Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭೀಮ್ ಆ್ಯಪ್‌ನಿಂದ ಮಾಹಿತಿ ಸೋರಿಕೆ: 70...

ಭೀಮ್ ಆ್ಯಪ್‌ನಿಂದ ಮಾಹಿತಿ ಸೋರಿಕೆ: 70 ಲಕ್ಷ ಭಾರತೀಯರ ವಿವರ ಬಹಿರಂಗ; ವರದಿ

ವರದಿ ನಿರಾಕರಿಸಿದ ಎನ್ ಪಿಸಿಐ

ವಾರ್ತಾಭಾರತಿವಾರ್ತಾಭಾರತಿ1 Jun 2020 10:19 PM IST
share
ಭೀಮ್ ಆ್ಯಪ್‌ನಿಂದ ಮಾಹಿತಿ ಸೋರಿಕೆ: 70 ಲಕ್ಷ ಭಾರತೀಯರ ವಿವರ ಬಹಿರಂಗ; ವರದಿ

ಹೊಸದಿಲ್ಲಿ,ಜೂ.1: ಮೊಬೈಲ್ ಪಾವತಿ ಆ್ಯಪ್ ‘ಭೀಮ್’ ಅನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದು,70 ಲಕ್ಷಕ್ಕೂ ಅಧಿಕ ಭಾರತೀಯರ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳು ಬಹಿರಂಗಗೊಂಡಿವೆ ಎಂದು ಆನ್‌ಲೈನ್ ಪೋರ್ಟಲ್ ‘ವಿಪಿಎನ್‌ಮೆಂಟರ್’ ವರದಿ ಮಾಡಿದೆ.

   ಬಹಿರಂಗಗೊಂಡ ಮಾಹಿತಿಗಳಲ್ಲಿ ಆ್ಯಪ್‌ಗೆ ಸೈನ್ ಅಪ್ ಆಗಲು ಅಗತ್ಯವಾಗಿರುವ ಹಣಕಾಸು ವಿವರಗಳು, ಚಿತ್ರಗಳು, ಆಧಾರ್ ಮತ್ತು ಪಾನ್ ಕಾರ್ಡ್ ವಿವರ ಇತ್ಯಾದಿಗಳು ಸೇರಿವೆ. ಅಗಾಧ ಪ್ರಮಾಣದಲ್ಲಿ ಮಾಹಿತಿಗಳು ಬಯಲಾಗಿದ್ದು, ಭಾರತದಾದ್ಯಂತ ಲಕ್ಷಾಂತರ ಜನರನ್ನು ಹ್ಯಾಕರ್‌ಗಳು ಮತ್ತು ಸೈಬರ್ ಕ್ರಿಮಿನಲ್‌ಗಳಿಂದ ವಂಚನೆ, ಕಳ್ಳತನ ಮತ್ತು ದಾಳಿಗೆ ಒಳಗೊಳಗಾಗುವ ಅಪಾಯಕ್ಕೆ ತಳ್ಳಿದೆ ಎಂದು ಅದು ಹೇಳಿದೆ. ಆದರೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ)ವು ಇದನ್ನು ತಳ್ಳಿಹಾಕಿದೆ.

ವಿಪಿಎನ್‌ಮೆಂಟರ್ ತನ್ನ ವರದಿಯಲ್ಲಿ ತಿಳಿಸಿರುವಂತೆ ಎಪ್ರಿಲ್‌ನಲ್ಲಿ ಡಾಟಾ ಉಲ್ಲಂಘನೆಯನ್ನು ಗಮನಿಸಿದ ಬಳಿಕ ಶೋಧ ತಂಡವು ಭೀಮ್ ವೆಬ್‌ಸೈಟ್ (www.cscbhim.in)ನ ಹಿಂದಿರುವ ಸಿಎಸ್‌ಸಿ ಇ-ಗವರ್ನನ್ಸ್‌ನ ಡೆವಲಪರ್‌ಗಳನ್ನು ಸಂಪರ್ಕಿಸಿತ್ತು. ಆದರೆ ಅವರಿಂದ ಯಾವುದೇ ಉತ್ತರ ದೊರೆಯದಿದ್ದಾಗ ಕಂಪ್ಯೂಟರ್ ಎಮರ್ಜರ್ನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್)ಗೆ ಮೇಲ್ ಮಾಡಿತ್ತು. ಮೇ 22ರಂದು ಇನ್ನೊಮ್ಮೆ ಮೇಲ್ ಮಾಡಿದ ಬಳಿಕ ಸಿಇಆರ್‌ಟಿ-ಇನ್ ಸೋರಿಕೆಯನ್ನು ಮುಚ್ಚಿತ್ತು.

409 ಗಿಗಾಬೈಟ್‌ಗಳಷ್ಟು ಮಾಹಿತಿಗಳು ಸೋರಿಕೆಯಾಗಿದ್ದು, ಆಧಾರ್ ಕಾರ್ಡ್ ವಿವರಗಳು,ಜಾತಿ ಪ್ರಮಾಣಪತ್ರಗಳು, ವಸತಿ ರುಜುವಾತು ದಾಖಲೆಗಳು,ಬ್ಯಾಂಕ್ ದಾಖಲೆಗಳು ಮತ್ತು ವ್ಯಕ್ತಿಗಳ ಸಂಪೂರ್ಣ ಪ್ರೊಫೈಲ್‌ಗಳು ಇವುಗಳಲ್ಲಿ ಸೇರಿವೆ ಎಂದು ವಿಪಿಎನ್‌ಮೆಂಟರ್ ತನ್ನ ವರದಿಯಲ್ಲಿ ತಿಳಿಸಿದೆ.

ಆದರೆ ಈ ವರದಿಯನ್ನು ತಿರಸ್ಕರಿಸಿರುವ ಎನ್‌ಪಿಸಿಐ, ‘ಭೀಮ್ ಆ್ಯಪ್ ‌ನಲ್ಲಿ ಡಾಟಾ ಉಲ್ಲಂಘನೆ ಕುರಿತು ಕೆಲವು ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಭೀಮ್ ಆ್ಯಪ್‌ನ ಯಾವುದೇ ಡಾಟಾ ಸೋರಿಕೆಯಾಗಿಲ್ಲ ಮತ್ತು ಇಂತಹ ವದಂತಿಗಳನ್ನು ನಂಬದಂತೆ ಪ್ರತಿಯೊಬ್ಬರನ್ನೂ ನಾವು ಕೋರುತ್ತೇವೆ. ಎನ್‌ಪಿಸಿಐ ಗರಿಷ್ಠ ಮಟ್ಟದ ಭದ್ರತೆಯನ್ನು ಪಾಲಿಸುತ್ತಿದೆ ’ ಎಂದು ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X