ಸೌದಿ: ರವಿವಾರದಿಂದ ಮಸ್ಜಿದುನ್ನಬವಿ ಶ್ರದ್ಧಾಳುಗಳಿಗೆ ಮುಕ್ತ
ರಿಯಾದ್ (ಸೌದಿ ಅರೇಬಿಯ), ಮೇ 30: ಮದೀನಾದಲ್ಲಿರುವ ಮಸ್ಜಿದುನ್ನಬವಿ ರವಿವಾರದಿಂದ ಹಂತ ಹಂತವಾಗಿ ಶ್ರದ್ಧಾಳುಗಳಿಗೆ ತೆರೆಯಲಾಗುವುದು ಎಂದು ಸೌದಿ ಅರೇಬಿಯ ಘೋಷಿಸಿದೆ.
ಕೊರೋನ ವೈರಸ್ ಹಿನ್ನೆಲೆಯಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಸಡಿಲಿಸುವ ಸೌದಿ ಅರೇಬಿಯದ ಯೋಜನೆಯ ಭಾಗವಾಗಿ, ಮದೀನಾದಲ್ಲಿರುವ ಪ್ರವಾದಿ ಮಸೀದಿಯನ್ನು ಸಾರ್ವಜನಿಕರಿಗೆ ಹಂತ ಹಂತವಾಗಿ ತೆರೆಯುವುದಕ್ಕೆ ದೊರೆ ಸಲ್ಮಾನ್ ಅನುಮತಿ ನೀಡಿದ್ದಾರೆ ಎಂದು ಸೌದಿ ಗಝೆಟ್ನಲ್ಲಿ ಪ್ರಕಟಗೊಂಡಿರುವ ವರದಿಯೊಂದು ತಿಳಿಸಿದೆ.
ರವಿವಾರ ಬೆಳಗ್ಗಿನ ಫಜ್ರ್ ನಮಾಝಿನ ಅವಧಿಯಿಂದ ಶ್ರದ್ಧಾಳುಗಳಿಗೆ ಮಸೀದಿಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಆದರೆ, ಮಸೀದಿಯ ಸಾಮರ್ಥ್ಯದ 40 ಶೇಕಡದಷ್ಟು ಮಂದಿಗೆ ಮಾತ್ರ ಅವಕಾಶವಿದೆ ಎಂದು ವರದಿ ತಿಳಿಸಿದೆ.
Next Story