ಭಾರತದಲ್ಲಿ ಸತತ ಏಳನೇ ದಿನ 6,000ಕ್ಕೂ ಅಧಿಕ ಕೊರೋನ ವೈರಸ್ ಪ್ರಕರಣ ಪತ್ತೆ
ಹೊಸದಿಲ್ಲಿ, ಮೇ 28: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6.566 ನೊವೆಲ್ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸತತ ಏಳನೇ ದಿನ 6,000ಕ್ಕೂ ಅಧಿಕ ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 194 ಜನರು ಸಾವನ್ನಪ್ಪಿದ್ದಾರೆ. ಕೋವಿಡ್-19 ಆರ್ಭಟ ಕಾಣಿಸಿಕೊಂಡ ಬಳಿಕ ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ಗರಿಷ್ಠ ಸಾವಿನ ಸಂಖ್ಯೆ ಇದಾಗಿದೆ.
ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 1,58,333ಕ್ಕೆ ತಲುಪಿದೆ. ಒಟ್ಟು 4,531 ಜನರು ಸಾವನ್ನಪ್ಪಿದ್ದಾರೆ. 67,692 ಜನರು ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಗುರುವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿ-ಅಂಶದಿಂದ ತಿಳಿದುಬಂದಿದೆ.
Next Story