಕೆ ಇರುತ್ತದೆ ಎನ್ನುವುದನ್ನು ತಿಳಿಸಬೇಕು. ಅಲ್ಲದೇ ಯಾವಾಗಿನಿಂದ ಎಷ್ಟು ಸಮಯದ ಮಿತಿ ಹೇರಲಾಗುತ್ತದೆ ಎನ್ನುವುದನ್ನು ಸಹ ತಿಳಿಸಿ ಎಂದರು. 

ಭಟ್ಕಳ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿ ನಗರದಲ್ಲಿ ಎಲ್ಲ ಅಂಗಡಿಗಳನ್ನೂ ತೆರೆಯಲು ಅವಕಾಶ ಮಾಡಿಕೊಡಬೇಕು. ಒಂದು ಬಗೆಯ ಅಂಗಡಿಗಳನ್ನು ಮಾತ್ರ ಮುಚ್ಚಿಟ್ಟರೆ ಸರಿಯಲ್ಲ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಕೊರೊನಾ ಸೋಂಕಿತರೆಲ್ಲರೂ ಕೂಡಾ ಗುಣಮುಖರಾಗಿ ವಾಪಾಸಾಗುತ್ತಿರುವುದಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಕೊಡಿಸಿದ ಉತ್ತಮ ಚಿಕಿತ್ಸೆಯೇ ಕಾರಣ ಅದಕ್ಕಾಗಿ ಎಲ್ಲರೂ ಅಭಿನಂದಿಸೋಣ ಎಂದರು.  ಚಪ್ಪಾಳೆ ತಟ್ಟಿ ಎಲ್ಲರೂ ಅಭಿನಂದನೆ ಸಲ್ಲಿಸಿದರು. ಹಾಗೂ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಿ ಎಂದು ಸೂಚಿಸಿದರು. 

ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಆದಂ ಪಣಂಬೂರು, ರಿಕ್ಷಾ ಯೂನಿಯನ್ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ಪತ್ರಕರ್ತ ಎಂ.ಆರ್. ಮಾನ್ವಿ, ಸತೀಶಕುಮಾರ್, ತಂಜೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಜಾ.ಪ.ಪಂ. ಸದಸ್ಯ ಇಮ್ರಾನ್ ಲಂಕಾ, ಮುನೀರ್ ಅಹಮ್ಮದ್, ಸುರೇಂದ್ರ ಭಟ್ಕಳ ಮುಂತಾದವರು ಮಾತನಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X