Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹಿಮ್ಮುಖ ನಡಿಗೆಯ ದೈಹಿಕ ಮತ್ತು ಮಾನಸಿಕ...

ಹಿಮ್ಮುಖ ನಡಿಗೆಯ ದೈಹಿಕ ಮತ್ತು ಮಾನಸಿಕ ಆರೋಗ್ಯಲಾಭಗಳು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ27 May 2020 10:30 PM IST
share
ಹಿಮ್ಮುಖ ನಡಿಗೆಯ ದೈಹಿಕ ಮತ್ತು ಮಾನಸಿಕ ಆರೋಗ್ಯಲಾಭಗಳು ಗೊತ್ತೇ?

ಅತ್ಯಂತ ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ವ್ಯಾಯಾಮವೇನಾದರೂ ಇದ್ದರೆ ಅದು ಖಂಡಿತವಾಗಿಯೂ ವಾಕಿಂಗ್ ಅಥವಾ ನಡಿಗೆ. ಈ ಸರಳ ಚಟುವಟಿಕೆಯು ನೀಡುವ ಅದ್ಭುತ ಆರೋಗ್ಯಲಾಭಗಳು ನಿಯಮಿತವಾಗಿ ವಾಕಿಂಗ್ ಮಾಡುವವರಿಗೆ ಮಾತ್ರ ಗೊತ್ತು. ಆದರೆ ಈ ಲೇಖನವು ಮಾಮೂಲು ವಾಕಿಂಗ್ ಕುರಿತಲ್ಲ, ಇದು ರಿವರ್ಸ್ ವಾಕಿಂಗ್ ಅಥವಾ ಹಿಮ್ಮುಖ ನಡಿಗೆಯ ಕುರಿತಾಗಿದೆ. ಹಿಮ್ಮುಖ ನಡಿಗೆಯ ಆರೋಗ್ಯಲಾಭಗಳನ್ನು ವಿಜ್ಞಾನವೂ ಬೆಂಬಲಿಸಿದೆ. ಹಿಮ್ಮುಖ ಹೆಜ್ಜೆಗಳನ್ನು ಹಾಕುವುದು ಮನಸ್ಸು ಮತ್ತು ಶರೀರದ ಸರ್ವಾಂಗೀಣ ಆರೋಗ್ಯಕ್ಕೆ ಪೂರಕವಾಗಿದೆ. ಇದರ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ....

* ಕಾಲುಗಳ ಬಲವನ್ನು ಹೆಚ್ಚಿಸುತ್ತದೆ

ಕಾಲುಗಳ ಮುಂಭಾಗ ಮತ್ತು ಹಿಂಭಾಗ ಹೀಗೆ ಎರಡೂ ಕಡೆಗಳಲ್ಲಿ ಸ್ನಾಯುಗಳಿವೆ. ಸಾಮಾನ್ಯವಾಗಿ ನಾವು ಮುಂದಕ್ಕೆ ನಡೆಯುವುದರಿಂದ ಮುಂಭಾಗದ ಸ್ನಾಯುಗಳಿಗೆ ವ್ಯಾಯಾಮವು ದೊರೆಯುತ್ತದೆ. ಹಿಮ್ಮುಖ ನಡಿಗೆಯು ಹಿಂಭಾಗದ ಸ್ನಾಯುಗಳಿಗೆ ವ್ಯಾಯಾಮವನ್ನು ನೀಡುತ್ತದೆ ಮತ್ತು ಇದು ಕಾಲುಗಳ ಶಕ್ತಿ ಹೆಚ್ಚಲು ಮತ್ತು ಅವುಗಳನ್ನು ಸದೃಢಗೊಳಿಸಲು ನೆರವಾಗುತ್ತದೆ.

* ಮಂಡಿ ನೋವನ್ನು ಶಮನಿಸುತ್ತದೆ

ಮಂಡಿಗೆ ಪೆಟ್ಟು ಬಿದ್ದಾಗ ಅಥವಾ ಮಂಡಿ ನೋವು ವ್ಯಕ್ತಿಗೆ ನಡೆದಾಡುವುದನ್ನು ಕಷ್ಟವಾಗಿಸುತ್ತದೆ. ಮಂಡಿಯ ಕೀಲುಗಳ ಮೇಲಿನ ಒತ್ತಡವನ್ನು ತಗ್ಗಿಸುವುದು ಹಿಮ್ಮುಖ ನಡಿಗೆ ವ್ಯಾಯಾಮದ ಲಾಭಗಳಲ್ಲೊಂದಾಗಿದೆ. ಹಿಮ್ಮುಖ ನಡಿಗೆಯು ಮಂಡಿ ಪುನಃಶ್ಚೇತನವನ್ನು ಉತ್ತೇಜಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಂಡಿ ಸಮಸ್ಯೆಗಳಿರುವ ಜನರು ಮಂಡಿಗಳ ಮೇಲೆ ಯಾವುದೇ ಒತ್ತಡವನ್ನು ಹೇರದೆ ಅವುಗಳನ್ನು ಬಲಗೊಳಿಸುವ ಈ ವ್ಯಾಯಾಮವನ್ನು ಮಾಡಬಹುದು.

*ಶರೀರದ ಸಮನ್ವಯತೆಯನ್ನು ಹೆಚ್ಚಿಸುತ್ತದೆ

 ಹಿಮ್ಮುಖ ನಡಿಗೆಯು ದೈಹಿಕ ಆರೋಗ್ಯ ಮತ್ತು ಶರೀರದ ಉತ್ತಮ ಸಮನ್ವಯಕ್ಕೆ ಪೂರಕವಾಗಿದೆ. ಹಿಮ್ಮುಖವಾಗಿ ನಡೆಯುವ ಮೂಲಕ ನಾವು ಚಲನೆಗೆ ವಿರುದ್ಧವಾಗಿ ಸಾಗುವುದರಿಂದ ಅದು ಶರೀರವು ತನ್ನ ಸಮನ್ವಯ ಅಥವಾ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಸವಾಲೊಡ್ಡುತ್ತದೆ. ನಮ್ಮ ಮನಸ್ಸು ಕ್ರಿಯಾಶೀಲಗೊಂಡು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡಲು ನಮಗೆ ಮಾರ್ಗದರ್ಶನ ನೀಡುತ್ತಿರುತ್ತದೆ,ಇದು ಹಿಮ್ಮುಖ ನಡಿಗೆಯ ಮಾನಸಿಕ ಆರೋಗ್ಯ ಲಾಭವನ್ನು ಸೂಚಿಸುತ್ತದೆ.

*ಚಿಕಿತ್ಸಕ ಲಾಭಗಳು

 ಹಿಮ್ಮುಖ ನಡಿಗೆಯು ಒತ್ತಡವನ್ನು ನಿವಾರಿಸುವ ಸಂತೋಷದ ಹಾರ್ಮೋನ್‌ಗಳನ್ನು ಮಿದುಳಿನಲ್ಲಿ ಬಿಡುಗಡೆಗೊಳಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅವು ಒತ್ತಡದ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುವಂತೆ ನಮ್ಮ ಇಂದ್ರಿಯಗಳನ್ನು ಶಾಂತಗೊಳಿಸುತ್ತದೆ.

* ಬೆನ್ನುನೋವನ್ನು ತಡೆಯುತ್ತದೆ

 ಕಳಪೆ ನಮ್ಯತೆಯು ಶರೀರದಲ್ಲಿನ ವಿವಿಧ ನೋವುಗಳಿಗೆ,ವಿಶೇಷವಾಗಿ ಬೆನ್ನುನೋವಿನ ಹಿಂದಿನ ನಿಜವಾದ ಕಾರಣವಾಗಿದೆ. ನಮ್ಮ ಮಂಡಿರಜ್ಜುಗಳು ನಮ್ಯತೆಯನ್ನು ಹೊಂದಿರದಿದ್ದರೆ ಕೆಳಬೆನ್ನು ನೋವಿನಿಂದ ನರಳುವ ಸಾಧ್ಯತೆಯು ಅತ್ಯಂತ ಹೆಚ್ಚಾಗಿರುತ್ತದೆ. ಪ್ರತಿದಿನ ಕನಿಷ್ಠ 15-20 ನಿಮಿಷಗಳ ಕಾಲ ಹಿಮ್ಮುಖ ನಡಿಗೆಯು ಮಂಡಿರಜ್ಜುಗಳ ನಮ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಬೆನ್ನುನೋವಿನ ಸಮಸ್ಯೆಗಳನ್ನು ತಡೆಯುತ್ತದೆ.

ಗಮನಿಸಬೇಕಾದ ಮುಖ್ಯ ಅಂಶಗಳು

ಹಿಮ್ಮುಖ ನಡಿಗೆಯನ್ನು ಆರಂಭಿಸುವ ಮುನ್ನ ಕೆಲವೊಂದು ಎಚ್ಚರಿಕೆಗಳನ್ನು ವಹಿಸುವುದು ಅಗತ್ಯವಾಗುತ್ತದೆ. ನೀವು ಹೊರಾಂಗಣದಲ್ಲಿ ಈ ವ್ಯಾಯಾಮವನ್ನು ಮಾಡುತ್ತಿದ್ದರೆ ನಿಮ್ಮ ಹಿಂದೆ ಯಾರಾದರೂ ಇದ್ದಾರೆಯೇ ಎನ್ನುವುದನ್ನು ಗಮನಿಸುತ್ತಿರಿ,ಇಲ್ಲದಿದ್ದರೆ ನಿಮ್ಮ ಹಿಂದಿರುವವರಿಗೆ ಢಿಕ್ಕಿ ಹೊಡೆದು ಅಧ್ವಾನವಾಗಬಹುದು. ನಿಮ್ಮ ಹಿಮ್ಮಡಿಗಳಿಗೆ ಸರಿಯಾಗಿ ಹೊಂದಿಕೆಯಾಗುವ ಮತ್ತು ಹಿಡಿತವನ್ನು ಕಾಯ್ದುಕೊಳ್ಳುವ ಶೂಗಳನ್ನೇ ಧರಿಸಿ. ಒಳಾಂಗಣದಲ್ಲಿ ಈ ವ್ಯಾಯಾಮ ಮಾಡುತ್ತಿದ್ದರೆ ಫರ್ನಿಚರ್,ಸಾಕುಪ್ರಾಣಿ ಇತ್ಯಾದಿಗಳಿಲ್ಲದ ಮುಕ್ತ ಸ್ಥಳದಲ್ಲಿ ಮಾಡಿ.ಟ್ರೆಡ್‌ಮಿಲ್‌ನಲ್ಲಿ ಈ ವ್ಯಾಯಾಮ ಮಾಡುವುದಿದ್ದರೆ ವೇಗವನ್ನು ಕಡಿಮೆಯಿಡಿ.

 ಉತ್ತಮ ಫಲಿತಾಂಶಗಳಿಗಾಗಿ ನೀವು ಹಿಮ್ಮುಖ ನಡಿಗೆಯ ಜೊತೆಗೆ ಮಾಮೂಲು ವಾಕಿಂಗ್‌ನ್ನೂ ಸೇರಿಸಿಕೊಳ್ಳಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X