ವಲಸೆ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡುತ್ತಿರುವ 99 ವರ್ಷದ ವೃದ್ಧೆ
ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದ ವಿಡಿಯೋ
ಹೊಸದಿಲ್ಲಿ: ಕೊರೋನ ವೈರಸ್ ಕಾರಣ ಘೋಷಿಸಲಾದ ಲಾಕ್ ಡೌನ್ ನಿಂದ ಸಾವಿರಾರು ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು, ಹಣವಿಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ಸಿಲುಕಿ ಕಂಗಾಲಾಗಿದ್ದಾರೆ. ಈ ನಡುವೆ 99 ವರ್ಷದ ವೃದ್ಧೆಯೊಬ್ಬರು ಈ ವಲಸೆ ಕಾರ್ಮಿಕರಿಗಾಗಿ ಆಹಾರದ ವ್ಯವಸ್ಥೆ ಮಾಡಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರ ಮನ ಗೆದ್ದಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ 99 ವರ್ಷದ ಅಜ್ಜಿ ಅಲ್ಯುಮಿನಿಯಂ ಫಾಯಿಲ್ ನಲ್ಲಿ ರೋಟಿ ಮತ್ತು ಸಬ್ಝಿಯನ್ನು ಮುಂಬೈಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗಾಗಿ ಪ್ಯಾಕ್ ಮಾಡುತ್ತಿರುವುದು ಕಾಣಿಸುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಝಾಹಿದ್ ಇಬ್ರಾಹೀಂ ಎಂಬವರು, “ಮುಂಬೈಯಲ್ಲಿರುವ ವಲಸೆ ಕಾರ್ಮಿಕರಿಗಾಗಿ 99 ವರ್ಷದ ನನ್ನ ಅತ್ತೆ ಆಹಾರ ಸಿದ್ಧಪಡಿಸುತ್ತಿರುವುದು” ಎಂದು ಬರೆದಿದ್ದಾರೆ. ಝಾಹಿದ್ ಇಬ್ರಾಹೀಂ ಪಾಕಿಸ್ತಾನದ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ.
ಝಾಹಿದ್ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ 99 ವರ್ಷದ ಅಜ್ಜಿಯ ಸೇವೆಯ ಬಗ್ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಸಾವಿರಾರು ಮಂದಿ ಅಜ್ಜಿಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿದ್ದಾರೆ.
My 99 year old phuppi prepares food packets for migrant workers in Bombay. pic.twitter.com/jYQtmJZx8k
— Zahid F. Ebrahim (@zfebrahim) May 29, 2020