ಅಂಕಿ ಅಂಶ ಪರಿಷ್ಕರಿಸಿದ ವಿಮಾನಯಾನ ಸಚಿವ: ಮೊದಲ ದಿನ 832 ವಿಮಾನ ಹಾರಾಟ
ಹೊಸದಿಲ್ಲಿ: ಸೋಮವಾರ ಪುನರಾರಂಭವಾದ ವಿಮಾನಯಾನದ ಮೊದಲ ದಿನ 832 ವಿಮಾನಗಳಲ್ಲಿ 58318 ಮಂದಿ ಪ್ರಯಾಣಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ. ಸಚಿವರು ನಿನ್ನೆ ನೀಡಿದ್ದ ಅಂಕಿ ಅಂಶವನ್ನು ಪರಿಷ್ಕರಿಸಿದ್ದಾರೆ.
ಸೋಮವಾರ ಪುರಿ, 532 ವಿಮಾನಗಳಲ್ಲಿ 39231 ಮಂದಿ ಯಾನ ಕೈಗೊಂಡಿದ್ದರು ಎಂದು ಪ್ರಕಟಿಸಿದ್ದರು.
“ವಿಮಾನ ನಿಲ್ದಾಣಗಳು ಸಕ್ರಿಯವಾಗಿದ್ದು, ಪ್ರಯಾಣಿಕರು ವಾಯುಯಾನಕ್ಕೆ ಮರಳಿದ್ದಾರೆ. 58318 ಮಂದಿ ತಮ್ಮ ಗಮ್ಯತಾಣಗಳಿಗೆ ಮೊದಲ ದಿನ ಯಾನ ಕೈಗೊಂಡಿದ್ದಾರೆ” ಎಂದು ಪುರಿ ಟ್ವಿಟ್ಟರ್ನಲ್ಲಿ ಮಂಗಳವಾರ ಮಧ್ಯಾಹ್ನ ಹೇಳಿದ್ದಾರೆ.
ಸಚಿವರು ಪರಿಷ್ಕರಿಸಿದ 832 ವಿಮಾನಗಳ ಅಂಕಿ ಸಂಖ್ಯೆಯಲ್ಲಿ ವಂದೇ ಭಾರತ್ ಮಿಷನ್ ವಿಮಾನಗಳು ಸೇರಿವೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
Next Story