ಅಮೆರಿಕ: 24 ತಾಸುಗಳಲ್ಲಿ 1,297 ಸಾವು

ವಾಶಿಂಗ್ಟನ್, ಮೇ 29: ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ ಗುರುವಾರ 1,297 ಸಾವುಗಳು ಸಂಭವಿಸಿವೆ. ಇದರೊಂದಿಗೆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 1,01,573ಕ್ಕೆ ಏರಿದೆ ಎಂದು ಬಾಲ್ಟಿಮೋರ್‌ನ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯವು ಕಲೆ ಹಾಕಿದ ಅಂಕಿಅಂಶಗಳು ತಿಳಿಸಿವೆ.
ಈ ವಾರದ ಆದಿ ಭಾಗದಲ್ಲಿ ಅಲ್ಲಿ ಕೊರೋನ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು ಜನರಲ್ಲಿ ಆಶಾಭಾವವನ್ನು ಹುಟ್ಟಿಸಿತ್ತು. ಅಲ್ಲಿ ಹಲವು ದಿನಗಳಲ್ಲಿ ಒಂದು ದಿನದ ಅವಧಿಯಲ್ಲಿ ಸಾವಿರಕ್ಕಿಂತಲೂ ಕಡಿಮೆ ಸಾವುಗಳು ವರದಿಯಾಗಿದ್ದವು. ಈಗ ಮತ್ತೆ ಸಾವಿನ ಸಂಖ್ಯೆ ಸಾವಿರವನ್ನು ದಾಟಿದೆ.
ಅಮೆರಿಕವು ನೋವೆಲ್-ಕೊರೋನ ವೈರಸ್‌ನ ಭೀಕರ ದಾಳಿಗೆ ಒಳಗಾಗಿದ್ದು, ಸಾವು ಮತ್ತು ಸೋಂಕು ಪ್ರಕರಣಗಳ ಜಾಗತಿಕ ಪಟ್ಟಿಯಲ್ಲಿ ಅದು ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಒಟ್ಟು 17,20,613 ಸೋಂಕು ಪ್ರಕರಣಗಳು ಅಧಿಕೃತವಾಗಿ ವರದಿಯಾಗಿವೆ.
Next Story





