Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರಾವಳಿಯ ಮೀನುಗಾರರನ್ನು ಬೆಂಬಿಡದೆ ಕಾಡುವ...

ಕರಾವಳಿಯ ಮೀನುಗಾರರನ್ನು ಬೆಂಬಿಡದೆ ಕಾಡುವ ಪ್ರಾಕೃತಿಕ ಏರುಪೇರು : ಜೂ.4ರವರೆಗೆ ಮೀನುಗಾರಿಕೆ ನಡೆಸದಂತೆ ಮುನ್ನೆಚ್ಚರಿಕೆ

ಮೀನುಗಾರಿಕಾ ಅವಧಿ ಪರಿಷ್ಕರಿಸಲ್ಪಟ್ಟರೂ ಮತ್ತೆ ಚಂಡಮಾರುತದ ಭೀತಿ

ಹಂಝ ಮಲಾರ್ಹಂಝ ಮಲಾರ್31 May 2020 10:48 PM IST
share
ಕರಾವಳಿಯ ಮೀನುಗಾರರನ್ನು ಬೆಂಬಿಡದೆ ಕಾಡುವ ಪ್ರಾಕೃತಿಕ ಏರುಪೇರು : ಜೂ.4ರವರೆಗೆ ಮೀನುಗಾರಿಕೆ ನಡೆಸದಂತೆ ಮುನ್ನೆಚ್ಚರಿಕೆ

ಮಂಗಳೂರು, ಮೇ 31: ಎಲ್ಲವೂ ಕರಾರುವಕ್ಕಾಗಿದ್ದರೆ ಈ ವರ್ಷದ ಜೂ.1ರಿಂದ (ಸೋಮವಾರ) ಜುಲೈ 31ರವರೆಗೆ ಮೀನುಗಾರಿಕೆಗೆ ರಜೆ ಸಾರಲಾಗುತ್ತಿತ್ತು. ಆದರೆ ಬೆಂಬಿಡದೆ ಕಾಡುವ ಪ್ರಾಕೃತಿಕ ವಿಕೋಪ ಅಥವಾ ಏರುಪೇರು ಮೀನುಗಾರರ ಎಲ್ಲಾ ಲೆಕ್ಕಾಚಾರವನ್ನೇ ಬುಡಮೇಲು ಮಾಡಿವೆ.

ವಿಶ್ವವನ್ನೇ ನಡುಗಿಸಿದ ಕೊರೋನ ಸೋಂಕು ರೋಗದ ನಿಗ್ರಹಕ್ಕಾಗಿ ಮಾ.22ರಿಂದ ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಯಿತು. ಮಾರ್ಚ್ ಮತ್ತು ಎಪ್ರಿಲ್ ಆರ್ಥಿಕ ವರ್ಷದ ಕೊನೆಯ ಮತ್ತು ಮೊದಲ ತಿಂಗಳಾದ ಕಾರಣ ಎಲ್ಲೆಡೆ ಲಾಭ ನಷ್ಟದ ಲೆಕ್ಕಾಚಾರ ನಡೆಯುವುದು ಸಾಮಾನ್ಯ ವಾಗಿತ್ತು. ಆದರೆ ಕೊರೋನ ಮತ್ತು ಲಾಕ್‌ಡೌನ್ ಎಲ್ಲದರ ಮೇಲೂ ಒಂದಲ್ಲೊಂದು ರೀತಿಯ ಪರಿಣಾಮ ಬೀರಿತು. ಅತೀ ಹೆಚ್ಚು ಮೀನಿನ ಸಂಗ್ರಹ ಮತ್ತು ರಫ್ತಿನ ಸಂದರ್ಭದಲ್ಲೇ ಈ ಲಾಕ್‌ಡೌನ್ ವಿಧಿಸಲ್ಪಟ್ಟ ಕಾರಣ ಮೀನುಗಾರಿಕೆಯ ಮೇಲೆ ಅಗಾಧ ಪರಿಣಾಮ ಬೀರಿತು.

ಕಳೆದ ವರ್ಷ ಚಂಡಮಾರುತ ಸುಳಿಗೆ ಮೀನುಗಾರಿಕೆಯು ಸಿಲುಕಿತ್ತು. ಅಂದರೆ ಓಖಿ, ಕ್ಯಾರ್, ಮಹಾ ಸಹಿತ ಹಲವು ಹೆಸರಿನ ಚಂಡಮಾರುತವು ಮೀನುಗಾರರ ಬದುಕನ್ನೇ ಕಸಿದಿತ್ತು. ಈ ಬಾರಿ ಕೊರೋನ ಸೋಂಕು ರೋಗವು ಮೀನುಗಾರರನ್ನು ಹಿಂಡಿ ಹಿಪ್ಪೆ ಮಾಡಿವೆ. ಲಾಕ್‌ಡೌನ್‌ ನಿಂದಾಗಿ ಸುಮಾರು 50 ದಿನಗಳ ಕಾಲ ಮೀನುಗಾರಿಕೆ ಮೇಲೆ ಹೊಡೆತ ಬಿದ್ದಿವೆ. ಆ ಬಳಿಕ ಮೀನುಗಾರಿಕೆಗೆ ಷರತ್ತುಬದ್ಧ ಅವಕಾಶ ಸಿಕ್ಕರೂ ಕೂಡ ಆಗಲೇ ತಮಿಳ್ನಾಡು, ಕೇರಳ ಹಾಗೂ ಉತ್ತರ ಭಾರತದ ವಿವಿಧ ರಾಜ್ಯಗಳ ಕಾರ್ಮಿಕರು ಕರಾವಳಿ ಬಿಟ್ಟು ಸ್ವಗ್ರಾಮದತ್ತ ಪಯಣ ಬೆಳೆಸಿದ್ದರು. ಹಾಗಾಗಿ ಮೀನುಗಾರಿಕೆ ನಡೆಸಲು ಕಾರ್ಮಿಕರ ಕೊರತೆಯು ಮಾಲಕರಿಗೆ ಎದುರಾಯಿತು.

ಅವಧಿಗೆ ಮುನ್ನವೇ ಮೀನುಗಾರಿಕಾ ಚಟುಚಟಿಕೆ ಸ್ಥಗಿತಗೊಂಡರೂ ಕೂಡ ಆವರೆಗೆ ಸಿಕ್ಕ ಮೀನಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿತ್ತು. ಆದರೆ, ಬೇರೆ ಬೇರೆ ಕಾರಣದಿಂದ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ.  ಕಳೆದ ವರ್ಷದ ಮೇಯಲ್ಲಿ ‘ಸಾಗರ್’ ಚಂಡಮಾರುತದ ಪರಿಣಾಮ ಕರಾವಳಿ ತೀರದಲ್ಲಿ ಭಾರೀ ಗಾಳಿ-ಮಳೆಯಾಗಿತ್ತು. ಬಳಿಕ ‘ಮೆಕುನು’ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿ ಒಮನ್ ದೇಶದಲ್ಲಿ ಸಾಕಷ್ಟು ನಷ್ಟ-ಹಾನಿಯುಂಟು ಮಾಡಿತ್ತು. ಎಪ್ರಿಲ್‌ನಲ್ಲಿ ಬಂಗಾಲ ಕೊಲ್ಲಿಯಲ್ಲಿ ರೂಪುಗೊಂಡ ‘ಫೋನಿ’ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಉತ್ತಮ ಮಳೆಯಾಗಿತ್ತು. ಹಾಗೇ ಜೂನ್‌ನಲ್ಲೂ ಚಂಡಮಾರುತವು ಕರಾವಳಿಯ ಮೇಲೆ ಪರಿಣಾಮ ಬೀರಿತ್ತು. ನಂತರ ‘ಕ್ಯಾರ್’ ಮತ್ತು ‘ಮಹಾ’ ಚಂಡಮಾರುತ ಕರಾವಳಿಗರಲ್ಲಿ ಭೀತಿ ಸೃಷ್ಟಿಸಿತು.

ಇವೆಲ್ಲದರ ಮಧ್ಯೆ ಕಳೆದ ವರ್ಷ ವಾಡಿಕೆಯಂತೆ ಆಗಸ್ಟ್ 1ರಿಂದ ಮೀನುಗಾರಿಕೆ ಆರಂಭವಾದರೂ ಕೂಡ ಫೀಶ್‌ಮಿಲ್‌ಗಳ ಮುಷ್ಕರದಿಂದ ಮೀನುಗಾರರು ಭಾರೀ ನಷ್ಟ ಅನುಭವಿಸುವಂತಾಯಿತು. ಹೀಗೆ ಒಂದಲ್ಲೊಂದು ಚಂಡಮಾರುತ ಮತ್ತು ಮುಷ್ಕರದಿಂದ ಮೀನುಗಾರರು ಹೈರಾಣಾಗಿದ್ದರು. ಕಳೆದ ಅಕ್ಟೋಬರ್ ಬಳಿಕ ಮೀನುಗಾರಿಕೆ ಚುರುಕು ಪಡೆಯಿತು. ಡಿಸೆಂಬರ್‌ವರೆಗೆ ಇದು ಮುಂದುವರಿಯಿತು. ಆದರೆ ಮೀನುಗಳು ಆಳಸಮುದ್ರಕ್ಕೆ ಸೇರಿದ್ದರಿಂದ ಫೆಬ್ರವರಿಯಲ್ಲಿ ಬಲೆಗೆ ಬೀಳುವ ಮೀನುಗಳ ಪ್ರಮಾಣವೂ ಕಡಿಮೆಯಾಯಿತು. ಅಷ್ಟರಲ್ಲೇ ಕೊರೋನ ವೈರಸ್-ಲಾಕ್‌ಡೌನ್ ಕರಾವಳಿಯ ಮೀನುಗಾರಿಕೆಯು ಪಾತಾಳಕ್ಕೆ ಕುಸಿಯುವಂತೆ ಮಾಡಿದೆ.

ಎರಡು ವಾರ ವಿಸ್ತರಣೆಗೊಂಡರೂ...

ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ 1986ರ ಅನ್ವಯ ಕೋವಿಡ್-19 ಮತ್ತು ಲಾಕ್‌ಡೌನ್ ಹಿನ್ನಲೆಯಲ್ಲಿ ಮೀನುಗಾರಿಕೆ ನಿಷೇಧ ಅವಧಿಯನ್ನು ಪರಿಷ್ಕರಿಸಿದೆ. ಅಂದರೆ ಜೂ.14ರವರೆಗೆ ಮೀನುಗಾರಿಕೆ ನಡೆಸಲು ಸರಕಾರ ಅನುಮತಿ ನೀಡಿದೆ. ಆ ಬಳಿಕ ಜೂ.15ರಿಂದ ಜು.31ರವರೆಗೆ (47 ದಿನಗಳ ಕಾಲ) ಮೀನುಗಾರಿಕೆ ನಿಷೇಧಿಸಿದೆ.

ಜೂ.14ರವರೆಗೆ ಮೀನುಗಾರಿಕೆ ನಡೆಸಲು ಅವಕಾಶ ಸಿಕ್ಕರೂ ಕೂಡ ವಾಯುಭಾರ ಕುಸಿತವು ಮತ್ತೆ ಮೀನುಗಾರಿಕೆ ಮೇಲೆ ಪರಿಣಾಮ ಬೀರಿದೆ. ಅಂದರೆ ಜೂ.4ರವರೆಗೆ ಮೀನುಗಾರಿಕೆ ನಡೆಸದಂತೆ ಮೀನುಗಾರಿಕಾ ಇಲಾಕೆ ಎಚ್ಚರಿಕೆ ನೀಡಿದೆ. ಅರಬ್ಬಿ ಸಮುದ್ರದ ಆಗ್ನೇಯ ಮತ್ತದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಭಾರ ಕುಸಿತವಾಗುವ ಸಂಭವವಿದೆ. ಇದರಿಂದ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಹಾಗಾಗಿ ಸಂಭಾವ್ಯ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕಾ ದೋಣಿಗಳು ಕೂಡಲೇ ದಡ ಸೇರುವಂತೆ ಸೂಚನೆ ನೀಡಿದೆ.

ಉತ್ಪಾದನೆ ಹೆಚ್ಚು: ಇಲಾಖೆಯ ಅಂಕಿ-ಅಂಶದ ಪ್ರಕಾರ ದ.ಕ.ಜಿಲ್ಲೆಯಲ್ಲಿ ಸುಮಾರು 8 ವರ್ಷಗಳಿಗೆ ಹೋಲಿಸಿದರೆ 2019-20ರ ಅವಧಿಯಲ್ಲಿ ಮಾರ್ಚ್‌ವರೆಗೆ 1,71,692 ಟನ್ ಮೀನು ದೊರಕಿದೆ. ವರ್ಷ ಮೀನಿನ ಪ್ರಮಾಣ ಮೌಲ್ಯ (ಕೋ.ರೂ.ಗಳಲ್ಲಿ)

 2013-14; 1.48 ಲಕ್ಷ ಟನ್- 827
 2014-15; 1.50 ಲಕ್ಷ ಟನ್-1,075
 2015-16; 1.45 ಲಕ್ಷ ಟನ್- 1,370
 2016-17; 1.52 ಲಕ್ಷ ಟನ್- 1,582
 2017-18; 1.63 ಲಕ್ಷ ಟನ್- 1,656
  2018-19; 1.59 ಲಕ್ಷ ಟನ್- 1,716
 2019-20; 1.79 ಲಕ್ಷ ಟನ್ - 2,031
 ಸಾವಿರಾರು ಕಾರ್ಮಿಕರು ಊರುಗಳಿಗೆ ತೆರಳಿಯಾಗಿದೆ. ಕೊರೋನ ಹಾವಳಿ ಮುಗಿಯದೆ ಅವರಿನ್ನು ಬರುವುದು ಕಷ್ಟ. ಒಟ್ಟಿನಲ್ಲಿ ಈ ಬಾರಿಯ ಮೀನುಗಾರಿಕೆಯು ಅನಿರೀಕ್ಷಿತ ಪರಿಣಾಮ ಬೀರಿದೆ. ಇದರಿಂದ ಚೇತರಿಸಿಕೊಳ್ಳುವುದು ಕಷ್ಟ ಎಂಬಂತಾಗಿದೆ.
- ನಿತಿನ್ ಕುಮಾರ್, ಮಾಜಿ ಅಧ್ಯಕ್ಷರು
ರಾಜ್ಯ ಮೀನುಗಾರಿಕಾ ಅಭಿವೃದ್ದಿ ನಿಗಮ

ಹಮಾಮಾನ ವೈಪರಿತ್ಯ, ಜನತಾ ಕರ್ಫ್ಯೂ, ಲಾಕ್‌ಡೌನ್, ಕೊರೋನ ಹೀಗೆ ಎಲ್ಲವೂ ಮೀನುಗಾರಿಕೆಗೆ ಅಪಾರ ಹೊಡೆತ ನೀಡಿದೆ. ಇದೀಗ ಅಂಫಾನ್ ಚಂಡಮಾರುತವು ಮೀನುಗಾರರನ್ನು ಹೈರಾಣಾಗಿಸಿದೆ.
- ಅಲಿ ಹಸನ್, ಅಧ್ಯಕ್ಷರು
ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ

share
ಹಂಝ ಮಲಾರ್
ಹಂಝ ಮಲಾರ್
Next Story
X